ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗ್ದಾದ್‌ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ; 82 ಮಂದಿ ಸಾವು

|
Google Oneindia Kannada News

ಬಾಗ್ದಾದ್, ಏಪ್ರಿಲ್ 26: ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಬಾಗ್ದಾದ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು 82 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಬಾಗ್ದಾದ್‌ನ ಅಲ್‌ ಖತೀಬಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶನಿವಾರ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದೆ. ನಂತರ ಆಸ್ಪತ್ರೆಯ ಇತರೆ ಅಂತಸ್ತುಗಳಿಗೂ ಬೆಂಕಿ ವ್ಯಾಪಿಸಿದೆ. ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿದೆ.

ದೆಹಲಿ: ಆಕ್ಸಿಜನ್ ಸಿಗದೆ ಮತ್ತೆ 20 ಮಂದಿ ಕೊರೊನಾ ಸೋಂಕಿತರು ಸಾವು ದೆಹಲಿ: ಆಕ್ಸಿಜನ್ ಸಿಗದೆ ಮತ್ತೆ 20 ಮಂದಿ ಕೊರೊನಾ ಸೋಂಕಿತರು ಸಾವು

ಈ ಘಟನೆಯಲ್ಲಿ ಒಟ್ಟು 82 ರೋಗಿಗಳು ಮೃತಪಟ್ಟಿದ್ದು, 110 ಮಂದಿ ಗಾಯಗೊಂಡಿದ್ದಾರೆ. ಸುಮಾರು 200 ಮಂದಿಯ ರಕ್ಷಣೆ ಮಾಡಲಾಗಿದೆ.

82 Dies In Oxygen Cylinder Blast At Iraq Covid Hospital

ಆಸ್ಪತ್ರೆಗೆ ರಾತ್ರಿ ಪಾಳಿಗೆ ಬಂದ ನರ್ಸ್, ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ್ದಾರೆ. ತಕ್ಷಣವೇ ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ. ನೋಡನೋಡುತ್ತಿದ್ದಂತೆ ಎಲ್ಲೆಡೆ ಬೆಂಕಿ ವ್ಯಾಪಿಸಿ ಅವಘಡ ಸಂಭವಿಸಿದೆ.

ಘಟನೆ ಬೆನ್ನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಖದಿಮಿ ಸಚಿವ ಸಂಪುತ ಸಭೆ ನಡೆಸಿದ್ದಾರೆ. ಈ ದುರಂತದಲ್ಲಿ ನಿರ್ಲಕ್ಷ್ಯತನ ಅಪರಾಧ ಎಂದು ಖಂಡಿಸಿದ್ದಾರೆ. ಆರೋಗ್ಯ ಸಚಿವ ಹಸನ್ ಅಲ್ ತಮಿಮಿ ಹಾಗೂ ಬಾಗ್ದಾದ್ ರಾಜ್ಯಪಾಲರನ್ನು ಅಮಾನತು ಮಾಡಲಾಗಿದೆ. ಘಟನೆ ಕುರಿತು ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಸತ್ತವರಲ್ಲಿ 28 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಾಗರಿಕ ರಕ್ಷಣಾ ತಂಡಗಳು ಭಾನುವಾರ ಬೆಳಗ್ಗಿನವರೆಗೂ ಬೆಂಕಿ ನಂದಿಸಿದ್ದಾರೆ.

ಆಸ್ಪತ್ರೆಯಲ್ಲಿ ಬೆಂಕಿಯಿಂದ ರಕ್ಷಿಸುವ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೆಂಕಿ ತೀವ್ರ ವ್ಯಾಪಿಸಿದೆ. ವೆಂಟಿಲೇಟರ್‌ಗಳನ್ನು ತೆಗೆದು ಸಾಗಿಸುವ ವೇಳೆ ಹಲವು ರೋಗಿಗಳು ಮೃತಪಟ್ಟಿದ್ದಾರೆ ಎಂದು ಇರಾಕ್ ನಾಗರಿಕ ರಕ್ಷಣಾ ಘಟಕ ತಿಳಿಸಿದೆ.

ಘಟನೆಯಲ್ಲಿ ಸಾವನ್ನಪ್ಪಿದವರಿಗೆ ನಜಾಫ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

English summary
82 people dies in covid hospital at baghdad by oxygen cylinder blast,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X