ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೂ ಎಚ್ಚರಿಕೆ: 12 ರಾಷ್ಟ್ರಗಳಲ್ಲಿ ಪಕ್ಕಾ ಆಯ್ತು ಮಂಕಿಪಾಕ್ಸ್!

|
Google Oneindia Kannada News

ನವದೆಹಲಿ, ಮೇ 21: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಹೋಯ್ತು ಅನ್ನುವಷ್ಟರಲ್ಲೇ ಮಂಕಿಪಾಕ್ಸ್ ಎಂಬ ಹೊಸ ಕಾಯಿಲೆ ಭಯ ಹುಟ್ಟಿಸುತ್ತಿದೆ. ಒಟ್ಟು 12 ರಾಷ್ಟ್ರಗಳಲ್ಲಿ 80ಕ್ಕಿಂತ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO)ಯು ಈವರೆಗೂ 50ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಯಾವುದೇ ನಿರ್ದಿಷ್ಟವಾಗಿ ಇಂಥ ರಾಷ್ಟ್ರದಲ್ಲಿ ಇಷ್ಟು ಪ್ರಕರಣಗಳಿವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಮಂಕಿಪಾಕ್ಸ್ ಕುರಿತು ಡಬ್ಲ್ಯುಹೆಚ್ಒ ತನಿಖೆ ನಡೆಸುತ್ತಿದ್ದು, ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಮಂಕಿಪಾಕ್ಸ್: ಚಿಕಿತ್ಸೆ ಮತ್ತು ಲಸಿಕೆ- ಇಲ್ಲಿದೆ ಎಲ್ಲಾ ವಿವರಮಂಕಿಪಾಕ್ಸ್: ಚಿಕಿತ್ಸೆ ಮತ್ತು ಲಸಿಕೆ- ಇಲ್ಲಿದೆ ಎಲ್ಲಾ ವಿವರ

ಯುರೋಪ್ ಖಂಡದ 9 ರಾಷ್ಟ್ರಗಳು, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇನ್ನೊಂದು ಕಡೆ ಕೇಂದ್ರ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸರ್ವೇ ಸಾಮಾನ್ಯ ಕಾಯಿಲೆಯಾಗಿ ಗುರುತಿಸಿಕೊಂಡಿದೆ. ಆದರೆ ಈ ವೈರಸ್ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ. ಸಾರ್ವಜನಿಕರಿಗೆ ಇದರಿಂದ ಹೆಚ್ಚು ಅಪಾಯ ಇರುವುದಿಲ್ಲ.

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯುರೋಪ್ ಖಂಡದ ಆರೋಗ್ಯ ಸಂಸ್ಥೆಗಳು ಯಾವ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ತಿಳಿಸಿವೆ. ಯುಕೆ, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲೆಂಡ್, ಇಟಲಿ ಮತ್ತು ಸ್ವೀಡನ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬಗ್ಗೆ ದೃಢಪಡಿಸಲಾಗಿದೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸೋಂಕು ಪಕ್ಕಾ ಆಗಿದೆ.

ಯುಕೆಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿ

ಯುಕೆಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿ

ಕಳೆದ ಮೇ 7ರಂದು ಯುನೈಟೆಡ್ ಕಿಂಗ್ ಡಮ್ ನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಈ ಸೋಂಕಿತ ವ್ಯಕ್ತಿಯು ನೈಜೀರಿಯಾಕ್ಕೆ ಪ್ರಯಾಣಿಸಿದ ಹಿನ್ನೆಲೆ ಹೊಂದಿರುವುದು ಪತ್ತೆಯಾಗಿತ್ತು. ಇಂಗ್ಲೆಂಡ್ ತಲುಪುವ ವೇಳೆಗೆ ನೈಜೀರಿಯಾಕ್ಕೆ ಭೇಟಿ ನೀಡಿದ ವ್ಯಕ್ತಿಯಲ್ಲಿ ಸೋಂಕು ಅಂಟಿಕೊಂಡಿರುವ ಬಗ್ಗೆ ಯುಕೆ ಆರೋಗ್ಯ ಇಲಾಖೆ ಭದ್ರತಾ ಸಂಸ್ಥೆ ತಿಳಿಸಿದೆ. ದೇಶದಲ್ಲಿ ಈವರೆಗೂ 20 ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.

ಆಸ್ಟ್ರೇಲಿಯಾದಲ್ಲೂ ಮಂಕಿಪಾಕ್ಸ್ ಪ್ರಕರಣ ದೃಢ

ಆಸ್ಟ್ರೇಲಿಯಾದಲ್ಲೂ ಮಂಕಿಪಾಕ್ಸ್ ಪ್ರಕರಣ ದೃಢ

ಯುಕೆಗೆ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ ಎಂದು ಆಸ್ಟ್ರೇಲಿಯಾದ ವಿಕ್ಟೋರಿಯನ್ ಡಿಪಾರ್ಟ್ ಮೆಂಟ್ ಆಫ್ ಹೆಲ್ತ್ ಸ್ಪಷ್ಟಪಡಿಸಿದೆ. ಇದು ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ಅದೇ ರೀತಿ ಉತ್ತರ ಅಮೆರಿಕಾದ ಪ್ರಜೆಯಲ್ಲೂ ಮಂಕಿಪಾಕ್ಸ್ ಸೋಂಕು ಪಕ್ಕಾ ಆಗಿದ್ದು, ಸೋಂಕಿನ ವ್ಯಕ್ತಿಯು ಕೆನಡಾಕ್ಕೆ ಪ್ರಯಾಣಿಸಿದ ಹಿನ್ನೆಲೆ ಹೊಂದಿರುವುದು ತಿಳಿದು ಬಂದಿದೆ.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು, ಇಲಿಗಳು ಮತ್ತು ಅಳಿಲುಗಳಂತಹ ದಂಶಕಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.

ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.

English summary
80 Monkeypox cases confirmed in 12 countries at world. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X