ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಲಿಯನ್ಸ್ ಕಾಟ? ಮನೆಗಳನ್ನೇ ನುಂಗಿ ಹಾಕುತ್ತಿದೆ ಬೃಹತ್ ಗುಂಡಿ!

|
Google Oneindia Kannada News

ದೊಡ್ಡ ಗುಂಡಿಯೊಂದು ಮನೆಗಳನ್ನೇ ನುಂಗಿ ಹಾಕುತ್ತಿದೆ, ರಾತ್ರಿ ಕಳೆದು ಬೆಳಗಾಗುವುದರ ಒಳಗೆ ಆ ಗುಂಡಿ ದೊಡ್ಡದಾಗುತ್ತಾ ಸಾಗುತ್ತಿದೆ. ಅಷ್ಟಕ್ಕೂ ಈ ಆಘಾತಕಾರಿ ಘಟನೆ ವರದಿಯಾಗಿರುವುದು ಮೆಕ್ಸಿಕೋ ದೇಶದಲ್ಲಿ. ಮಧ್ಯ ಮೆಕ್ಸಿಕೋದ ಗ್ರಾಮವೊಂದರ ಕೃಷಿ ಭೂಮಿಯಲ್ಲಿ ಇಂತಹ ಬೃಹತ್ ಗಾತ್ರದ ಗುಂಡಿ ಕಾಣಿಸಿಕೊಂಡಿದೆ. ಮೊದಲಿಗೆ ಈ ಗುಂಡಿಯನ್ನ ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.

Recommended Video

Mexico ದಲ್ಲಿ ಭಯಾನಕ ಘಟನೆ !! | Oneindia Kannada

ಆದರೆ ದಿನಕ್ಕೂ ಈ ಗುಂಡಿ ಬೆಳೆಯುತ್ತಾ ಸಾಗಿದೆ. ಸದ್ಯ 370 ಅಡಿ ಅಗಲ, 65 ಅಡಿಗಳಷ್ಟು ಆಳವಿರುವ ಗುಂಡಿ ಒಂದೊಂದೇ ಮನೆಗಳನ್ನು ನುಂಗಿ ಹಾಕುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಗುಂಡಿ ಉಂಟಾಗಿದ್ದು ಹೇಗೆ? ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಅಧಿಕಾರಿಗಳು ಗುಂಡಿ ಬಳಿ ಹೋಗಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಸುತ್ತಮತ್ತಲಿನ ಮನೆಗಳನ್ನೂ ಖಾಲಿ ಮಾಡಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ಗುಂಡಿ ಮತ್ತಷ್ಟು ದೊಡ್ಡದಾಗುವ ಮೊದಲು ಏನಾದರು ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ ಸ್ಥಳೀಯರು.

A big hole central Mexico created fear in locals

ಏಲಿಯನ್ಸ್, ದೆವ್ವಗಳ ಕಾಟ..?
ವಿಚಿತ್ರ ಘಟನೆಗಳು ನಡೆದಾಗ ವಿಚಿತ್ರ ಕಥೆಗಳೂ ಹುಟ್ಟಿಕೊಳ್ಳುತ್ತವೆ. ಹೀಗೆ ಮೆಕ್ಸಿಕೋದಲ್ಲಿ ಕಂಡಿರುವ ಗುಂಡಿಗೆ ನೂರಾರು ಕಥೆಗಳು ಬಂದು ಬೀಳುತ್ತಿವೆ. ಒಬ್ಬೊಬ್ಬರು ಒಂದೊಂದು ವಿವರಣೆ ನೀಡುತ್ತಿದ್ದಾರೆ. ಇದೇ ರೀತಿ ಈ ಗುಂಡಿ ಸೃಷ್ಟಿಗೆ ಏಲಿಯನ್ಸ್ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಏಲಿಯನ್‌ಗಳ ಸ್ಪೇಸ್ ಕ್ರಫ್ಟ್ ಇದೇ ಜಾಗದಲ್ಲಿ ಬಿದ್ದಿದ್ದರಿಂದ ಗುಂಡಿ ಉಂಟಾಗಿದೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ದುಷ್ಟ ಶಕ್ತಿ ಕಾಟ ಎನುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಸಾಕ್ಷಿ ಸಿಗುತ್ತಿಲ್ಲ. ಮೆಕ್ಸಿಕೋ ಅಧಿಕಾರಿಗಳು ಮಾತ್ರ ಸಾಕ್ಷ್ಯಗಳ ಹುಟುಕಾಟದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಈ ಗುಂಡಿ ನೋಡಿ ಕೆಲವರು ಕಥೆ ಹೆಣೆಯುತ್ತಿದ್ದಾರೆ.

