• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Updates: ಈಸ್ಟರ್ ದುರಂತ: ಶ್ರೀಲಂಕಾದ ಚರ್ಚ್, ಹೋಟೆಲ್ ಗಳಲ್ಲಿ ಸ್ಫೋಟ

|

ಕೊಲಂಬೋ, ಏಪ್ರಿಲ್ 21: ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಭಾನುವಾರ ಬೆಳಗ್ಗೆ ಆಘಾತ ಎದುರಾಗಿದೆ. ಇಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ. ಇದೀಗ ಬಂದ ಮಾಹಿತಿಯಂತೆ ಕನಿಷ್ಠ 210 ಮಂದಿ ಸಾವನ್ನಪ್ಪಿದ್ದರೆ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕೊಲಂಬೋ ಹಾಗೂ ನೆಗೊಂಬೋ ನಗರಗಳಲ್ಲಿರುವ ಚರ್ಚ್ ಗಳಲ್ಲಿ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 80 ಮಂದಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿ ಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 14 ಮಂದಿ ಬಲಿ

ಶ್ರೀಲಂಕಾದಲ್ಲಿ ಒಟ್ಟು 5 ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿರುವ ವರದಿಗಳು ಬಂದಿವೆ. ಈ ಪೈಕಿ ಮೂರು ಚರ್ಚ್ ಗಳಲ್ಲಿ ಹಾಗೂ ಎರಡು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಇನ್ನು ಯಾವ ಉಗ್ರ ಸಂಘಟನೆ ಕೂಡಾ ಈ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

80 Injured In Blasts At Two Sri Lanka Churches During Easter Mass: Report

ಕೊಲಂಬೋದ ಚರ್ಚ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ನಂತರದ ಚಿತ್ರಗಳು ಟ್ವೀಟ್ ನಲ್ಲಿವೆ ನೋಡಿ

ಶಾಂಗ್ರಿಲಾ ಹೋಟೆಲ್ ಹಾಗೂ ಕಿಂಗ್ಸ್ ಬರಿ ಹೋಟೆಲ್ ನಲ್ಲಿ ಸ್ಫೋಟವಾಗಿವೆ.ಕೊಲಂಬೋ ಕೊಚಿಕಡೆಯ ಸೈಂಟ್ ಅಂಥೋನಿ ಚರ್ಚ್ ನಲ್ಲಿ ಸ್ಫೋಟ ಸಂಭವಿಸಿದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿವೆ. ಸ್ಫೋಟಗೊಂಡ ಸ್ಥಳದಿಂದ ನೆರವಿಗಾಗಿ ಕೋರಲಾಗಿದೆ.

