• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!

By ಅನಿಕೇತ್
|

ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನ ಉಗ್ರರ ಸ್ವರ್ಗ ಅನ್ನೋದು ಮತ್ತೆ ಸಾಬೀತಾಗಿದೆ. ನೆರೆರಾಷ್ಟ್ರಗಳ ಜೊತೆ ಕಾದಾಟಕ್ಕೆ ಉಗ್ರರನ್ನು ಬೇಟೆ ನಾಯಿಗಳಂತೆ ಬಳಸಿಕೊಳ್ಳುತ್ತಿರುವ ಪಾಕ್ ಅಫ್ಘಾನಿಸ್ತಾನದಲ್ಲೂ ಟೆರರಿಸ್ಟ್‌ಗಳನ್ನ ಪೋಷಿಸುತ್ತಿರುವುದು ಸಾಬೀತಾಗಿದೆ. ಪಾಕ್ ಮೂಲದ ಉಗ್ರ ಸಂಘಟನೆಗಳಿಗೆ ಸೇರಿದ 6500ಕ್ಕೂ ಹೆಚ್ಚು ಉಗ್ರರು ಅಫ್ಘಾನ್‌ನಲ್ಲಿದ್ದಾರೆ ಅಂತಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿಳಿಸಿದೆ.

   India and Nepal border dispute explained | Oneindia Kannada

   ಹೀಗೆ ಬೇರೂರಿರುವ ಉಗ್ರರ ಪೈಕಿ ಬಹುತೇಕರು ತೆಹ್ರಿಕ್‌-ಇ-ತಾಲಿಬಾನ್‌ ಪಾಕಿಸ್ತಾನ್‌‌ ಅಥವಾ ಟಿಟಿಪಿ ಸಂಘಟನೆಗೆ ಸೇರಿದವರು. ಇವರಿಂದ ಎರಡೂ ದೇಶಗಳಿಗೆ ತೊಂದರೆ ಆಗಿದೆ ಅಂತಾ ಭದ್ರತಾ ಮಂಡಳಿ ವರದಿ ನೀಡಿದೆ. ಉಗ್ರರ ಕೂಪವಾಗಿ ನರಳಾಡುತ್ತಿರುವ ಅಫ್ಘಾನಿಸ್ತಾನದಲ್ಲಿ 20ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ಅಲ್ಲಿನ ಸರ್ಕಾರದ ವಿರುದ್ಧ ಕಾದಾಡುತ್ತಾ ಬಂದಿವೆ. ಇತ್ತೀಚೆಗೆ ಅಫ್ಘಾನ್‌ ಪಾರ್ಲಿಮೆಂಟ್ ಬಳಿ ಪ್ರಬಲ ಬಾಂಬ್ ಸ್ಫೋಟಿಸಿದ್ದ ಉಗ್ರರು, ಅಫ್ಘಾನ್‌ ಸಂಸತ್ತನ್ನೇ ನಡುಗಿಸಿದ್ದರು. ಹೀಗೆ ದಾಳಿ ಮಾಡುತ್ತಿರುವ ಉಗ್ರರ ಮೂಲ ಬಯಲಾಗಿದ್ದು, ಪಾಕಿಸ್ತಾನದ ಕುತಂತ್ರ ಮತ್ತೊಮ್ಮೆ ಸಾಬೀತಾಗಿದೆ.

   ಮೆಹ್ಸೂದ್‌ & ಗ್ಯಾಂಗ್ ಸಕ್ರಿಯ

   ಮೆಹ್ಸೂದ್‌ & ಗ್ಯಾಂಗ್ ಸಕ್ರಿಯ

   ಇದು ಅಲ್ ಖೈದಾ, ಐಎಸ್‌ಐಎಸ್‌ ಮತ್ತಿತರ ಸಂಘಟನೆಗಳಿಗೆ ಸಂಬಂಧಿಸಿದ ಅನಾಲಿಟಿಕಲ್ ರಿಪೋರ್ಟ್. ವರದಿ ಪ್ರಕಾರ ಅಮಿರ್ ನೂರ್‌ ವಾಲಿ ಮೆಹ್ಸೂದ್‌ ನೇತೃತ್ವದ ಟಿಟಿಪಿ, ಅಫ್ಘಾನಿಸ್ತಾನದಲ್ಲಿ ಹಿಂಸೆ ನಡೆಸುತ್ತಿರುವ ದೊಡ್ಡ ಸಂಘಟನೆ. ಟಿಟಿಪಿ ಪಾಕಿಸ್ತಾನದಲ್ಲೂ ಹೀನ ಕೃತ್ಯಗಳನ್ನು ನಡೆಸಿದ್ದು, ಹಲವು ದೊಡ್ಡ ದಾಳಿಯ ಹೊಣೆ ಹೊತ್ತಿದೆ. ಈ ಹಿಂದೆ ಟಿಟಿಪಿ ಸದಸ್ಯರಾಗಿದ್ದ ಉಗ್ರರು ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಮತ್ತು ಲೆವಂಟ್‌ ಖೋರಸಾನ್‌ ಜೊತೆ ಸೇರಿದ್ದಾರೆ ಎಂಬುದು ರಿವೀಲ್ ಆಗಿದೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಸಕ್ರಿಯರಾಗಿರುವ 6000-6500 ಉಗ್ರರು ದೊಡ್ಡ ಕೃತ್ಯಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಸುಳಿವು ಭದ್ರತಾ ಮಂಡಳಿಗೆ ಸಿಕ್ಕಿದೆ.

