ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ 2020ರಲ್ಲಿ 65 ಪತ್ರಕರ್ತರ ಹತ್ಯೆ, ಯಾವ ದೇಶದಲ್ಲಿ ಹೆಚ್ಚು?

|
Google Oneindia Kannada News

ಬ್ರುಸೆಲ್ಸ್, ಮಾರ್ಚ್ 12: 2020ರಲ್ಲಿ ಜಗತ್ತಿನಾದ್ಯಂತ 65 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತಿಳಿಸಿದೆ.

ಸುಮಾರು 16 ರಾಷ್ಟ್ರಗಳಲ್ಲಿ ಮಾಧ್ಯಮ ವ್ಯಕ್ತಿಯನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿರುವುದು, ಬಾಂಬ್ ಹಾಗೂ ಗುಂಡಿನ ದಾಳಿಗಳ ಮೂಲಕ ಹತ್ಯೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ ಬರ್ಬರ ಹತ್ಯೆ !ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ ಬರ್ಬರ ಹತ್ಯೆ !

ಹಾಗೆಯೇ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನೂ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಪ್ರಕಟಿಸಿದೆ. 2019 ರಲ್ಲಿ ಹತ್ಯೆ ಪ್ರಕರಣಗಳಿಗಿಂತ 17 ಹೆಚ್ಚು ಹಾಗೂ ಸರಿಸುಮಾರು 1990ರಲ್ಲಿ ನಡೆದಿದ್ದ ಹತ್ಯೆಗಳಷ್ಟೇ ಸಂಖ್ಯೆ 2020ರಲ್ಲಿಯೂ ದಾಖಲಾಗಿದೆ ಎಂದಿದೆ.

 65 Journalists And Media Workers Killed Doing Their Job In 2020, Study Shows

ಸೊಮಾಲಿಯಾ, ಇರಾಕ್, ಪರಾಗ್ವೆ, ಬಾಂಗ್ಲಾದೇಶ, ರಷ್ಯಾ, ಸ್ವೀಡನ್ ಹಾಗೂ ಕ್ಯಾಮೆರೂನ್‌ನಲ್ಲೂ ಪತ್ರಕರ್ತರ ಹತ್ಯೆಯಾಗಿದೆ. 1990ರಿಂದ ಹತ್ಯೆಗೀಡಾದ ಪತ್ರಕರ್ತರ ವಿವರಗಳನ್ನು ಐಎಫ್‌ಜೆ ಸಂಗ್ರಹಿಸುತ್ತಿದ್ದು, ಈವರೆಗೂ 2680 ಪತ್ರಕರ್ತರ ಹತ್ಯೆಯಾಗಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಸೊಮಾಲಿಯಾದಲ್ಲಿ ತೀವ್ರವಾದಿಗಳ ಹಿಂಸಾಚಾರ, ಮೆಕ್ಸಿಕೋದ ಅಪರಾಧ ಜಗತ್ತು, ಅಸಹಿಷ್ಣುತೆಯ ಕಾರಣಗಳಿಂದಾಗಿ ಭಾರತ ಹಾಗೂ ಫಿಲಿಪೈನ್ಸ್‌ನಲ್ಲಿಯೂ ಮಾಧ್ಯಮ ಸಿಬ್ಬಂದಿಯ ರಕ್ತ ಹರಿದಿದೆ ಎಂದು ಹೇಳಲಾಗಿದೆ.

ಟರ್ಕಿಯಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ, ಜಗತ್ತಿನಾದ್ಯಂತ 229 ಪತ್ರಕರ್ತರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಟರ್ಕಿಯಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಮೆಕ್ಸಿಕೊದಲ್ಲಿ ಅತಿ ಹೆಚ್ಚು ಪತ್ರಕರ್ತರ ಹತ್ಯೆ ನಡೆದಿದೆ. 2020ರಲ್ಲಿ 14 ಪತ್ರಕರ್ತರ ಹತ್ಯೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ 10, ಪಾಕಿಸ್ತಾನದಲ್ಲಿ 9, ಭಾರತದಲ್ಲಿ 8, ಫಿಲಿಪೈನ್ಸ್ ಹಾಗೂ ಸಿರಿಯಾದಲ್ಲಿ ತಲಾ 4, ನೈಜೀರಿಯಾ ಹಾಗೂ ಯೆಮನ್‌ನಲ್ಲಿ ತಲಾ ಮೂವರು ಪತ್ರಕರ್ತರ ಹತ್ಯೆಯಾಗಿದೆ.

English summary
A total of 65 journalists and media workers were killed worldwide in 2020 while doing their jobs, according to the International Federation of Journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X