ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!

ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸದ್ದು ಅನೇಕ ಸಾವುನೋವುಗಳ ಸಂಭವಿಸಲಿರುವ ಭೀತಿ ಎದುರಾಗಿದೆ. ಹಲವಾರು ಕಟ್ಟಡಗಳು ಧರೆಗುರುಳಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

|
Google Oneindia Kannada News

ಸೋಮವಾರ ಮುಂಜಾನೆ ದಕ್ಷಿಣ ಟರ್ಕಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.8 ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನಂತರ 6.7 ತೀವ್ರತೆಯ ಮತ್ತೊಂದು ಪ್ರಬಲ ಕಂಪನ ಸಂಭವಿಸಿದ್ದು ಅಪಾರ ಸಾವು ನೋವು ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.

USGS ಮಾಹಿತಿಯ ಪ್ರಕಾರ, ಆರಂಭಿಕ ಭೂಕಂಪ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದಿಂದ 26 ಕಿಮೀ ಪೂರ್ವಕ್ಕೆ 17.9 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಎರಡನೆಯದು ನಿಮಿಷಗಳ ನಂತರ ಮಧ್ಯ ಟರ್ಕಿಯಲ್ಲಿ 9.9 ಕಿಮೀ ಆಳದಲ್ಲಿ ಅಪ್ಪಳಿಸಿತು.

ಹಾನಿಯ ಪ್ರಮಾಣ ಮತ್ತು ಸಾವಿನ ಸಂಖ್ಯೆ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಮತ್ತು ವಿಡಿಯೊಗಳು ಅನೇಕ ಸಾವುನೋವುಗಳನ್ನು ಸೂಚಿಸುತ್ತವೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದಿವೆ ಮತ್ತು ಅನೇಕ ಜನರು ಅವಶೇಷಗಳಲ್ಲಿ ಸಿಲುಕಿರುವ ಭಯವಿದೆ ಎಂದು BNO ನ್ಯೂಸ್ ವರದಿ ಮಾಡಿದೆ.

7.8 Magnitude Earthquake in Turkey: Many Casualties Feared

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊಗಳು ಭಯಾನಕ ದೃಶ್ಯಗಳನ್ನೊಳಗೊಂಡಿವೆ. ಜನರು ಪ್ರಾಣಕ್ಕಾಗಿ ಕಿರುಚುತ್ತಿರುವುದು ಮತ್ತು ಓಡುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಮಾತ್ರವಲ್ಲದೆ ಸಿರಿಯಾ ಮತ್ತು ಯೆಮೆನ್‌ನಷ್ಟು ದೂರದಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

English summary
A 7.8-magnitude earthquake struck Turkey, with many casualties feared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X