ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಚೀನಾಕ್ಕೆ 629 ಮಹಿಳೆಯರ ಮಾರಾಟ: ಸರ್ಕಾರದಿಂದಲೇ ಬೆಂಬಲ

|
Google Oneindia Kannada News

ಲಾಹೋರ್, ಡಿಸೆಂಬರ್ 5: ಪಾಕಿಸ್ತಾನದಿಂದ ಸುಮಾರು 629 ಹೆಣ್ಣುಮಕ್ಕಳನ್ನು ಚೀನಾದ ಪುರುಷರಿಗೆ ಮಾರಾಟ ಮಾಡಲಾಗಿದ್ದು, ಅವರನ್ನು ಚೀನಾಕ್ಕೆ ಸಾಗಿಸಲಾಗಿದೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ಎರಡು ವರ್ಷಗಳಲ್ಲಿ ದೇಶದಾದ್ಯಂತ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ವಧುಗಳ ರೂಪದಲ್ಲಿ ಚೀನಾಕ್ಕೆ ಮಾರಾಟ ಮಾಡಲಾಗಿದೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಪಾಕಿಸ್ತಾನದ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಸೆಕ್ಸ್ ಟ್ರಾಫಿಕ್ಕಿಂಗ್‌ನ ಬಹುದೊಡ್ಡ ದಂಧೆಯನ್ನು ಪತ್ತೆಹಚ್ಚಿದ್ದರೂ, ಅದರಲ್ಲಿ ಭಾಗಿಯಾದ ಕಳ್ಳಸಾಗಣೆದಾರರಿಗೆ ಶಿಕ್ಷೆಯಾಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಪಾಕಿಸ್ತಾನವು ತನ್ನ ಬಹುಪಾಲು ಚಟುವಟಿಕೆಗಳಿಗೆ ಚೀನಾವನ್ನು ಅವಲಂಬಿಸಿದ್ದು, ಕಳ್ಳಸಾಗಣೆದಾರರ ಮೇಲೆ ಕ್ರಮ ತೆಗೆದುಕೊಂಡರೆ ಅದು ರಾಜತಾಂತ್ರಿಕ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಹಿಂದೇಟು ಹಾಕುತ್ತಿದ್ದಾರೆ.

ಪಾಕ್ ಯುವತಿಯರನ್ನು ಚೀನಾದಲ್ಲಿ ವೇಶ್ಯಾವಾಟಿಕೆಗೆ ಮಾರುತ್ತಿದ್ದ ದೊಡ್ಡ ಜಾಲ ಬಯಲು ಪಾಕ್ ಯುವತಿಯರನ್ನು ಚೀನಾದಲ್ಲಿ ವೇಶ್ಯಾವಾಟಿಕೆಗೆ ಮಾರುತ್ತಿದ್ದ ದೊಡ್ಡ ಜಾಲ ಬಯಲು

ಅಸೋಸಿಯೇಟೆಡ್ ಪ್ರೆಸ್ ಪಡೆದುಕೊಂಡಿರುವ ಪಟ್ಟಿಯ ಪ್ರಕಾರ, 2018ರಿಂದ ಇಲ್ಲಿಯವರೆಗೂ ಪಾಕಿಸ್ತಾನದ 629 ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಚೀನಾಕ್ಕೆ ವಧುಗಳೆಂದು ಮಾರಾಟ ಮಾಡಲಾಗಿದೆ. ಹೆಣ್ಣುಮಕ್ಕಳ ಕುಟುಂಬದವರೇ ಚೀನಾದ ವರರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

ಅಧಿಕಾರಿಗಳ ಅಸಹಾಯಕತೆ

ಅಧಿಕಾರಿಗಳ ಅಸಹಾಯಕತೆ

'ಈ ಹೆಣ್ಣುಮಕ್ಕಳ ರಕ್ಷಣೆಗೆ ಯಾರೂ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ' ಎಂದು ಈ ತನಿಖೆಯಲ್ಲಿ ಭಾಗವಹಿಸಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿ ತಿಳಿಸಿದ್ದಾರೆ. ಇಡೀ ಮಾರಾಟ ದಂಧೆ ಮುಂದುವರಿಯುತ್ತಿದೆ. ಮಿಗಿಲಾಗಿ ಇನ್ನಷ್ಟು ಬೆಳೆಯುತ್ತಿದೆ. ಏಕೆಂದರೆ ಅದರಲ್ಲಿ ಭಾಗಿಯಾಗಿರುವವರಿಗೆ ತಮಗೆ ಏನೂ ಮಾಡುವುದಿಲ್ಲ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.

