ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕ್ವಿಂಗೈ ಪ್ರಾಂತ್ಯದಲ್ಲಿ 7.4 ತೀವ್ರತೆಯ ಭೂಕಂಪ

|
Google Oneindia Kannada News

ಚೀನಾ, ಮೇ 22: ಚೀನಾದಲ್ಲಿ 7.4 ತೀವ್ರತೆಯ ಭೂಕಂಪ ದಾಖಲಾಗಿರುವುದಾಗಿ ವರದಿಯಾಗಿದೆ. ಶುಕ್ರವಾರ ರಾತ್ರಿ ಯುನ್ನಾನ್‌ನ ನೈಋತ್ಯ ಭಾಗದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಐದು ಗಂಟೆಗಳ ಅಂತರದಲ್ಲೇ ಮತ್ತೊಂದು ಭೂಕಂಪ ಸಂಭವಿಸಿದೆ.

ಎರಡನೇ ಬಾರಿ ದಕ್ಷಿಣ ಕ್ವಿಂಗೈ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ನಗರಗಳಿಂದ ದೂರವಿರುವ ಕಾರಣ ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

7.4 Magnitude Earthquake Hits Southern Qinghai Province At China

ಕ್ವಿಂಗೈನಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ಬೆಳಿಗ್ಗೆ 2:04 ಕ್ಕೆ (1804 ಜಿಎಂಟಿ ಶುಕ್ರವಾರ) 10 ಕಿಲೋಮೀಟರ್ (ಆರು ಮೈಲಿಗಳು) ಆಳದಲ್ಲಿ, ಕ್ಸೈನಿಂಗ್ ನಗರದ ನೈರುತ್ಯಕ್ಕೆ 400 ಕಿ.ಮೀ ದೂರದಲ್ಲಿದೆ ಎಂದು ಯುಎಸ್ ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ

ಈ ಎರಡು ಭೂಕಂಪಗಳ ಕೇಂದ್ರಬಿಂದು ಸುಮಾರು 500 ಮೈಲುಗಳ ದೂರದಲ್ಲಿದ್ದು, ಇವೆರಡೂ ಭೂಕಂಪಗಳು ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಘರ್ಷಣೆಯ ಫಲವಾಗಿದೆ ಎಂದು ಯುಎಸ್‌ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಎರಡು ಭೂಕಂಪದಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

English summary
Massive magnitute of 7.4 earthquake hits southern Qinghai province at china on may 21
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X