ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ವೇಳೆಗೆ ಅಫ್ಘನ್‌ನ 97% ಜನರು ಬಡತನದ ಅಂಚಿನಲ್ಲಿರುತ್ತಾರೆ; UNDP

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 10: ಅಫ್ಘಾನಿಸ್ತಾನದ 97% ಜನಸಂಖ್ಯೆಯು 2022ರ ಮಧ್ಯದ ವೇಳೆಗೆ ಬಡತನದ ಅಂಚಿನಲ್ಲಿರುತ್ತದೆ ಎಂದು ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಅಂದಾಜು ಮಾಡಿದೆ.

ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್‌ಡಿಪಿ ಹೇಳಿದೆ.

ಅಫ್ಘಾನಿಸ್ತಾನ ಬೆಳವಣಿಗೆ ಬಗ್ಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಉಲ್ಲೇಖ ಅಫ್ಘಾನಿಸ್ತಾನ ಬೆಳವಣಿಗೆ ಬಗ್ಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಉಲ್ಲೇಖ

ಅಫ್ಘಾನಿಸ್ತಾನದ ನೈಜ ಜಿಡಿಪಿ 13.2%ನಷ್ಟು ಸಂಕುಚಿತಗೊಳ್ಳಬಹುದು ಎಂದು ಸಂಸ್ಥೆ ಅಂದಾಜಿಸಿದ್ದು, ಇದು ಬಡತನ ದರದಲ್ಲಿ 25% ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ. 'ಮಾನವೀಯ ಹಾಗೂ ಆರ್ಥಿಕ ಬಿಕ್ಕಟ್ಟಿನ ಮೇಲೆ ಸಂಪೂರ್ಣ ಅಭಿವೃದ್ಧಿ ಕುಸಿತವನ್ನು ಕಾಣಬಹುದು' ಎಂದು ಯುಎನ್ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಯುಎನ್‌ಡಿಪಿ ಏಷ್ಯಾ ಹಾಗೂ ಪೆಸಿಫಿಕ್ ಪ್ರಾದೇಶಕ ಬ್ಯೂರೋ ನಿರ್ದೇಶಕ ಕನ್ನಿ ವಿಘ್ನರಾಜ ಹೇಳಿದ್ದಾರೆ.

97 Percent Of Afghan Population May Plunge Into Poverty By Mid 2022

ದೀರ್ಘಕಾಲದ ಬರ ಹಾಗೂ ಕೊರೊನಾ ಸಾಂಕ್ರಾಮಿಕ ಪರಿಣಾಮದ ಜೊತೆಗೆ ಅಫ್ಘಾನಿಸ್ತಾನ ಪ್ರಸ್ತುತ ರಾಜಕೀಯ ಪರಿವರ್ತನೆಯಿಂದ ಉಂಟಾದ ಏರುಪೇರಿನ ಜೊತೆ ದೇಶ ಹೋರಾಡುತ್ತಿದೆ. ಕುಸಿಯುತ್ತಿರುವ ಸಾರ್ವಜನಿಕ ಆರ್ಥಿಕತೆ, ವಿದೇಶಿ ಬಂಡವಾಳ, ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಒತ್ತಡ ಹಾಗೂ ಹೆಚ್ಚುತ್ತಿರುವ ಬಡತನ ಇವೆಲ್ಲವೂ ಆರ್ಥಿಕ ಹಿಂದುಳಿಕೆಗೆ ಕಾರಣವಾಗಲಿವೆ ಎಂದು ಎಚ್ಚರಿಕೆ ನೀಡಿದೆ.

ಇದರ ಪರಿಣಾಮ, ಯುಎನ್‌ಡಿಪಿ ಅತ್ಯಂತ ದುರ್ಬಲ ಜನರು ಹಾಗೂ ಸಮುದಾಯದ ತಕ್ಷಣದ ಜೀವನ ಪರಿಸ್ಥಿತಿ ಸುಧಾರಣೆಗೆ ಸಹಾಯ ಮಾಡಲು ಮುಂದಾಗಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿದೆ.

