ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಯುದ್ಧ II ವಿಜಯೋತ್ಸವ ದಿನ ರಾಣಿ ಎಲಿಜಬೆತ್ ಗೆ ಕಟಂಕ

By Mahesh
|
Google Oneindia Kannada News

ಲಂಡನ್, ಆಗಸ್ಟ್ 10: ಬ್ರಿಟನ್ನಿನ ರಾಣಿ ಎಲಿಜಬೆತ್ ಅವರ ಮೇಲೆ ಇರಾಕಿ ಉಗ್ರ ಸಂಘಟನೆಯ ಕಣ್ಣು ಬಿದ್ದಿದೆ. 2ನೇ ವಿಶ್ವ ಯುದ್ದದ ವಿಜಯೋತ್ಸವ ಸಮಾರಂಭದಲ್ಲಿ ರಾಣಿ ಎಲಿಜಬೆತ್ ಕಥೆ ಮುಗಿಸುವುದಾಗಿ ಐಎಸ್ಐಎಸ್ ಹೇಳಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮವಗಳು ವರದಿ ಮಾಡಿವೆ.

ಬೋಸ್ಟನ್ ಮ್ಯಾರಥಾನ್​ನಲ್ಲಿ ನಡೆಸಿದ್ದ ದಾಳಿಯ ಮಾದರಿಯಲ್ಲೇ ಪ್ರೆಷರ್ ಕುಕ್ಕರ್ ಬಾಂಬ್ ಸಿಡಿಸಿ ಮಹಾರಾಣಿ ಅವರನ್ನು ಹತ್ಯೆ ಮಾಡಲಾಗುತ್ತದೆ. ಡೌನಿಂಗ್ ಸ್ಟ್ರೀಟ್​ನಿಂದ ಅರ್ಧ ಮೈಲಿ ದೂರದಲ್ಲಿರುವ ಹಾರ್ಸ್ ಗಾರ್ಡ್ಸ್ ಪರೇಡ್ ಅನ್ನು ಗುರಿಯಾಗಿಸಿ ದಾಳಿ ನಡೆಸಲು ಇರಾಕಿ ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಕ್ವೀನ್ ಎಲಿಜಬೆತ್, ಪ್ರಿನ್ಸ್ ಚಾರ್ಲ್ಸ್, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಸದ್ಯಕ್ಕೆ ಈ ಉಗ್ರರ ಟಾರ್ಗೆಟ್ ನ ಟಾಪ್ ಲಿಸ್ಟ್ ನಲ್ಲಿದ್ದಾರೆ. [ಎಲಿಜಬೆತ್ ರಾಣಿ ವಿರುದ್ಧ ನಿಂತ ಸೇವಕರು]

70th anniversary of the end of the World War II ISIS targets Queen Elizabeth

2ನೇ ಮಹಾಯುದ್ಧದ ವಿಜಯೋತ್ಸವ ಸಮಾರಂಭದಲ್ಲಿ ಫಾರ್ ಈಸ್ಟ್ ಕ್ಯಾಂಪೇನ್​ನ 1 ಸಾವಿರ ಹಿರಿಯ ಯೋಧರು ಹಾಗೂ ಸೇನಾ ಪಡೆ ಯೋಧರು ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಟ್ರಾಫಲ್ಗರ್ ಸ್ಕ್ವೇಯರ್, ವೈಟ್ ಹಾಲ್, ವೆಸ್ಟ್ ಮಿನಿಸ್ಟರ್ ಅಬೇ ಸೇರಿದಂತೆ ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಐಎಸ್ ಉಗ್ರರ ದಾಳಿಯ ಸುಳಿವನ್ನು ಹಿಡಿದಿರುವ ಸ್ಕಾಟ್ಲೆಂಡ್ ಯಾರ್ಡ್​ನ ರಾಯಲ್ ಪ್ರೊಟೆಕ್ಷನ್ ಬ್ರಾಂಚ್​ನ ಸಿಬ್ಬಂದಿ ದಾಳಿಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಸಂಚುಕೋರರನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಆದರೆ, ಯಾವುದೇ ಶಂಕಿತರನ್ನು ಇದುವರೆವಿಗೂ ಬಂಧಿಸಿಲ್ಲ.

ಇತ್ತೀಚೆಗೆ ಬಿಬಿಸಿ ಜೊತೆ ಮಾತನಾಡುತ್ತಾ ಡೇವಿಡ್ ಕೆಮರೂನ್ ಅವರು, ಇರಾಕ್ ಹಾಗೂ ಸಿರಿಯಾದಲ್ಲಿರುವ ಕೆಲ ತಂಡಗಳು ಬ್ರಿಟನ್ನಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹವಣಿಸುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದಿದ್ದರು.

English summary
Iraq Islamists to blow up Queen Elizabeth II at a celebration next weekend marking the 70th anniversary of the end of the World War II, according to the Mail on Sunday newspaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X