ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸ್ ಸಭೆ ಬಳಿಕ ಎಲ್ಲಾ ದೇಶದ ಸದಸ್ಯರಿಂದ ಸಾಮೂಹಿಕ 'ನಮಸ್ತೆ'

|
Google Oneindia Kannada News

ನವದೆಹಲಿ, ಜೂನ್ 01: 2021ನೇ ಸಾಲಿನ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ (BRICS) ಶೃಂಗಸಭೆ ನೇತೃತ್ವ ಭಾರತದ ಹೆಗಲಿಗೆ ಬಿದ್ದಿದ್ದು, ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆ ನಡೆಯಿತು.

Recommended Video

ಭಾರತ ಹೆಗಲಿಗೆ ಬಿದ್ದ BRICS ಶೃಂಗಸಭೆ | Oneindia Kannada

ಸಭೆಯ ಬಳಿಕ ಎಲ್ಲಾ ದೇಶಗಳ ಸದಸ್ಯರು ಕೈಮುಗಿಯುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿದ್ದನ್ನು ನೀವು ನೋಡಬಹುದಾಗಿದೆ.

ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಏಕರೂಪವಾಗಿ ಸಂಬಂಧಿತ ವಿಷಯಗಳ ಕುರಿತು ಚರ್ಚೆ, ವಿಚಾರ ವಿನಿಮಯ ಮೂಲಕ ಸರ್ವಸಮ್ಮತ ಅಭಿಪ್ರಾಯ ಮೂಡಿಸುವುದನ್ನು ತಾನು ಎದುರು ನೋಡುವುದಾಗಿ ಚೀನಾ ಹೇಳಿದೆ.

A Collective Namaste By All Foreign Ministers In BRICS Meeting

ಕೋವಿಡ್ ಬೀರಿರುವ ಒಟ್ಟು ಪರಿಣಾಮ ಹಾಗೂ ಈ ಶತಮಾನದಲ್ಲಿ ಸಂಭವಿಸಿರುವ ಪ್ರಮುಖ ಬದಲಾವಣೆಗಳ ಹಿನ್ನೆಲೆಯಲ್ಲಿ ಬ್ರಿಕ್ಸ್ ವೇದಿಕೆಯುಪರಸ್ಪರ ಸಹಕಾರ ಮೂಡಿಸುವಲ್ಲಿ ಪ್ರಮುಖವಾದುದು. ಮುಖ್ಯವಾಗಿ ಕೋವಿಡ್ ನಂತರದಲ್ಲಿ ಆರ್ಥಿಕ ಚೇತರಿಕೆಗೆ ಇದು ಸಹಕಾರಿ ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಸಭೆ ನಡೆದಿದ್ದು, ಈ ಐದು ರಾಷ್ಟ್ರಗಳ ನಾಯಕರು ಕೋವಿಡ್​ -19, ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವ, ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸುಧಾರಿಸುವ ಅಗತ್ಯತೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಕಾಳಜಿ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಭಾರತವು ಕೊರೊನಾ ಎರಡನೇ ಅಲೆಯ ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬ್ರಿಕ್ಸ್‌ ಸಭೆ ನಡೆಯುತ್ತಿದೆ. ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿಯೂ ಕೊರೊನಾ ಅಬ್ಬರಿಸಿ ಸ್ವಲ್ಪ ತಣ್ಣಗಾಗಿದೆ.

ಕೊರೊನಾ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಬ್ರೆಜಿಲ್​ ಎರಡನೇ ಸ್ಥಾನದಲ್ಲಿದ್ದರೆ, ಅತೀ ಹೆಚ್ಚು ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಚೀನಾದಲ್ಲೆ ಮೊದಲು ವೈರಸ್​ ಪತ್ತೆಯಾಗಿತ್ತಾದರೂ ಕೊರೊನಾದಿಂದ ತ್ವರಿತವಾಗಿ ಹೊರಬಂದಿರುವುದಾಗಿ ಹೇಳಿಕೊಂಡು ಬಂದಿದೆ.

English summary
All foreign ministers (Brazil, Russia, India, China, and South Africa) participating in a meeting of BRICS, did a collective 'namaste' after the meeting concluded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X