ಅಗತ್ಯ ಸೇವೆಗಳು, ಸ್ಥಳೀಯ ಜೀವನೋಪಾಯಗಳು, ಮೂಲ ಆದಾಯ ಹಾಗೂ ಸಣ್ಣ ಮೂಲಸೌಕರ್ಯಗಳ ಮೇಲೆ ಈ ಯೋಜನೆ ಕೇಂದ್ರೀಕೃತಗೊಂಡಿವೆ ಎಂದು ತಿಳಿಸಿದೆ.

ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!? ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!?

ತಾಲಿಬಾನ್ ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.

97 Percent Of Afghan Population May Plunge Into Poverty By Mid 2022

ಆಗಸ್ಟ್‌ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದೆ. ಎರಡು ದಶಕಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್‌ 31ರಂದು ಅಮೆರಿಕ ಪಡೆ ಅಫ್ಘಾನ್ ತೊರೆಯುತ್ತಿದ್ದಂತೆ ಸ್ವಾತಂತ್ರ್ಯ ಘೋಷಿಸಿಕೊಂಡಿರುವ ತಾಲಿಬಾನ್, ಹೊಸ ಸರ್ಕಾರ ರಚಿಸಿದೆ. ಇದೀಗ ನೆರೆ ರಾಷ್ಟ್ರಗಳೊಂದಿಗೆ ಸ್ನೇಹ ಸಾಧಿಸಿ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಮಾರ್ಗೋಪಾಯ ಹುಡುಕಿಕೊಳ್ಳುವುದು ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಚೀನಾ ಸಹಕಾರ ಬಯಸುತ್ತಿರುವ ತಾಲಿಬಾನ್
'ಚೀನಾ ನಮ್ಮ ಪ್ರಮುಖ ಪಾಲುದಾರ ಹಾಗೂ ಅಫ್ಘಾನಿಸ್ತಾನದ ಆರ್ಥಿಕ ಪುನರುಜ್ಜೀವನಕ್ಕೆ ತಾಲಿಬಾನ್ ನಾಯಕತ್ವ ಬೀಜಿಂಗ್‌ನ ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿರುತ್ತದೆ' ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದು, ಪರೋಕ್ಷವಾಗಿ ಚೀನಾ ನೆರವನ್ನು ತಾಲಿಬಾನ್ ಬಯಸುತ್ತಿರುವುದನ್ನು ತೋರುತ್ತಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ತನ್ನ ಆರ್ಥಿಕತೆ ಸುಧಾರಣೆ ಹಾಗೂ ಪುನರುಜ್ಜೀವನಕ್ಕೆ ಚೀನಾದ ನಿಧಿಯನ್ನು ಅವಲಂಬಿಸಿದೆ' ಎಂದು ಹೇಳಿಕೊಂಡಿದ್ದಾರೆ.

ಚೀನಾ ನಮಗೆ ಅಸಾಧಾರಣ ಅವಕಾಶಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವಾಗಲು ಚೀನಾ ಸಿದ್ಧವಾಗಿದೆ. ಹೀಗಾಗಿ ಚೀನಾ ನಮ್ಮ ಪ್ರಮುಖ ಪಾಲುದಾರನಾಗಲಿದೆ' ಎಂದು ಜಬೀವುಲ್ಲಾ 'ಲಾ ರಿಪಬ್ಲಿಕಾ'ಗೆ ತಿಳಿಸಿದ್ದಾರೆ.

ಸರ್ಕಾರ ರಚಿಸಲು ಹೊರಟಿರುವ ತಾಲಿಬಾನ್ ಎದುರಿಗೆ ಸದ್ಯ ಸಾಕಷ್ಟು ಸವಾಲುಗಳಿವೆ. ಅಂತರರಾಷ್ಟ್ರೀಯ ಹೂಡಿಕೆದಾರರ ಮೇಲೆ ತಾಲಿಬಾನ್ ದೃಷ್ಟಿ ನೆಟ್ಟಿದೆ. ವ್ಯಾಪಾರ ವಹಿವಾಟಿಗೆ ಇತರೆ ದೇಶಗಳ ಬೆಂಬಲವನ್ನು ಮನಗಂಡಿರುವ ತಾಲಿಬಾನ್ ಈಗ ಚೀನಾ ನೆರವನ್ನು ಬಯಸುತ್ತಿದೆ.

English summary
97% of Afghan population could plunge into poverty by mid 2022 says UNDP,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X