Newest First Oldest First
6:10 PM, 21 Apr
ಎಲ್ಲ ಶ್ರೀಲಂಕನ್ನರು ಈ ದುಃಖದ ಸನ್ನಿವೇಶದಲ್ಲಿ ಒಗ್ಗಟ್ಟಾಗಿರಬೇಕು ಹಾಗೂ ಬಲವಾಗಿರಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸರಕಾರವು ಅಗತ್ಯ ಕ್ರಮ ತೆಗೆದುಕೊಳ್ಳಲಿದೆ" ಎಂದು ವಿಕ್ರಮ್ ಸಿಂಘೆ ಹೇಳಿದ್ದಾರೆ.
6:09 PM, 21 Apr
ಶ್ರೀಲಂಕಾದಲ್ಲಿ ಭಾನುವಾರ ವಿವಿಧೆಡೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 190ಕ್ಕೆ ಏರಿಕೆ ಆಗಿದ್ದು, ಈ ಸಂಬಂಧ 7 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.
4:43 PM, 21 Apr
ಪ್ರಧಾನಿ ಮೋದಿ ಅವರಿಂದ ಶ್ರೀಲಂಕಾದ ಪ್ರಧಾನಿ, ರಾಷ್ಟ್ರಪತಿಗೆ ಕರೆ, ದುಃಖದಲ್ಲಿ ಭಾರತವೂ ಭಾಗಿಯಾಗಿದೆ. ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆ
3:43 PM, 21 Apr
ಉಗ್ರರ ದಾಳಿಗೆ ಮಂಗಳೂರಿನ ವಿನೀತ್, ರಝೀನಾ ಮೃತರಾಗಿದ್ದಾರೆ
3:41 PM, 21 Apr
ಮೃತ ವಿದೇಶಿಯರ ಸಂಖ್ಯೆ 40ಕ್ಕೂ ಅಧಿಕ ಅಮೆರಿಕ, ಬ್ರಿಟಿಷ್ ಹಾಗೂ ಡಚ್ಚರು ಇದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ಪ್ರಕಟಣೆ
3:37 PM, 21 Apr
ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಸಾಮಾಜಿಕ ಜಾಲ ತಾಣಗಳ ಬಳಕೆ ನಿಷೇಧ
3:36 PM, 21 Apr
ದೆಹಿವಾಲದ ಪ್ರಾಣಿಸಂಗ್ರಹಾಲಯದ ಬಳಿ ನಡೆದ ಸ್ಫೋಟದ ಸ್ಥಳದಲ್ಲಿ ಓರ್ವ ಶಂಕಿತನ ಬಂಧನ
3:22 PM, 21 Apr
ಸ್ಫೋಟದ ಬಗ್ಗೆ ವಿದೇಶಿ ತನಿಖಾ ಸಂಸ್ಥೆ ಈ ಹಿಂದೆ ನೀಡಿದ್ದ ಎಚ್ಚರಿಕೆಯಂತೆ ಇಂದಿನ ಸ್ಫೋಟಕ್ಕೆ ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ
3:08 PM, 21 Apr
ಇದು ಆತ್ಮಾಹುತಿ ದಾಳಿ ಎಂಬುದು ಖಚಿತವಾಗಿದೆ. ಶ್ರೀಲಂಕಾದ ಹಲವೆಡೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
3:04 PM, 21 Apr
ಶ್ರೀಲಂಕಾದಲ್ಲಿ ಕಳೆದ 7 ಗಂಟೆಗಳಲ್ಲಿ 8 ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ.
2:37 PM, 21 Apr
ಶ್ರೀಲಂಕಾದ ಸರಣಿ ಸ್ಫೋಟದಲ್ಲಿ ಬಲಿಯಾದವರ ಸಂಖ್ಯೆ 160ಕ್ಕೇರಿಕೆ, ಮೃತರ ಪೈಕಿ 7 ಮಂದಿ ವಿದೇಶಿಯರಿದ್ದಾರೆ ಎಂದು ಖಚಿತಪಡಿಸಿದ ಶ್ರೀಲಂಕಾದ ಪೊಲೀಸರು
2:35 PM, 21 Apr
ಶ್ರೀಲಂಕಾದ ಬಂಡಾರನಾಯಿಕೆ ವಿಮಾನ ನಿಲ್ದಾಣ ನೀಡಿರುವ ಅಧಿಕೃತ ಪ್ರಕಟಣೆ
2:34 PM, 21 Apr
2006ರ ತನಕ ಸರಣಿ ಸ್ಫೋಟ, ಆತ್ಮಾಹುತಿ ದಾಳಿಗಳನ್ನು ಎದುರಿಸಿದ್ದ ಶ್ರೀಲಂಕಾಕ್ಕೆ ವಿಧ್ವಂಸಕ ಕೃತ್ಯಗಳಿಂದ ಮುಕ್ತಿ ನೀಡುವ ಪಣತೊಟ್ಟ ಶ್ರೀಲಂಕಾ ಸೇನೆ, 2009ರಲ್ಲಿ ಎಲ್ ಟಿಟಿ ಐಯನ್ನು ಅಧಿಕೃತವಾಗಿ ನಿರ್ನಾಮ ಮಾಡಲಾಗಿತ್ತು.ಆನಂತರ ದ್ವೀಪರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಸ್ಫೋಟಗಳು ಸಂಭವಿಸಿರಲಿಲ್ಲ.
2:24 PM, 21 Apr
ಕೊಲಂಬೋದಲ್ಲಿ ಮತ್ತೊಂದು ಬಾಂಬ್ ಸ್ಫೋಟ, 2 ಸಾವು
1:44 PM, 21 Apr
ಶ್ರೀಲಂಕಾದಲ್ಲಿರುವ ಭಾರತೀಯರಿಗಾಗಿ ಸಂದೇಶ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಕಚೇರಿಯ ಸಹಾಯವಾಣಿಗಳನ್ನು ನೀಡಿದ್ದಾರೆ.
1:43 PM, 21 Apr
ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಟ್ವೀಟ್ ಮಾಡಿ, ದುರಂತದ ಸಮಯದಲ್ಲಿ ಶ್ರೀಲಂಕನ್ನರು ಒಟ್ಟಾಗಿ ಇರುವಂತೆ ಕರೆ ನೀಡಿದ್ದಾರೆ.
1:41 PM, 21 Apr
ಶ್ರೀಲಂಕಾದಲ್ಲಿ ಒಟ್ಟು 5 ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿರುವ ವರದಿಗಳು ಬಂದಿವೆ. ಈ ಪೈಕಿ ಮೂರು ಚರ್ಚ್ ಗಳಲ್ಲಿ ಹಾಗೂ ಎರಡು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಇನ್ನು ಯಾವ ಉಗ್ರ ಸಂಘಟನೆ ಕೂಡಾ ಈ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

English summary
Blasts hit two churches in Sri Lanka on Sunday, including in the capital Colombo, as worshippers attended Easter services, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more