ಜೂನ್‌ನಲ್ಲಿ ಮೊದಲ ಬಾರಿಗೆ ಪ್ರಕರಣ ದಾಖಲಾಗಿತ್ತು. ಆದರೆ ಪಾಕಿಸ್ತಾನ-ಚೀನಾ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಳ್ಳಸಾಗಣೆದಾರರನ್ನು ಸೆರೆಹಿಡಿಯುವ ಯಾವುದೇ ಪ್ರಯತ್ನವನ್ನು ನಿಲ್ಲಿಸುವಂತೆ ಒತ್ತಡ ಹೇರಲಾಯಿತು. ಅಕ್ಟೋಬರ್‌ನಲ್ಲಿ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದ್ದ 31 ಚೀನೀ ವ್ಯಕ್ತಿಗಳನ್ನು ಫೈಸಲಾಬಾದ್ ನ್ಯಾಯಾಧೀಶರು ಖುಲಾಸೆಗೊಳಿಸಿದರು.

ಸರ್ಕಾರದಿಂದಲೇ ತನಿಖೆಗೆ ಅಡ್ಡಿ

ಸರ್ಕಾರದಿಂದಲೇ ತನಿಖೆಗೆ ಅಡ್ಡಿ

ಇನ್ನು ಈ ಪ್ರಕರಣದ ಅನೇಕ ಬಲಿಪಶುಗಳು ಹೇಳಿಕೆ ನೀಡಲು ಬೆದರಿಕೆ ಅಥವಾ ಆಮಿಷದ ಕಾರಣ ಒಪ್ಪುವುದಿಲ್ಲ. ಈ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರವೇ ತನಿಖೆಗೆ ತಡೆಯೊಡ್ಡಿದೆ.

ಅಷ್ಟೇ ಅಲ್ಲ, ಈ ತನಿಖೆಯ ಕುರಿತು ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆಯೂ ಒತ್ತಡ ಹೇರಲಾಗಿದೆ. ಈ ಪರಿಸ್ಥಿತಿಯ ಕುರಿತು ಯಾವುದೇ ಹೇಳಿಕೆ ನೀಡಲು ಪಾಕಿಸ್ತಾನದ ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಗಳು ನಿರಾಕರಿಸುತ್ತಾರೆ. ಪಾಕಿಸ್ತಾನದ ಆಡಳಿತಗಾರರ ಬಳಿ ನಾವು ಮಾತನಾಡಿದರೆ ಅವರು ಅದರ ಬಗ್ಗೆ ಗಮನವನ್ನೇ ನೀಡುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಲ್ಮಾನ್ ಇಕ್ಬಾಲ್.

ಪಾಕಿಸ್ತಾನಿ ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಚೀನಿ ಸೂಪರ್ ವೈಸರ್ಪಾಕಿಸ್ತಾನಿ ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಚೀನಿ ಸೂಪರ್ ವೈಸರ್

ಕ್ರೈಸ್ತ ಯುವತಿಯರ ಮಾರಾಟ ಹೆಚ್ಚು

ಕ್ರೈಸ್ತ ಯುವತಿಯರ ಮಾರಾಟ ಹೆಚ್ಚು

ಎಪಿ ನಡೆಸಿರುವ ತನಿಖಾ ವರದಿಯಲ್ಲಿ ಪಾಕಿಸ್ತಾನದ ಕ್ರೈಸ್ತ ಯುವತಿಯರೇ ವಧುಗಳಾಗಿ ಚೀನಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಪಾಕಿಸ್ತಾನದಲ್ಲಿ ಅತ್ಯಂತ ಬಡ ಸಮುದಾಯಗಳಲ್ಲಿ ಕ್ರೈಸ್ತರೂ ಇದ್ದಾರೆ. ಹೆಚ್ಚಿನ ವಧುಗಳನ್ನು ಚೀನಾಕ್ಕೆ ತೆರಳಿದ ಬಳಿಕ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಚೀನೀ ಭಾಷೆ ಬಾರದ ಅವರು ಒಂದು ಲೋಟ ನೀರು ಕೇಳುವುದಕ್ಕೂ ಅನುವಾದದ ಆಪ್ ಬಳಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ.

ತನಿಖಾಧಿಕಾರಿಗಳೊಂದಿಗೆ ಮಾತನಾಡಿದ ಹೆಚ್ಚಿನ ಮಹಿಳೆಯರು, ಬಲವಂತದ ಸಂತಾನಶಕ್ತಿಹರಣ ಚಿಕಿತ್ಸೆ, ದೈಹಿಕ ಮತ್ತು ಲೈಂಗಿಕ ಕಿರುಕುಳ ಮತ್ತು ಬಲವಂತದ ವೇಶ್ಯಾವಾಟಿಕೆ ಕುರಿತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ದಂಧೆಯ ಇನ್ನೊಂದು ಭೀಕರ, ಕರಾಳ ಮುಖವೆಂದರೆ ಅಂಗಾಂಗಗಳ ಕಳ್ಳತನ. ಕೆಲವು ಮಹಿಳೆಯರ ಅಂಗಾಂಗಗಳನ್ನು ಕತ್ತರಿಸಿ ಚೀನಾಕ್ಕೆ ಕಳುಹಿಸಲಾಗುತ್ತದೆ.

