ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಗೆ 832 ಮಂದಿ ಸಾವು

|
Google Oneindia Kannada News

832! ಭೂಕಂಪ ಹಾಗೂ ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ ಭಾನುವಾರಕ್ಕೆ ಇಷ್ಟು ತಲುಪಿದೆ. ಅವಘಡಕ್ಕೆ ತುತ್ತಾಗಿರುವ ಸುಲವೇಸಿ ದ್ವೀಪದಲ್ಲಿ ಆಹಾರ-ನೀರಿಗೆ ಜನರು ಒದ್ದಾಡುತ್ತಿದ್ದಾರೆ. ಇದರ ಜತೆಗೆ ಕಳವಿನ ಪ್ರಕರಣಗಳು ಬೇರೆ ವರದಿಯಾಗುತ್ತಿವೆ.

ಇದಕ್ಕೂ ಮುಂಚೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಘೋಷಿಸಿದ್ದಕಿಂತ ಸಂಖ್ಯೆ ಎರಡು ಪಟ್ಟು ಆಗಿದೆ. ಇಂಡೋನೇಷ್ಯಾದ ಉಪಾಧ್ಯಕ್ಷ ಜುಸುಫ್ ಕಲ್ಲಾ ಅವರು ಹೇಳುವ ಪ್ರಕಾರ, ಸಾವಿನ ಸಂಖ್ಯೆ 'ಸಾವಿರಗಳಲ್ಲಿ' ಇರಲಿವೆ.

ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!

"ಪ್ರತಿ ನಿಮಿಷಕ್ಕೆ ಒಂದರಂತೆ ಶವಗಳನ್ನು ಆಂಬುಲೆನ್ಸ್ ಹೊತ್ತು ತರುತ್ತಿವೆ" ಎಂದು ಪ್ರತ್ಯಕ್ಷದರ್ಶಿಗಳು ಸಾವಿನ ಭೀಕರತೆಯನ್ನು ತಿಳಿಸುವ ಚಿತ್ರಣವನ್ನು ತೆರೆದಿಟ್ಟ ಬಗೆ ಇದು. ಇನ್ನು ಶುದ್ಧ ನೀರಿಗೆ ತತ್ವಾರ ಆಗಿದೆ. ನಾನಾ ಕಡೆ ಮಳಿಗೆಗಳಲ್ಲಿ ಕಳವು ಪ್ರಕರಣಗಳು ನಡೆದಿವೆ.

832 killed in Indonesia quake, tsunami

ಅವಘಡ ಸಂಭವಿಸಿದ ಸ್ಥಳಕ್ಕೆ ಭಾನುವಾರ ಮಧ್ಯಾಹ್ನ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಭೇಟಿ ನೀಡಿದ್ದಾರೆ. ಸದ್ಯಕ್ಕೆ ರಾಶಿ ರಾಶಿ ಬಿದ್ದಿರುವ ಅವಶೇಷಗಳನ್ನು ತೆರವು ಮಾಡುವುದಕ್ಕೆ ದೊಡ್ಡ ದೊಡ್ಡ ಯಂತ್ರಗಳ ಅಗತ್ಯವಿದೆ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ.

ಇಂಡೋನೇಷ್ಯಾ ಸುನಾಮಿ ಆರ್ಭಟಕ್ಕೆ ಕನಿಷ್ಠ 400 ಸಾವು, ಅನೇಕರು ನಾಪತ್ತೆಇಂಡೋನೇಷ್ಯಾ ಸುನಾಮಿ ಆರ್ಭಟಕ್ಕೆ ಕನಿಷ್ಠ 400 ಸಾವು, ಅನೇಕರು ನಾಪತ್ತೆ

ಶುಕ್ರವಾರದಂದು ಇಂಡೋನೇಷ್ಯಾದಲ್ಲಿ ಏಳರ ತೀವ್ರತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪವಾಗಿತ್ತು. ಆ ನಂತರ ಸುನಾಮಿ ಅಪ್ಪಳಿಸಿತ್ತು.

English summary
The death toll from a powerful earthquake and tsunami in Indonesia leapt to 832 Sunday, as stunned people on the stricken island of Sulawesi struggled to find food and water and looting spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X