   ಕೊರೊನಾವೈರಸ್‌ಗೆ ಹೆದರಿ ಬಾಲ ಮುದುರಿಕೊಂಡ ಉಗ್ರರು

   ಉಗ್ರರ ಹಾಟ್‌ಸ್ಪಾಟ್ ಅಫ್ಘಾನ್‌

   ಉಗ್ರರ ಹಾಟ್‌ಸ್ಪಾಟ್ ಅಫ್ಘಾನ್‌

   ಉಗ್ರರ ತವರು ಅಫ್ಘಾನಿಸ್ತಾನದಲ್ಲಿ ಹತ್ತಾರು ವರ್ಷಗಳಿಂದ ನೆಮ್ಮದಿಯೇ ಇಲ್ಲ. ಎಲ್ಲಿ, ಯಾವಾಗ ಬಾಂಬ್ ಸಿಡಿಯುತ್ತೋ ಎಂಬ ಆತಂಕದಲ್ಲಿಯೇ ದಿನದೂಡಬೇಕಿದೆ. ಜನ ಜೀವ ಕೈಯಲ್ಲಿ ಹಿಡಿದು ಹೊರಗೆ ಬರಬೇಕು. ಇಂತಹ ಸ್ಥಿತಿಯಲ್ಲಿ ಅಫ್ಘಾನ್‌ನಲ್ಲಿ ಶಾಂತಿ ಸ್ಥಾಪಿಸಲು ಬೇಕಾದ ಎಲ್ಲಾ ಪ್ರಯತ್ನಗಳು ನಡೆದಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಸದ್ಯದ ಮಟ್ಟಿಗೆ ಅಫ್ಘಾನ್‌ ಉಗ್ರರ ತವರು ಭೂಮಿ. ಇದಕ್ಕೆ ತುಪ್ಪ ಸುರಿಯುತ್ತಿರುವ ಪಾಪಿ ಪಾಕಿಸ್ತಾನ ಮತ್ತಷ್ಟು ಉಗ್ರರನ್ನ ಅಫ್ಘಾನ್‌ಗೆ ನುಗ್ಗಿಸುತ್ತಿದೆ. ತಿನ್ನಲು ಅನ್ನವಿಲ್ಲದೆ ಪರದಾಡುತ್ತಿರುವ ತನ್ನ ಪ್ರಜೆಗಳ ಹಿತಾಸಕ್ತಿ ಬಿಟ್ಟು, ಬೇರೆ ದೇಶಗಳ ನೆಮ್ಮದಿ ಕೆಡಿಸುವಲ್ಲಿ ಪಾಕ್ ನಿರತವಾಗಿದೆ.

   ಲಾಡೆನ್‌ ಹುತಾತ್ಮ ಎಂದಿದ್ದ ಇಮ್ರಾನ್..!

   ಲಾಡೆನ್‌ ಹುತಾತ್ಮ ಎಂದಿದ್ದ ಇಮ್ರಾನ್..!

   ಪಾಕ್ ಎಷ್ಟರಮಟ್ಟಿಗೆ ಉಗ್ರರ ಸಮರ್ಥಕ ಎಂದರೆ ಕಳೆದ ತಿಂಗಳು ಪಾಕ್ ಅಸೆಂಬ್ಲಿಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಲಾಡೆನ್ ಹುತಾತ್ಮ ಎಂದಿದ್ದರು. ಇದು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಮೂಲಕ ಪಾಕ್ ಉಗ್ರ ಪೋಷಕ ಅಂತಾ ಇಮ್ರಾನ್ ಸಾಬೀತು ಮಾಡಿದ್ದರು. ಒಟ್ಟಾರೆ ಹೇಳುವುದಾದರೆ ಭಾರತದ ವಿರುದ್ಧವೂ ಹಲ್ಲು ಮಸೆಯುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಲಕ್ಷಣಗಳು ಕಾಣುತ್ತಿಲ್ಲ.

   ಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದು

   ವಿಶ್ವಸಂಸ್ಥೆಯಲ್ಲಿ ಆಕ್ರೋಶ ಹೊರ ಹಾಕಿದ ಭಾರತ

   ವಿಶ್ವಸಂಸ್ಥೆಯಲ್ಲಿ ಆಕ್ರೋಶ ಹೊರ ಹಾಕಿದ ಭಾರತ

   ಭಾರತದಲ್ಲಿ ಹಲವು ಕೃತ್ಯಗಳಿಗೆ ಕಾರಣವಾಗಿರುವ ಪಾಕಿಸ್ತಾನ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಆಕ್ರೋಶ ಹೊರ ಹಾಕಿದೆ. ಆದರೆ ಚೀನಾ ಹಾಗೂ ‘ಪಾಪಿ'ಸ್ತಾನದ ಮಿತ್ರ ರಾಷ್ಟ್ರಗಳು ಭಾರತದ ಈ ವಾದವನ್ನು ಬೆಂಬಲಿಸಿರಲಿಲ್ಲ. ಆದರೆ ಈಗ ಸಾಕ್ಷಿ ಸಮೇತ ಪಾಕ್ ಸಿಕ್ಕಿಬಿದ್ದಿದ್ದು, ವಿಶ್ವಸಂಸ್ಥೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

   ತಾಲಿಬಾನಿ ಉಗ್ರರಿಗೆ ಹೊಸ ನಾಯಕನಾದ ಯಾಕೂಬ್!

   English summary
   6,500 Pakistani Terrorists Present In Afghanistan. Most Of Them Belongs To Tehrik-e Taliban Pakistan Or TTP, According To A Report By United Nations Security Council. The Report Stated That TTP Is A Large Terrorist Group Present In Afghanistan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X