ಕುಟುಂಬಕ್ಕೆ ಸಿಗುವುದು ಅತ್ಯಲ್ಪ ಹಣ

ಕುಟುಂಬಕ್ಕೆ ಸಿಗುವುದು ಅತ್ಯಲ್ಪ ಹಣ

ಈ ದಂಧೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಬ್ರೋಕರ್‌ಗಳು, ಸಣ್ಣಮಟ್ಟದ ಚರ್ಚ್‌ಗಳ ಕ್ರೈಸ್ತ ಮುಖಂಡರು ಲಂಚ ಪಡೆದು ತಮ್ಮ ಮಕ್ಕಳನ್ನು ಮಾರಾಟ ಮಾಡುವಂತೆ ಸಮುದಾಯದ ಜನರ ಮನವೊಲಿಸುತ್ತಾರೆ. ಚೀನಾ ಮತ್ತು ಪಾಕಿಸ್ತಾನದ ದಲ್ಲಾಳಿಗಳು ಚೀನಾ ಪುರುಷರ ಕಡೆಯಿಂದ ನಾಲ್ಕರಿಂದ ಹತ್ತು ಮಿಲಿಯನ್‌ ರೂಪಾಯಿವರೆಗೂ ($25,000-$65,000) ಹಣ ಪಡೆದುಕೊಳ್ಳುತ್ತಾರೆ. ಆದರೆ ಮಗಳನ್ನು ಮಾರಾಟ ಮಾಡಿದ ಕುಟುಂಬಕ್ಕೆ ನೀಡುವುದು ಕೇವಲ ಅಂದಾಜು 200,000 ರೂ ($1,500) ಮಾತ್ರ.

ಸೌದಿಯಲ್ಲಿ ಆ ಮಹಿಳೆಯರ ಕರಾಳ ದಿನ ಮತ್ತು ಪಾರಾಗಿ ಬಂದ ರೋಚಕ ಕತೆಸೌದಿಯಲ್ಲಿ ಆ ಮಹಿಳೆಯರ ಕರಾಳ ದಿನ ಮತ್ತು ಪಾರಾಗಿ ಬಂದ ರೋಚಕ ಕತೆ

ಹೀಗೆಲ್ಲ ಆಗುತ್ತಿಲ್ಲ ಎಂದ ಚೀನಾ

ಹೀಗೆಲ್ಲ ಆಗುತ್ತಿಲ್ಲ ಎಂದ ಚೀನಾ

ಈ ದಂಧೆಯ ಪಟ್ಟಿಯನ್ನು ಚೀನಾದ ವಿದೇಶಾಂಗ ಸಚಿವಾಲಯ ನಿರಾಕರಿಸುತ್ತದೆ. 'ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳು ಕಾನೂನು ಮತ್ತು ನಿಯಮಗಳನ್ನು ಮುಂದಿಟ್ಟುಕೊಂಡು ತಮ್ಮ ಜನರ ನಡುವೆ ಸ್ವ ಇಚ್ಛೆಯಿಂದ ಆನಂದದಾಯಕ ಕುಟುಂಬಗಳನ್ನು ನಿರ್ಮಿಸಲು ಉತ್ತೇಜನ ನೀಡುತ್ತಿವೆ. ಇದೇ ವೇಳೆ ಉಭಯ ದೇಶಗಳ ಗಡಿಯಾಚೆ ವೈವಾಹಿಕ ವಿಚಾರಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯನ್ನು ಸಹಿಸುವುದಿಲ್ಲ' ಎಂದು ಸಚಿವಾಲಯ ಹೇಳಿದೆ.

ಮಹಿಳೆಯಾದರೆ ಸಾಕು!

ಮಹಿಳೆಯಾದರೆ ಸಾಕು!

ಪಾಕಿಸ್ತಾನದಲ್ಲಿ ಮದುವೆ ದಲ್ಲಾಳಿಗಳ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗಿದೆ. ಆರಂಭದಲ್ಲಿ ಚೀನಾದ ಪುರುಷರು ವಿದೇಶಿ ವಧುಗಳಿಗಾಗಿ ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾಗಳಿಂದ ಖರೀದಿ ಮಾಡುತ್ತಿದ್ದರು. ಈಗ ಬೇಡಿಕೆ ಹೆಚ್ಚಾದಂತೆ ಅದರಾಚೆಗೂ ಪುರುಷರು ಕಣ್ಣುಹಾಯಿಸಿದ್ದಾರೆ. ಆಕೆಯ ಬಣ್ಣ, ಕಪ್ಪು ಅಥವಾ ಬಿಳಿಯೇ ಎಂದು ಕೇಳುತ್ತಿದ್ದವರು, ಈಗ ಆಕೆ ಮಹಿಳೆಯೇ ಎಂದು ಕೇಳುವ ಸ್ಥಿತಿಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Pakistanis has sold 619 girls and women in two years as brides to China men, according to a list obtained by AP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X