ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ

|
Google Oneindia Kannada News

ಜರ್ಕಾತ್‌, ಸೆಪ್ಟೆಂಬರ್‌ 11: ಪೂರ್ವ ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕರಾವಳಿ ಪಟ್ಟಣವಾದ ಮಡಂಗ್ ಬಳಿ ಮತ್ತು ಒಳನಾಡಿನ ಕಟ್ಟಡಗಳಿಗೆ ಹಾನಿಯಾಗಿದೆ.

ಭೂಕಂಪವನ್ನು ವರದಿ ಮಾಡಿದ ಯುಎಸ್‌ ಜಿಯೋಲಾಜಿಕಲ್ ಸರ್ವೆ, ಸುನಾಮಿ ಎಚ್ಚರಿಕೆಯನ್ನು ನೀಡಿತು, ಆದರೆ ತರುವಾಯ ಸುನಾಮಿಯು ಹಾದುಹೋಗಿದೆ ಎಂದು ಹೇಳಿದೆ. ಆದರೆ ಕೆಲವು ಕರಾವಳಿ ಪ್ರದೇಶಗಳಲ್ಲಿ ಇನ್ನೂ ಸಣ್ಣ ಸಮುದ್ರ ಮಟ್ಟದ ಏರಿಳಿತಗಳು ಇರಬಹುದೆಂದು ಅದು ಸೂಚನೆ ನೀಡಿದೆ.

Breaking: ರಾಮನಗರದ ಕೆಲವು ಭಾಗದಲ್ಲಿ ಭೂ ಕಂಪನ!Breaking: ರಾಮನಗರದ ಕೆಲವು ಭಾಗದಲ್ಲಿ ಭೂ ಕಂಪನ!

ಪಪುವಾ ನ್ಯೂಗಿನಿಯಾದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಮತ್ತು ಕಟ್ಟಡಗಳಿಗೆ ಹಾನಿ ವರದಿಯಾಗಿದೆ. ದೇಶದಲ್ಲಿ ಭೂಕಂಪನದ ಕೇಂದ್ರಬಿಂದುದಿಂದ ಸುಮಾರು 300 ಮೈಲಿಗಳು (480 ಕಿಲೋಮೀಟರ್) ದೂರದಲ್ಲಿರುವ ಪೋರ್ಟ್ ಮೊರೆಸ್ಬಿಯ ರಾಜಧಾನಿಯವರೆಗೂ ಭೂಮಿ ವ್ಯಾಪಕವಾಗಿ ಅಲುಗಾಡಿದೆ.

7.6 magnitude earthquake hits Papua New Guinea

ಪೂರ್ವ ಎತ್ತರದ ಪಟ್ಟಣವಾದ ಗೊರೊಕಾದಲ್ಲಿನ ವಿಶ್ವವಿದ್ಯಾನಿಲಯದಲ್ಲಿನ ದೃಶ್ಯಗಳು ಮತ್ತು ವಿಡಿಯೋವು ಭೂಕಂಪದ ಸಮಯದಲ್ಲಿ ಗೋಡೆಗಳು ಮತ್ತು ಕಿಟಕಿ ಮೇಲ್ಕಟ್ಟುಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ ಎಂದು ತೋರಿಸಿವೆ. ಭೂಕಂಪನವು ಹಿಂದಿನ ಭೂಕಂಪಗಳಿಗಿಂತ ಹೆಚ್ಚು ಪ್ರಬಲವಾಗಿದೆ ಎಂದು ಭೂಕಂಪದ ಕೇಂದ್ರಕ್ಕೆ ಸಮೀಪವಿರುವ ಲೇ ಮತ್ತು ಮಡಂಗ್‌ನಲ್ಲಿರುವ ಸ್ಥಳೀಯರು ಎಎಫ್‌ಪಿಗೆ ತಿಳಿಸಿದ್ದಾರೆ.

ಚೀನಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 46ಕ್ಕೆ ಏರಿಕೆ- ಸಂತಾಪ ಸೂಚಿಸಿದ ಭಾರತಚೀನಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 46ಕ್ಕೆ ಏರಿಕೆ- ಸಂತಾಪ ಸೂಚಿಸಿದ ಭಾರತ

ಭೂಕಂಪವು ಬಹಳ ಬಲಶಾಲಿಯಾಗಿತ್ತು. ಎಲ್ಲವೂ ಸಮುದ್ರದ ಮೇಲೆ ಕುಳಿತು ಸುಮ್ಮನೆ ತೇಲುತ್ತಿರುವಂತೆ ಭಾಸವಾಗುತ್ತಿತ್ತು ಎಂದು ಮಡಂಗ್ ಬಳಿಯ ಜೈಸ್ ಅಬೆನ್ ರೆಸಾರ್ಟ್‌ನ ಕೆಲಸಗಾರ ಹಿವಿ ಅಪೋಕೋರ್ ಹೇಳಿದ್ದಾರೆ. ಕೈನಾಂಟು ಪಟ್ಟಣದಿಂದ ಸುಮಾರು 67 ಕಿಲೋಮೀಟರ್ ದೂರದಲ್ಲಿ 61 ಕಿಲೋಮೀಟರ್ (38 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್‌ ತಿಳಿಸಿದೆ.

7.6 magnitude earthquake hits Papua New Guinea

ಪಪುವಾ ನ್ಯೂ ಗಿನಿಯಾ ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವುದರಿಂದ ಇದು ಆಗಾಗ್ಗೆ ಭೂಕಂಪಗಳನ್ನು ಅನುಭವಿಸಲು ಕಾರಣವಾಗುತ್ತದೆ. ನೆರೆಯ ಇಂಡೋನೇಷ್ಯಾದಲ್ಲಿ 2004 ರಲ್ಲಿ 9.1 ತೀವ್ರತೆಯ ಭೂಕಂಪವು ಸುನಾಮಿಯನ್ನು ಪ್ರಚೋದಿಸಿತ್ತು. ಇದರಿಂದ ದೇಶದಲ್ಲಿ ಸುಮಾರು 1,70,000 ಸೇರಿದಂತೆ ಪ್ರದೇಶದಾದ್ಯಂತ 2,20,000 ಜನರನ್ನು ಬಲಿಪಡೆದಿತ್ತು.

English summary
A 7.6-magnitude earthquake struck eastern Papua New Guinea on Sunday, damaging buildings near the coastal town of Madang and inland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X