ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಭೂಕಂಪ: 5 ಮಂದಿ ಸಾವು

|
Google Oneindia Kannada News

ಮೆಕ್ಸಿಕೋ, ಜೂನ್ 24: ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ. 5 ಮಂದಿ ಮೃತಪಟ್ಟಿದ್ದಾರೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada
7.4 Magnitude Earthquake Hits Southers Mexico

ದಕ್ಷಿಣ ಮೆಕ್ಸಿಕೋದಲ್ಲಿ ಐವರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಮನೆಯಿಂದ ರಸ್ತೆಗೆ ಓಡಿ ಬಂದಿದ್ದಾರೆ. ಮನೆಗಳು ಕುಸಿದಿವೆ, ರಸ್ತೆಗಳು ಬಿರುಕುಬಿಟ್ಟಿವೆ.

ಹುವಾಟುಲ್ಕೋದಲ್ಲಿ ಕಟ್ಟಡ ಕುಸಿತದಿಂದ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿರುವುದಾಗಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಯಲ್ ತಿಳಿಸಿದ್ದಾರೆ.

ಅದನ್ನು ಹೊರತುಪಡಿಸಿ ಭೀಕರ ಭೂಕಂಪ ಸಂಭವಿಸಿದರೂ ಕೆಲವು ಕಡೆ ಗೋಡೆ ಕುಸಿತ, ಕಿಟಕಿಗಳ ಗಾಜು ಮುರಿದಿರುವುದು ಸೇರಿದಂತೆ ಹೆಚ್ಚೇನು ಅನಾಹುತ ಸಂಭವಿಸಿಲ್ಲ. ಸ್ಯಾನ್ ಜುವಾನ್‌ನ ಮನೆಯೊಂದು ಕುಸಿದುಬಿದ್ದು ಮತ್ತೋರ್ವ ಮೃತಪಟ್ಟಿರುವುದಾಗಿ ಗವರ್ನರ್ ಓಆಕ್ಸಾಕಾ ಮಾಹಿತಿ ನೀಡಿದ್ದಾರೆ.

ಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲುಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲು

ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಯಂತ್ರ ಬಿದ್ದು ಅವರು ಮೃತಪಟ್ಟಿದ್ದಾರೆ. ಮತ್ತೋರ್ವ ಅಓವಾಕ್ಸಾ ಪ್ರದೇಶದಲ್ಲಿ ಮನೆಯ ಗೋಡೆ ಬಿದ್ದು ಸಾವನ್ನಪ್ಪಿದ್ದಾರೆ. ಭೂಕಂಪ ಕೇಂದ್ರ ಬಿಂದು ಪ್ರದೇಶದಲ್ಲಿ ಬೆಂಕಿ ಕೂಡ ಉತ್ಪತ್ತಿಯಾಗಿತ್ತು. ಇದರಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ.

ಚರ್ಚ್, ಹೆದ್ದಾರಿಗಳು, ಬ್ರಿಡ್ಜ್‌ಗಳಿಗೂ ಕೂಡ ಹಾನಿಯುಂಟಾಗಿದೆ. ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ಜನರಿಗೆ ತಕ್ಷಣಕ್ಕೆ ಏನಾಗುತ್ತಿದೆ ಎನ್ನುವ ಅರಿವು ಬಂದಿರಲಿಲ್ಲ, ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಪೊಲೀಸರು ಹೆಲಿಕಾಪ್ಟರ್‌ನಲ್ಲಿ ಬಂದು ಸೈರನ್ ಹಾಕಿ ಭೂಕಂಪದ ಕುರಿತು ಎಚ್ಚರಿಕೆ ನೀಡಿದ್ದರು.

ಕಳೆದ 35 ವರ್ಷಗಳಿಂದ 7ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿಲ್ಲ. 1985ರಲ್ಲಿ 8.0 ತೀವ್ರತೆಯ ಭೂಕಂಪ ಸಂಭವಿಸಿದ್ದು, 10 ಸಾವಿರ ಮಂದಿ ಮೃತಪಟ್ಟಿದ್ದರು.

English summary
A 7.4 magnitude earthquake that hit Mexico's Southers coastline, collapsing buildngs and prompting evacualtions, has left at least Five people dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X