ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

70 ಸಾವಿರ ಮಕ್ಕಳ ಹುಟ್ಟಿನ ಲೆಕ್ಕ ಹಚ್ಚಲು ಬಿಡದ ಎಬೋಲಾ

By Vanitha
|
Google Oneindia Kannada News

ಮನ್ರೋವಿಯಾ, ಜುಲೈ, 31 : ಪಶ್ಚಿಮ ಆಫ್ರಿಕಾ ಹಾಗೂ ಇನ್ನಿತರ ದೇಶಗಳನ್ನು ಕಾಡುತ್ತಿರುವ ಒಂದು ಮಹಾಮಾರಿ ಎಬೋಲಾ ರೋಗ. ಈ ರೋಗದ ಆಂತಕದಲ್ಲಿ ಸುಮಾರು 70,000 ನವಜಾತ ಶಿಶುಗಳ ಜನನವನ್ನು ದಾಖಲಿಸಿಕೊಳ್ಳುವಲ್ಲಿ ಮರೆತು ಆಸ್ಪತ್ರೆ ಸಿಬ್ಬಂದಿಗಳು ಎಡವಟ್ಟು ಎಸಗಿದ್ದಾರೆ.

ಪೋಷಕರು ನವಜಾತ ಶಿಶುಗಳ ಆರೋಗ್ಯದ ಕುರಿತಾಗಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಹಾಗೂ ಮಕ್ಕಳ ಜನನದ ಪೂರಕ ಮಾಹಿತಿ ನೀಡದೆ ಆಸ್ಪತ್ರೆಯಿಂದ ತೆರಳಿದ್ದಾರೆ. ಹೀಗಾಗಿ ಕಳೆದ 2013ನೇ ವರ್ಷಕ್ಕೆ ಹೋಲಿಸಿದರೆ ಶಿಶುಗಳ ಜನನ ಪ್ರಮಾಣ ದಾಖಲಾತಿ ಮಟ್ಟ ಸುಮಾರು 40%ನಷ್ಷು ತಗ್ಗಿದೆ ಎಂದು ಯುನಿಸೆಫ್(UNICEF) ಲೆಬೇರಿಯಾದಲ್ಲಿ ಕೈಗೊಂಡ ಅಧ್ಯಯನದಿಂದ ಈ ಮಾಹಿತಿ ತಿಳಿದು ಬಂದಿದೆ.[ಬೆಂಗಳೂರಲ್ಲಿ ಸೋಂಕು ರೋಗಗಳ ಪತ್ತೆಗೆ ಆಧುನಿಕ ಲ್ಯಾಬ್]

70,000 Liberian births unrecorded in Ebola crisis: UNICEF

ವರ್ಷದ ಮೊದಲ 5 ತಿಂಗಳಲ್ಲಿ ಕೇವಲ 700 ಮಕ್ಕಳನ್ನು ದಾಖಲಾತಿ ಪುಟಕ್ಕೆ ಸೇರಿದ್ದು, ಇನ್ನುಳಿದಂತೆ 70,000 ಶಿಶುಗಳು ಜನನ ದಾಖಲಾತಿಯಿಂದ ಹೊರಗುಳಿದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಲೈಬೇರಿಯಾ ಸರ್ಕಾರ ಹಾಗೂ ಯುನಿಸೆಫ್ ನ ಪ್ರತಿನಿಧಿ ಶೆಲ್ಡನ್ ಯೆಟ್ 'ಪೋಷಕರು ನವಜಾತ ಶಿಶುಗಳ ಜನನದ ಮಾಹಿತಿ ದಾಖಲಿಸದೆ, ಆಸ್ಪತ್ರೆಯಿಂದ ತೆರಳದಂತೆ ಎಚ್ಚರಿಕೆ ವಹಿಸಬೇಕು' ಎಂದು ಆಸ್ಪತ್ರೆ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದಾರೆ.

ಈ ಶಿಶುಗಳ ಜನನ ಮಾಹಿತಿ ದಾಖಲಾಗದಿದ್ದಲ್ಲಿ, ಈ ಮಕ್ಕಳು ಲೆಬೇರಿಯಾದ ನಾಗರಿಕ ಸದಸ್ಯತ್ವದಿಂದ ದೂರ ಉಳಿಯಬೇಕಾಗುತ್ತದೆ. ಅಕಸ್ಮಾತ್ ಎಬೋಲಾ ಮಹಾಮಾರಿಗೆ ದಾಖಲಾಗದ ಮಗು ತುತ್ತಾದಲ್ಲಿ ಮಗುವು ಹಲವಾರು ಆರೋಗ್ಯ ಸಂಬಂಧಿತ ಹಾಗೂ ಮೂಲಭೂತ ಸಾಮಾಜಿಕ ಸೇವಾ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ ಎಂದು ಯುನಿಸೆಫ್ ತಿಳಿಸಿದೆ.

ಎಬೋಲಾ ಮಹಾಮಾರಿಗೆ ಈಗಾಗಲೇ 28,000 ಜನರು ತುತ್ತಾಗಿದ್ದು, ಲೆಬೇರಿಯಾದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಸುಮಾರು 11,300 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಎಬೋಲಾ ರೋಗ ಮತ್ತು ಮಕ್ಕಳ ಜನನ ದಾಖಲಾತಿ ಕುರಿತಾಗಿ ಸದ್ಯದಲ್ಲಿಯೇ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಲೆಬೇರಿಯಾ ಸರ್ಕಾರ ಹಾಗೂ ಯುನಿಸೆಫ್ ಯೋಜನೆ ರೂಪಿಸುತ್ತಿದೆ.

English summary
More than 70,000 Liberian babies were born without being registered as the deadly Ebola epidemic ravaged the impoverished west African nation, leaving them without healthcare and vulnerable to trafficking.birth registrations plummeted by almost 40 per cent compared to 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X