ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪ್ಪೈನ್ಸ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ

|
Google Oneindia Kannada News

ಮನೀಲಾ, ಜನವರಿ 21: ದ್ವೀಪ ದೇಶ ಫಿಲಿಪ್ಪೈನ್ಸ್‌ನಲ್ಲಿ ರಿಕ್ಟರ್ ಮಾಪನದಲ್ಲಿ 7.0 ತೀವ್ರತೆಯ ಭೂಕಂಪ ಉಂಟಾಗಿದೆ. ಭಾರತೀಯ ಕಾಲಮಾನ ಸಂಜೆ 5.53ರ ಸುಮಾರಿಗೆ ಫಿಲಿಪ್ಪೈನ್ಸ್‌ನ ಪೊಂಡಗಿಟಾನ್ ಪ್ರದೇಶ ಆಗ್ನೇಯ ಭಾಗದ 210 ಕಿಮೀ ದೂರದಲ್ಲಿ ಗುರುವಾರ ಭೂಮಿ ಪ್ರಬಲವಾಗಿ ಕಂಪಿಸಿದೆ.

ಜನರಲ್ ಸಾಂಟೊಸ್ ಸಿಟಿಯಲ್ಲಿ 5ರಷ್ಟು ತೀವ್ರತೆ, ಡಾವಾವೊ ನಗರದಲ್ಲಿ 4ರಷ್ಟು ತೀವ್ರತೆ ಮತ್ತು ಬಿಸ್ಲಿಗ್ ಹಾಗೂ ಸುರಿಗಾವೊಗಳಲ್ಲಿ ಶೇ 2ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿದೆ.

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 40ಕ್ಕೂ ಹೆಚ್ಚು ಜನರು ಸಾವುಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 40ಕ್ಕೂ ಹೆಚ್ಚು ಜನರು ಸಾವು

2020ರ ಡಿಸೆಂಬರ್ 29ರಂದು ರಿಕ್ಟರ್ ಮಾಪನದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪನ ಫಿಲಿಪ್ಪೈನ್ಸ್‌ನ ದ್ವೀಪ ಮಿಂಡಾನಾವೊದಲ್ಲಿ ಸಂಭವಿಸಿತ್ತು. ಇದು ಅಲ್ಪ ಪ್ರಮಾಣದ ಸುನಾಮಿ ಭೀತಿ ಸೃಷ್ಟಿಸಿತ್ತು.

7.0 Magnitude Strong Earthquake Hits Philippiness Pondaguitans

ಫಿಲಿಪ್ಪೈನ್ಸ್ ಮತ್ತು ಇಂಡೋನೇಷ್ಯಾಗಳು 'ಅಗ್ನಿಯ ವರ್ತುಲ' ಎಂದೇ ಕರೆಯಲಾಗುವ ಪೆಸಿಫಿಕ್ ಸಾಗರ ಪ್ರದೇಶದಲ್ಲಿವೆ. ಇಲ್ಲಿ ನಿರಂತರವಾಗಿ ಭೂಕಂಪನ ಹಾಗೂ ಅಗ್ನಿಪರ್ವತ ಸ್ಫೋಟದ ಘಟನೆಗಳು ನಡೆಯುತ್ತಿರುತ್ತವೆ.

2013ರಲ್ಲಿ ಫಿಲಿಪ್ಪೈನ್ಸ್‌ನಲ್ಲಿ 7.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದು ಭಾರಿ ಪ್ರಮಾಣದ ಅನಾಹುತಕ್ಕೆ ಕಾರಣವಾಗಿತ್ತು. ಆಗ 220ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೊಳಗಾಗಿತ್ತು.

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 7 ಸಾವು, ನೂರಾರು ಮಂದಿಗೆ ಗಾಯಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 7 ಸಾವು, ನೂರಾರು ಮಂದಿಗೆ ಗಾಯ

ಇಂಡೋನೇಷ್ಯಾ ಈಗಾಗಲೇ ಎರಡು ಬಾರಿ ಪ್ರಬಲ ಸುನಾಮಿ ಸನ್ನಿವೇಶಗಳನ್ನು ಎದುರಿಸಿದೆ. ಕಳೆದ ವಾರಾಂತ್ಯದಲ್ಲಿ ಅಗ್ನಿಪರ್ವತವೊಂದು ಬಿಸಿ ಹೊಗೆ ಉಗುಳಿ 400ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ಪೂರ್ವ ಜಾವಾ ದ್ವೀಪ ಮತ್ತು ದಕ್ಷಿಣ ಸುಮಾತ್ರಾ ಕರಾವಳಿಗಳಲ್ಲಿ ತನ್ನ ಪ್ರಕೋಪ ಪ್ರದರ್ಶಿಸಿತ್ತು.

English summary
7.0 Magnitude strong earthquake hits Philippines's Pondaguitans on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X