ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಿಂದ ಫ್ರೀಜರ್‌ನಲ್ಲಿರಿಸಿದ್ದ ನೂಡಲ್ಸ್ ತಿಂದು 9 ಮಂದಿ ಸಾವು

|
Google Oneindia Kannada News

ಬೀಜಿಂಗ್, ಅಕ್ಟೋಬರ್ 23: ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಫ್ರೀಜರ್‌ನಲ್ಲಿ ಇರಿಸಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಚೀನಾದ ಈಶಾನ್ಯ ಭಾಗದ ಹೀಲಾಂಗ್‌ಜಿಯಾಂಗ್‌ ಪ್ರಾಂತ್ಯದ ಜಿಕ್ಸಿ ಎಂಬಲ್ಲಿ ನಡೆದಿದೆ.

ಈ ನೂಡಲ್ಸ್ ಅನ್ನು ಜೋಳದ ಹಿಟ್ಟಿನೊಳಗೆ ಇರಿಸಲಾಗಿತ್ತು. ಕಲುಷಿತಗೊಂಡಿದ್ದ ಹಿಟ್ಟು, ವಿಷವಾಗಿ ಪರಿವರ್ತನೆಯಾಗಿತ್ತು. ಅಕ್ಟೋಬರ್ 5ರಂದು ಈ ನೂಡಲ್ಸ್ ಸೇವಿಸಿದ್ದ ಕುಟುಂಬದವರು, ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಬಾರಿ ಕೋವಿಡ್ ವ್ಯಕ್ತಿಯ ಶವಪರೀಕ್ಷೆ: ಕುತೂಹಲಕಾರಿ ಸಂಗತಿ ಬಹಿರಂಗಬೆಂಗಳೂರಿನಲ್ಲಿ ಮೊದಲ ಬಾರಿ ಕೋವಿಡ್ ವ್ಯಕ್ತಿಯ ಶವಪರೀಕ್ಷೆ: ಕುತೂಹಲಕಾರಿ ಸಂಗತಿ ಬಹಿರಂಗ

ಕುಟುಂಬದ ಏಳು ಮಂದಿ ಅಕ್ಟೋಬರ್ 10ರಂದು ಮೃತಪಟ್ಟಿದ್ದರೆ, ಎಂಟನೆಯ ವ್ಯಕ್ತಿ ಇನ್ನೂ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾರೆ. ವಿಷಕಾರಿ ನೂಡಲ್ಸ್ ತಿಂದೂ ಬದುಕುಳಿದಿದ್ದ ಮಹಿಳೆ ಕಳೆದ ಸೋಮವಾರ ನಿಧನರಾಗಿದ್ದಾರೆ. ಅದೃಷ್ಟವಶಾತ್ ಕುಟುಂಬದ ಮೂವರು ಮಕ್ಕಳು ರುಚಿ ಹಿಡಿಸಿದ ಕಾರಣ ನೂಡಲ್ಸ್ ತಿನ್ನಲು ನಿರಾಕರಿಸಿದ್ದರಿಂದ ಬದುಕುಳಿದಿದ್ದಾರೆ.

ವಿಮಾನದಲ್ಲಿ ಕೊವಿಡ್ ರೋಗಿ ಸಾವು, ಸೋಂಕಿರುವುದೇ ಗೊತ್ತಿರಲಿಲ್ಲವಿಮಾನದಲ್ಲಿ ಕೊವಿಡ್ ರೋಗಿ ಸಾವು, ಸೋಂಕಿರುವುದೇ ಗೊತ್ತಿರಲಿಲ್ಲ

ಕುಟುಂಬದವರೆಲ್ಲರೂ ಒಂದುಗೂಡಿದ್ದ ಸಂದರ್ಭವೊಂದರಲ್ಲಿ ಈ ಜೋಳದ ನೂಡಲ್ಸ್ ಪೂರೈಸಲಾಗಿತ್ತು. ಫ್ರೀಜರ್‌ನಲ್ಲಿ ಇರಿಸಿದ್ದ ನೂಡಲ್ಸ್ ವಿಷಕಾರಿ ಬಾಂಗ್‌ಕ್ರೆಕ್ ಆಸಿಡ್ ಆಗಿ ಪರಿವರ್ತನೆಗೊಂಡಿತ್ತು ಎಂದು ಹೀಲಾಂಗ್‌ಜಿಯಾಂಗ್‌ನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಆಹಾರ ಸುರಕ್ಷತೆ ನಿರ್ದೇಶಕ ಗಾವೊ ಫೀ ಹೇಳಿದ್ದಾರೆ. ಮುಂದೆ ಓದಿ.