ನೀರು ತುಂಬಿ ತುಳುಕುತ್ತಿದೆ..!
ಇನ್ನು ಈ ಬೃಹತ್ ಗುಂಡಿಯ ಒಳಗೆ ಸಾಕಷ್ಟು ಪ್ರಮಾಣದ ನೀರು ತುಂಬಿಕೊಂಡಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ನೂರಾರು ಅಡಿ ಅಗಲ ಹಾಗೂ ಹತ್ತಾರು ಅಡಿ ಆಳವಿರುವ ಗುಂಡಿಯ ಒಳಭಾಗ ಸಂಪೂರ್ಣ ನೀರಿನಿಂದ ತುಂಬಿ ಹೋಗಿದೆ. ಅಂತಾರಾಷ್ಟ್ರೀಯ ತಜ್ಞರು ಈ ಗುಂಡಿಯ ಅಧ್ಯಯನಕ್ಕೆ ಒಲವು ತೋರಿದ್ದಾರೆ. ಆದರೆ ಕೃಷಿಕ ಮಾತ್ರ ತನ್ನ ಕೃಷಿ ಭೂಮಿ ಹಾಳಾಗಿ ಹೋಯ್ತಲ್ಲಾ ಎಂದು ತಲೆಮೇಲೆ ಕೈಹೊತ್ತು ಕೂತಿದ್ದಾನೆ. ಸ್ಥಳೀಯರು ಮಾತ್ರ ಭಯದಲ್ಲೇ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ.

ಕ್ಷುದ್ರಗ್ರಹ ಅಪ್ಪಳಿಸಿರಬಹುದಾ..?
ಹೌದು, ಭೂಮಿ ಮೇಲೆ ಕ್ಷುದ್ರಗ್ರಹ ಅಪ್ಪಳಿಸುವುದು ಮಾಮೂಲಿ. ಹೀಗೆ ಕ್ಷುದ್ರಗ್ರಹ ಬಡಿದು ಈ ಬೃಹತ್ ಗುಂಡಿ ಉಂಟಾಗಿರಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಏಕೆಂದರೆ ಈಗಾಗಲೇ ಭೂಮಿ ಮೇಲೆ ಈ ರೀತಿಯ ಹಲವು ಗುಂಡಿಗಳನ್ನ ಕ್ಷುದ್ರಗ್ರಹಗಳು ಸೃಷ್ಟಿ ಮಾಡಿವೆ. ಹೀಗಾಗಿ ಇದು ಕ್ಷುದ್ರಗ್ರಹದ ಅಪ್ಪಳಿಸಿದ್ದರ ಪ್ರಭಾವ ಎನ್ನುತ್ತಿದ್ದಾರೆ ಕೆಲವರು. ಮತ್ತೊಂದ್ಕಡೆ ಮೆಕ್ಸಿಕೋದಲ್ಲಿ ಉಂಟಾಗಿರುವ ಗುಂಡಿ ಕ್ಷುದ್ರಗ್ರಹದಿಂದ ಸೃಷ್ಟಿ ಆಗಿರಲು ಸಾಧ್ಯವಿಲ್ಲ ಎಂಬುದು ಕೆಲವರ ವಾದ. ಏಕೆಂದರೆ ಕ್ಷುದ್ರಗ್ರಹ ಅಪ್ಪಳಿಸಿದ್ದರೆ ಭಾರಿ ಪ್ರಮಾಣದ ಶಬ್ಧ ಕೇಳಿಬರಬೇಕಿತ್ತು. ಆದರೆ ಅಂತಹ ಶಬ್ಧವೇನು ಸ್ಥಳೀಯರ ಕಿವಿಗೆ ಬಿದ್ದಿಲ್ಲ. ಹೀಗಾಗಿ ಮಧ್ಯ ಮೆಕ್ಸಿಕೋದ ನಿಗೂಢ ಗುಂಡಿಯ ಕಾರಣಗಳು ಮತ್ತಷ್ಟು ನಿಗೂಢವಾಗುತ್ತಾ ಸಾಗಿವೆ..!

English summary
In central Mexico over 300 feet big hole has been created fear in locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X