• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಳು ತಿಂಗಳ ಈ ಚೆಂದದ ಗೊಂಬೆಯ ಕೂದಲು ಬಲು ಫೇಮಸ್

|

ನವದೆಹಲಿ, ಜುಲೈ 31: ಫ್ಯಾಷನ್‌ಗಾಗಿ ಕೂದಲಿಗೆ ಬಗೆಬಗೆಯ ವಿನ್ಯಾಸ ಮಾಡಿ ಸುತ್ತಾಡುವ ಯುವಕ-ಯುವತಿಯರನ್ನು ನೋಡಿರುತ್ತೀರಿ. ಕೂದಲು ಸಣ್ಣನೆ ಕತ್ತರಿಸಿದರೂ ಫ್ಯಾಷನ್, ಜಡೆಯಂತೆ ಉದ್ದನೆ ಬಿಟ್ಟರೂ ಫ್ಯಾಷನ್.

ಕೆಲವರ ಹೇರ್‌ಸ್ಟೈಲ್ ಯಾವಾಗಲೂ ಸದಾ ಸುದ್ದಿಯಲ್ಲಿರುತ್ತದೆ. ಅಂತಾರಾಷ್ಟ್ರೀಯ ಪಂದ್ಯ ಆಟ ಆರಂಭಿಸಿದಾಗ ಮಹೇಂದ್ರ ಸಿಂಗ್ ಧೋನಿ ಉದ್ದನೆಯ ಕೂಡಲು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಅಲ್ಲಿಂದೀಚೆಗೆ ಧೋನಿ ಪ್ರತಿ ಬಾರಿ ಹೇರ್‌ಸ್ಟೈಲ್ ಬದಲಿಸಿದಾಗಲೂ ಅದರ ಬಗ್ಗೆ ಚರ್ಚೆಗಳಾಗುತ್ತಿವೆ.

ಅಚ್ಚರಿ ಆದರೂ ನಿಜ.. ಇಲ್ಲಿ ನಾಲ್ಕು ತಿಂಗಳ ಮಗು ಮಾತನಾಡುತ್ತಿದೆ!

ಸೆಲೆಬ್ರಿಟಿಗಳ ನಾನಾ ಮಾದರಿಯ ಕೇಶ ವಿನ್ಯಾಸವನ್ನು ಅನುಸರಿಸುವ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಕೇಶವಿನ್ಯಾಸದ ಹುಚ್ಚು ಯಾವುದೇ ವಯಸ್ಸು, ಲಿಂಗ, ಪ್ರಾದೇಶಿಕತೆಗೆ ಸೀಮಿತವಲ್ಲ.

ಭಾರತದ ಬ್ಯಾಂಕುಗಳಿಗೆ ವಂಚಿಸಿದ ಆರೋಪಿ ವಿಜಯ್ ಮಲ್ಯ ಕೂಡ ಲಂಡನ್‌ನಲ್ಲಿ ತಮ್ಮ ವಿಶಿಷ್ಟ ಕೇಶ ವಿನ್ಯಾಸದಿಂದ ಗಮನ ಸೆಳೆದಿದ್ದಾರೆ. ಇನ್ನು ಕೂದಲು ಇಲ್ಲದವರ ಕೊರಗು, ಗೋಳು ಮತ್ತೊಂದೆಡೆ.

ಹುಟ್ಟಿದೊಡನೆಯೇ ನಡೆಯತೊಡಗಿತು ಬ್ರೆಜಿಲ್ ನ ಈ ಮಗು!

ಇವರೆಲ್ಲರ ನಡುವೆ ತನ್ನ ಕೂದಲಿನ ಕಾರಣಕ್ಕೇ ಸೆನ್ಸೇಷನ್ ಸೃಷ್ಟಿಸಿರುವ ಪುಟಾಣಿಯೊಬ್ಬಳಿದ್ದಾಳೆ.

ಏಳರ ಬಾಲೆಗೆ ಭರ್ಜರಿ ಡಿಮ್ಯಾಂಡ್

ಏಳರ ಬಾಲೆಗೆ ಭರ್ಜರಿ ಡಿಮ್ಯಾಂಡ್

ಎಲ್ಲ ಸೆಲೆಬ್ರಿಟಿಗಳನ್ನು ಮೀರಿಸಿದ ಹೊಸ ಸೆಲೆಬ್ರಿಟಿ ಜಪಾನ್‌ನಲ್ಲಿದ್ದಾಳೆ. ಈಕೆ ಹುಟ್ಟಿ ಕಳೆದಿರುವುದು ಏಳು ತಿಂಗಳು ಮಾತ್ರ. ಆದರೆ, ಈಕೆಯ ಅಭಿಮಾನಿಗಳ ಸಂಖ್ಯೆ ಲಕ್ಷವನ್ನೂ ದಾಟಿದೆ.