ವಿಷದ ಲಕ್ಷಣಗಳು

ವಿಷದ ಲಕ್ಷಣಗಳು

ಬಾಂಗ್‌ಕ್ರೆಕ್ ಆಸಿಡ್ ವಿಷವು ಸಾಮಾನ್ಯವಾಗಿ ಕಲುಷಿತ ಆಹಾರ ಸೇವಿಸಿದ ಕೆಲವು ಗಂಟೆಗಳಲ್ಲಿಯೇ ತನ್ನ ಪ್ರಭಾವ ತೋರಿಸಲಾರಂಭಿಸುತ್ತದೆ. ಹೊಟ್ಟೆ ನೋವು, ಬೆವರುವಿಕೆ, ತೀವ್ರ ಬಳಲಿಕೆ ಉಂಟಾಗಿ ಕೋಮಾಕ್ಕೂ ತೆರಳುತ್ತಾರೆ. 24 ಗಂಟೆಯೊಳಗೇ ಸಾವು ಸಂಭವಿಸಬಹುದು.

ಸಾವಿನ ಸಾಧ್ಯತೆ ಹಚ್ಚು

ಸಾವಿನ ಸಾಧ್ಯತೆ ಹಚ್ಚು

ಈ ವಿಷವು ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಮಿದುಳಿಗೆ ಗಂಭೀರ ಹಾನಿ ಉಂಟುಮಾಡುತ್ತದೆ. ಪ್ರಸ್ತುತ ಕಲುಷಿತ ಆಹಾರದಲ್ಲಿನ ಆಸಿಡ್ ವಿಷ ದೇಹ ಸೇರಿದರೆ ಗುಣಪಡಿಸುವುದು ಬಹಳ ಕಷ್ಟ. ಇಂತಹ ಪ್ರಕರಣಗಳಲ್ಲಿ ಶೇ 40-100ರಷ್ಟು ಸಾವಿನ ಸಾಧ್ಯತೆ ಹೆಚ್ಚಿರುತ್ತದೆ.

ಇಂಡೋನೇಷ್ಯಾದ ತಿನಿಸು

ಇಂಡೋನೇಷ್ಯಾದ ತಿನಿಸು

ಅಧಿಕ ಉಷ್ಣತೆಯಲ್ಲಿ ಕುದಿಸಿದ ಆಹಾರದಲ್ಲಿ ಬಾಂಗ್‌ಕ್ರೆಕ್ ಆಸಿಡ್ ಪ್ರಭಾವ ಕಡಿಮೆಯಾಗುತ್ತದೆ. ಬಹುಕಾಲದಿಂದ ಶೇಕರಿಸಿಟ್ಟ ತೆಂಗಿನಕಾಯಿಯಲ್ಲಿ ಬಾಂಗ್‌ಕ್ರೆಕ್ ಮಾರಕ ಆಸಿಡ್ ವಿಷ ಉತ್ಪತ್ತಿಯಾಗುತ್ತದೆ. ಇಂಡನೇಷ್ಯಾದ ಸಾಂಪ್ರದಾಯಿಕ ಅಡುಗೆ 'ಟೆಂಪೆ ಬಾಂಗ್‌ಕ್ರೆಕ್' ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಈ ತಿನಿಸು ವಿಷವಾಗಿ ಪರಿವರ್ತನೆಗೊಂಡು ಅನೇಕ ಮಂದಿಯ ಜೀವ ಬಲಿತೆಗೆದುಕೊಂಡಿತ್ತು.

ಆಸಿಡ್‌ನಿಂದ ಸಾವುಗಳು

ಆಸಿಡ್‌ನಿಂದ ಸಾವುಗಳು

ಬಾಂಗ್‌ಕ್ರೆಕ್ ಆಸಿಡ್ ಹಳೆಯ ಆಹಾರಗಳಲ್ಲಿ ಉತ್ಪತ್ತಿಯಾಗುತ್ತದೆ. 1951ರಿಂದ 1975ರ ಅವಧಿಯಲ್ಲಿ ಇಂಡೋನೇಷ್ಯಾದಲ್ಲಿ ಪ್ರತಿ ವರ್ಷ 'ಟೆಂಪೆ ಬಾಂಗ್‌ಕ್ರೆಕ್' ಆಹಾರ ಸೇವಿಸಿ ಸರಾಸರಿ 34 ಸಾವು ಹಾಗೂ 288 ವಿಷ ಪ್ರಾಶನ ಪ್ರಕರಣಗಳು ವರದಿಯಾಗುತ್ತಿದ್ದವು. ಇಂಡೋನೇಷ್ಯಾದಲ್ಲಿ ಡೆಂಕೊಲ್ ಬೀನ್ಸ್ ಎಂಬ ತಿನಿಸು ಕೂಡ ಅನೇಕ ಜೀವಗಳ ಸಾವಿಗೆ ಕಾರಣವಾಗಿದೆ.

English summary
9 members of same family died after eating noodles that were kept in the freezer for over a year in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X