ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ಮಲುಕು ದ್ವೀಪದಲ್ಲಿ 7.3 ತೀವ್ರತೆಯ ಪ್ರಮುಖ ಭೂಕಂಪನ

|
Google Oneindia Kannada News

ಪೂರ್ವ ಇಂಡೋನೇಷ್ಯಾದ ಮಲುಕು ದ್ವೀಪದಲ್ಲಿ ಭಾನುವಾರ 7.3 ತೀವ್ರತೆಯ ಪ್ರಮುಖ ಭೂಕಂಪನ ಸಂಭವಿಸಿದೆ. ಗಾಬರಿಯಿಂದ ಸ್ಥಳೀಯರು ಮನೆಯಿಂದ ಬೀದಿಗೆ ಓಡಿ ಬಂದಿದ್ದಾರೆ. ಸದ್ಯಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ. ಉತ್ತರ ಮಲುಕು ಪ್ರಾಂತ್ಯದ ನೈರುತ್ಯ ಭಾಗಕ್ಕೆ 165 ಕಿ.ಮೀ. ದೂರದ ಟರ್ನೇಟ್ ಪಟ್ಟಣದಲ್ಲಿ ಕೇಂದ್ರೀಕೃತ ಆಗಿತ್ತು.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ:7.1 ತೀವ್ರತೆ ದಾಖಲುದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ:7.1 ತೀವ್ರತೆ ದಾಖಲು

ಸ್ಥಳೀಯ ಕಾಲಮಾನ ಸಂಜೆ 6.28ಕ್ಕೆ 10 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ತಿಳಿಸಿದೆ. ಈ ಭೂಕಂಪನವು ಪ್ರಬಲವಾಗಿತ್ತು. ಭಯದಿಂದ ಸ್ಥಳೀಯರು ಮನೆಗಳಿಂದ ಹೊರಗೆ ಓಡಿಬಂದರು. ಅವರು ಬಹಳ ಹೆದರಿದ್ದರು. ಹಲವರು ರಸ್ತೆ ಬದಿಯಲ್ಲಿ ನಿಂತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

7.3 magnitude major earthquake in eastern Indonesia

ಹಾನಿ ಯಾವ ಪ್ರಮಾಣದಲ್ಲಿ ಆಗಿದೆ ಎಂಬ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸಾವು- ನೋವಿನ ಬಗ್ಗೆ ವರದಿ ಆಗಿಲ್ಲ. ಕಳೆದ ವಾರ ಇದೇ ಪ್ರಾಂತ್ಯದಲ್ಲಿ 6.9 ತೀವ್ರತೆಯ ಭೂ ಕಂಪನ ಸಂಭವಿಸಿತ್ತು. ಆದರೆ ಯಾವುದೇ ದೊಡ್ಡ ಮಟ್ಟದ ಹಾನಿ ವರದಿ ಆಗಿಲ್ಲ.

English summary
7.3 magnitude major earthquake in eastern Indonesia northern Malaku province on Monday. Damage evaluation are doing by officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X