ಅಂತರ್ಜಾಲದಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಈ ಮುದ್ದುಗೊಂಬೆಯ ಹೆಸರು ಚಾಂಕೋ. ಜಪಾನ್‌ನ ಏಳು ತಿಂಗಳಿನ ಕಂದ ಅಂತರ್ಜಾಲ ಬಳಕೆದಾರರ ಹೃದಯ ಕದ್ದಿದ್ದಾಳೆ.

ಕೂದಲು ನೋಡಿ ಎಲ್ಲರೂ ಫಿದಾ

ಕೂದಲು ನೋಡಿ ಎಲ್ಲರೂ ಫಿದಾ

ಅಂದಹಾಗೆ, ಈ ಬಾಲೆ ಸೆಲೆಬ್ರಿಟಿಯಾಗಿರುವುದು ತನ್ನ ಬೆಣ್ಣೆಯಂತಹ ಕೆನ್ನೆಗಳಿಂದಲೋ, ಆ ಕೆನ್ನೆಗಳ ಮೇಲೆ ಬೀಳುವ ಗುಳಿಗಳಿಂದಲೋ ಅಥವಾ ತನ್ನ ತುಂಟತನದಿಂದಲೋ ಅಲ್ಲ. ಬದಲಾಗಿ ಕೂದಲಿನಿಂದ!

ಏಳು ತಿಂಗಳ ಮಗುವಿಗೆ ಎಷ್ಟೊ ಉದ್ದನೆಯ ಕೂದಲು ಬರಬಹುದು? ಈ ಕಂದಮ್ಮನ ಕೂದಲು ನೋಡಿದರೆ ಅಚ್ಚರಿಯಾಗುತ್ತದೆ. ಹೊಳೆಯುವ ದಪ್ಪ ಕೂದಲು ವಾವ್ ಎನ್ನಿಸುತ್ತದೆ.

ಇನ್‌ಸ್ಟಾಗ್ರಾಂನಲ್ಲಿ 1.5 ಲಕ್ಷ ಹಿಂಬಾಲಕರು

ಇನ್‌ಸ್ಟಾಗ್ರಾಂನಲ್ಲಿ 1.5 ಲಕ್ಷ ಹಿಂಬಾಲಕರು

ಚಾಂಕೋಳ ಹೆಸರಿನಲ್ಲಿ ಮೇ ತಿಂಗಳಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದ ಪೋಷಕರು ಅದರಲ್ಲಿ ಹಾಕಿದ್ದು ಆಕೆಯ 47 ಚಿತ್ರಗಳನ್ನು ಮಾತ್ರ.

ಎರಡೇ ತಿಂಗಳಿನಲ್ಲಿ ಚಾಂಕೋಳ ಇನ್‌ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆ ಎಷ್ಟಾಗಿದೆ ಗೊತ್ತೇ? ಬರೋಬ್ಬರಿ 1.5 ಲಕ್ಷ. ಇನ್‌ಸ್ಟಾ ಮಾತ್ರವಲ್ಲ, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಚಾಂಕೋಳ ಮುದ್ದಾದ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ಒಂದು ಪೋಸ್‌ಗೆ 10 ಸಾವಿರ ಲೈಕ್‌

ಮಕ್ಕಳ ತುಂಟತನದ, ಚೆಂದದ ಚಿತ್ರಗಳು, ವಿಡಿಯೋಗಳು ವೈರಲ್ ಆಗುವುದು ಸಹಜ. ಆದರೆ, ಚಾಂಕೋಳನ್ನು ಇಲ್ಲಿ ಫೇಮಸ್ ಮಾಡಿರುವುದು ಆಕೆಯ ಕೂದಲು.

ದಟ್ಟ ಕಾಡಿನಂತೆ ಬೆಳೆದ ಆಕೆಯ ಕೂದಲಿನ ವಿಚಿತ್ರ ವಿನ್ಯಾಸ ಎಲ್ಲರಿಗೂ ಅಚ್ಚುಮೆಚ್ಚಾಗುತ್ತಿದೆ. ಹೀಗಾಗಿ ಆಕೆಯ ಒಂದು ಪೋಸ್ಟ್‌ಗೆ ಕನಿಷ್ಠ 10 ಸಾವಿರ ಲೈಕ್‌ಗಳು ಬರುತ್ತಿವೆ.

ಮಗಳ ಕೂದಲಿನ ಜನಪ್ರಿಯತೆ ಕಂಡ ಪೋಷಕರು ಅದಕ್ಕೆ ಪರಿಣತ ಕೇಶವಿನ್ಯಾಸಕರಿಂದ ವಿಶಿಷ್ಟ ರೀತಿಯಲ್ಲಿ ವಿನ್ಯಾಸ ಮಾಡಿಸುತ್ತಿದ್ದಾರೆ.

