ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೃದ್ಧ ಜೀವನಕ್ಕೆ ವಾರದಾಗೆ ಆರು ದಿನ, ಆರು ಸರತಿ ಮಿಲನ ಮಹೋತ್ಸವ ಮಾಡಿಕೊಳ್ಳಿ ಎಂದ 'ಆಲಿಬಾಬಾ' ಜಾಕ್ ಮಾ

|
Google Oneindia Kannada News

ಆಲಿಬಾಬಾ ಎಂಬ ಆನ್ ಲೈನ್ ಕಂಪೆನಿಯ ಸ್ಥಾಪಕ, 'ಅಣ್ಣಯ್ಯ' ಜಾಕ್ ಮಾ ತಮ್ಮ ಕಂಪೆನಿ ಉದ್ಯೋಗಿಗಳಿಗೆ ಮತ್ತೊಂದು ಅತ್ಯಮೋಘ ಸಲಹೆ ನೀಡಿದ್ದಾರೆ. ನಿಮ್ಮ ಜೀವನ ಸುಧಾರಣೆಗೆ ವಾರದಲ್ಲಿ 6 ದಿನ 6 ಸಲ ಮಿಲನ ಮಹೋತ್ಸವ ನಡೆಸಿ ಎಂದಿದ್ದಾರೆ. (ಸಮಯವನ್ನು ಅಂದಾಜು 9 ಗಂಟೆ ಅಂದುಕೊಳ್ಳಿ) 669 ಇದು ಅವರ ಹೊಸ ಸೂತ್ರ.

ಇದಕ್ಕೂ ಮುನ್ನ ಅವರು, ಬೆಳಗ್ಗೆ 9ರಿಂದ ರಾತ್ರಿ 9ರ ತನಕ, ವಾರದ 6 ದಿನ ಕೆಲಸ ಮಾಡಿ ಎನ್ನುವ ಮೂಲಕ '996' ಲೆಕ್ಕಾಚಾರ ಮುಂದಿಟ್ಟು, ಭಾರೀ ಟೀಕೆಗೆ ಗುರಿಯಾಗಿದ್ದರು. ಚೀನಾದ ಶ್ರೀಮಂತ ವ್ಯಕ್ತಿ ಜಾಕ್ ಮಾ ಈ ಸಲಹೆ ನೀಡಿರುವುದು ತಮ್ಮ ಕಂಪೆನಿಯಲ್ಲಿ ವರ್ಷಾವರ್ಷ ನಡೆಸುವ ಉದ್ಯೋಗಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ.

ಭೂತಾನ್ ನ ಪ್ರಧಾನಿ ಶನಿವಾರ- ಗುರುವಾರ ಶುದ್ಧಾನು ಶುದ್ಧ ವೈದ್ಯೋ ನಾರಾಯಣೋ ಹರಿಃಭೂತಾನ್ ನ ಪ್ರಧಾನಿ ಶನಿವಾರ- ಗುರುವಾರ ಶುದ್ಧಾನು ಶುದ್ಧ ವೈದ್ಯೋ ನಾರಾಯಣೋ ಹರಿಃ

ಕೆಲಸದ ವಿಚಾರಕ್ಕೆ ಬಂದರೆ ನಮಗೆ '996' ಸ್ಫೂರ್ತಿ ಆಗಬೇಕು. ಅದೇ ಜೀವನದಲ್ಲಿ '669' ಅನುಸರಿಸಬೇಕು ಎಂದು 54 ವರ್ಷದ ಜಾಕ್ ಮಾ ಸಲಹೆ ನೀಡಿದ್ದಾರೆ. ಪ್ರತಿ ವರ್ಷ ಮೇ 10ನೇ ತಾರೀಕು 'ಅಲಿ ಡೇ' ಎಂದು ಕಂಪೆನಿಯ ಮುಖ್ಯ ಕಚೇರಿಯ ಹಂಗ್ ಝೌನಲ್ಲಿ ಆಚರಿಸಲಾಗುತ್ತದೆ. ಅ ದಿನ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

669 -New suggestion by Alibabas Jack Ma to improve life

ಈ ಹಿಂದೆ 996 ಕೆಲಸದ ಸಂಸ್ಕೃತಿಯಲ್ಲಿ ಟೆಕಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ '669' ಸಲಹೆಗೂ ಭಾರೀ ಪ್ರತಿಕ್ರಿಯೆಗಳು ಕೇಳಿಬಂದಿವೆ. ಈ ಭೂಮಿ ಮೇಲೆ 996 ಕೆಲಸ ಮಾಡಿ ಬಂದ ಮೇಲೆ 669ಕ್ಕೆ ತ್ರಾಣ ಎಲ್ಲಿರುತ್ತದೆ ಎಂದು ಕೇಳಿದ್ದಾರೆ. ವೈಬೋದಲ್ಲಿನ ಆಲಿಬಾಬಾದ ಅಧಿಕೃತ ಪೇಜ್ ನಲ್ಲಿ 669 ಬಗ್ಗೆ ಪೋಸ್ಟ್ ಮಾಡಲಾಗಿದೆ.

ಸಾರ್ವಜನಿಕವಾಗಿ ಇಂಥ ಅಸಭ್ಯ ಹಾಸ್ಯ ಮಾಡಿ, ಅದನ್ನು ಸಿಕ್ಕಾಪಟ್ಟೆ ಪ್ರಮೋಟ್ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಅಪ್ರಾಪ್ತರ ಮೇಲೆ ಇದರಿಂದ ಆಗುವ ಪರಿಣಾಮಕ್ಕೆ ಯಾರು ಹೊಣೆ ಎಂದು ಕೇಳಲಾಗಿದೆ.

English summary
669 -New suggestion to his company employees by 'Alibaba's founder and China's richest man Jack Ma to improve life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X