ಪಾಕ್, ಇರಾಕ್ ಶಾಲಾ ಪುಸ್ತಕಗಳಲ್ಲಿ 'ಎ' ಫಾರ್ ಎ.ಕೆ.-47, 'ಬಿ' ಫಾರ್ ಬ್ಯಾಟಲ್ !

By: ವಿಕಾಸ್ ನಂಜಪ್ಪ
Subscribe to Oneindia Kannada

ಮೊಸೂಲ್ (ಇರಾಕ್), ಮಾರ್ಚ್ 9: ಐಸ್ಐಎಸ್ ಉಗ್ರ ಸಂಘಟಯ ವಶದಲ್ಲಿರುವ ಇರಾಕ್ ನ ಮೊಸೂಲ್ ಪ್ರಾಂತ್ಯದಲ್ಲಿನ ಹಾಗೂ ಪಾಕಿಸ್ತಾನದ ಕೆಲವಾರು ಮದರಸಾಗಳಲ್ಲಿ ಶಾಲೆಗಳಲ್ಲಿನ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಕೆಲವಾರು ಕುತೂಹಲಕಾರಿ ಸಂಘಟನೆಗಳು ಬಹಿರಂಗಗೊಂಡಿವೆ.

ನಮ್ಮಲ್ಲಿನ ಶಾಲೆಗಳಲ್ಲಿ ಮಕ್ಕಳು ಕಲಿಯೋದು... ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಎಂದಲ್ಲವೇ? ಆದರೆ, ಐಸ್ಐಸ್ ಹಿಡಿತದಲ್ಲಿರುವ ಮಕ್ಕಳು ಕಲಿಯೋ ಪುಸ್ತಕಗಳಲ್ಲಿ ಇರೋದು 'ಎ' ಫಾರ್ ಎ.ಕೆ. -47, 'ಬಿ' ಫಾರ್ ಬ್ಯಾಟಲ್.... ಇಷ್ಟೇ ಅಲ್ಲ, 'ಎಸ್' ಫಾರ್ ಸ್ನೈಪರ್, 'ಡಬ್ಲೂ' ಫಾರ್ ವುಮನ್ ಎಂದು ತಿಳಿಸಲಾಗಿದೆ.

A for AK-47, B for battle in Pak, Iraq's text books for kids

ಮೊಸೂಲ್ ನಲ್ಲಿ ಐಸ್ಐಎಸ್ ಉಗ್ರರ ಹಿಡಿತದಲ್ಲಿದ್ದ ಅನಾಥಾಶ್ರಮವೊಂದನ್ನು ಇರಾಕ್ ನ ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಾಗ ಇಂಥ ಪಠ್ಯ ಪುಸ್ತಕಗಳಿರುವುದು ತಿಳಿದುಬಂದಿದೆ.

ಇಷ್ಟೇ ಅಲ್ಲ, ಪಾಕಿಸ್ತಾನದ ಮದರಸಾಗಳಲ್ಲಿನ ಕೆಲ ಪಠ್ಯ ಪುಸ್ತಕಗಳಲ್ಲಿ 'ಬಿ' ಫಾರ್ ಬಂದೂಕು, 'ಕೆ' ಫಾರ್ ನೈಫ್ (knife- ಚಾಕು), ಟಿ ಫಾರ್ ಟ್ಯಾಂಕ್ ಹಾಗೂ 'ಎಸ್' ಫಾರ್ ಸ್ವೋರ್ಡ್ (ಕತ್ತಿ) ಎಂದು ತಿಳಿಸಲಾಗಿದೆ.

ಇನ್ನು, ಲಷ್ಕರ್-ಎ-ತೊಯ್ಬಾ ನಡೆಸುತ್ತಿದ್ದ ಒಂದು ಮದರಸಾದ ಇತಿಹಾಸ ಪಠ್ಯ ಪುಸ್ತಕದಲ್ಲಿ, ಭಾರತೀಯರನ್ನು ಇಸ್ಲಾಂ ಧರ್ಮ ಹಾಗೂ ಮುಸ್ಲಿಮರ ವಿರೋಧಿಗಳು ಎಂದು ಚಿತ್ರಿಸಲಾಗಿದೆ.

ಈ ಪಠ್ಯದಲ್ಲಿ ಮೊದಲ ಪಾಠ, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ಬಗ್ಗೆಯಿದ್ದು, ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಆಗ ಇದ್ದ ಮುಸ್ಲಿಂಮರನ್ನು ಗುಲಾಮಗಿರಿಗೆ ತಳ್ಳಿತ್ತು. ಭಾರತದಲ್ಲಿನ ಹಿಂದೂಗಳು ಮುಸ್ಲಿಮರನ್ನು ಗುಲಾಮಗಿರಿಗೆ ಒಗ್ಗಿಸಿಕೊಂಡಿದ್ದರು.

ಇದರ ವಿರುದ್ಧ ಸಿಡಿದೆದ್ದ ಜಿನ್ನಾ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಸಂಕಲ್ಪ ತೊಟ್ಟು ಅದರಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A for AK-47, B for battle. This is what an Islamic State book reads. The textbook titled, 'English for the Islamic State, was found at an orphanage in Mosul, Iraq by security forces. ಪಾಕ್, ಇರಾಕ್ ಶಾಲಾ ಪುಸ್ತಕಗಳಲ್ಲಿ 'ಎ' ಫಾರ್ ಎ.ಕೆ.-47, 'ಬಿ' ಫಾರ್ ಬ್ಯಾಟಲ್ !
Please Wait while comments are loading...