ಭಾವನೆಗಳೂ ಚೆಂದ

ಭಾವನೆಗಳೂ ಚೆಂದ

ಚಾಂಕೋಳ ಕೂದಲು ಮಾತ್ರವಲ್ಲ, ಆಕೆಯ ಸ್ಟೈಲ್ ಕೂಡ ಆಕರ್ಷಣೀಯವಾಗಿದೆ. ತುಂಬಿದ ಕೆನ್ನೆಗಳ ನಡುವೆ ಪುಟಾಣಿ ಬಾಯಿಗಳನ್ನು ಅರಳಿಸಿ ನಗುತ್ತಾ, ಎಂಥಹವರ ಹೃದಯದಲ್ಲಿಯೂ ಪ್ರೀತಿಯ ಹೂ ಅರಳಿಸುವ ಚೆಂದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಆಕೆ ಕೊಡುವ ಪೋಸುಗಳಿಗೆ ಎಲ್ಲರೂ ಮಾರುಹೋಗುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಪಡೆದುಕೊಂಡಿರುವ ಅತ್ಯಂತ ಕಿರಿಯ ಬಾಲೆ ಎಂಬ ಹೆಗ್ಗಳಿಕೆಗೂ ಚಾಂಕೋ ಪಾತ್ರಳಾಗಿದ್ದಾಳೆ.

ಇಂಟರ್‌ನೆಟ್‌ನಲ್ಲಿ ದೂಳೆಬ್ಬಿಸಿದ ಪುಟಾಣಿ

ಟ್ವಿಟ್ಟರ್, ಇನ್‌ಸ್ಟಾಗ್ರಾಂಗಳಲ್ಲಿ ಈ ಪುಟಾಣಿಯ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಜನರು, ತನಗೂ ಈ ರೀತಿ ಕೂದಲು ಇರಬಾರದಿತ್ತೇ ಎಂದು ಹಲುಬುತ್ತಿದ್ದಾರೆ.

ಇನ್ನು ಕೆಲವು ಮಹಿಳಾಮಣಿಯರು ತಮಗೆ ಇಂಥದ್ದೇ ಕೂದಲಿರುವ ಮಗು ಹುಟ್ಟಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಹುಟ್ಟುವಾಗಲೇ ಸೊಂಪಾದ ಕೂದಲು

ಚಾಂಕೋ ಹುಟ್ಟಿದ್ದು 2017ರ ಡಿಸೆಂಬರ್‌ನಲ್ಲಿ. ಸಾಮಾನ್ಯವಾಗಿ ಮಕ್ಕಳು ಹುಟ್ಟುವಾಗ ಸ್ವಲ್ಪವೇ ಕೂದಲಿರುತ್ತದೆ. ಆದರೆ, ಚಾಂಕೋಳ ತಲೆತುಂಬ ಆಗಲೇ ಕೂದಲಿತ್ತು. ಕೆಲವೇ ತಿಂಗಳಿನಲ್ಲಿ ಅದು ಸಮೃದ್ಧವಾಗಿ ಬೆಳೆಯಿತು.

ತಮ್ಮ ಮುದ್ದು ಮಗಳ ಈ ಚೆಂದದ ಆಕಾರದ ಕೂದಲಿನ ಚಿತ್ರಗಳನ್ನು ಆಕೆಯ ಅಮ್ಮ ಸೆರೆಹಿಡಿಯತೊಡಗಿದರು. ಅಷ್ಟು ಚೆಂದದ ಫೋಟೊಗಳನ್ನು ತೆಗೆದು ತಾವೇ ಇಟ್ಟುಕೊಳ್ಳುವುದೇ? ನೋಡೋಣ ಎಂದು ಮಗಳ ಹೆಸರಿನಲ್ಲಿ ಇನ್‌ಸ್ಟಾ ಖಾತೆ ತೆರೆದು 'ಹೇರ್ ಡೈರ್' ಎಂಬ ಆಲ್ಬಂನಲ್ಲಿ ಕೆಲವು ಫೋಟೊಗಳನ್ನು ಹಾಕಿದರು.

ಅಲ್ಲಿಂದ ಅವರು ಊಹಿಸಿರದ ರೀತಿಯಲ್ಲಿ ಚಾಂಕೋ ಜನಪ್ರಿಯಳಾದಳು. ಕೆಲವೇ ಕೆಲವು ಫೋಟೊಗಳ ಕಾರಣದಿಂದ ಚಾಂಕೋ ಸುದ್ದಿಯಾಗಿದ್ದಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 7 months old baby girl from Japan become internet sensation by her lustrous and thick hair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more