ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯದಲ್ಲಿ ಜೀವವೈವಿಧ್ಯ: 48 ವರ್ಷದಲ್ಲಿ ಶೇ 60ರಷ್ಟು ಪ್ರಾಣಿಗಳ ನಾಶ

|
Google Oneindia Kannada News

ವಾಷಿಂಗ್ಟನ್, ಜನವರಿ 7: ಕಾಡು ಕಡಿದು ನಾಡನ್ನು ವಿಸ್ತರಿಸುತ್ತಿರುವಂತೆಯೇ ಭೂಮಿ ಮೇಲಿನ ಜೀವವೈವಿಧ್ಯಗಳು ನಶಿಸುತ್ತಿವೆ. ಇದರಿಂದ ಮುಂದೆ ಬಹುದೊಡ್ಡ ಅಪಾಯ ಕಾದಿದೆ ಎಂಬ ಎಚ್ಚರಿಕೆಯನ್ನು ಜಗತ್ತಿನಾದ್ಯಂತ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ.

ಭೂಮಿಯ ಮೇಲಿನ ಜೀವಿಗಳ ಕುರಿತು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ 1970ರ ಈಚೆಗೆ ಶೇ 60ರಷ್ಟು ಸಸ್ತನಿಗಳು, ಪಕ್ಷಿಗಳು, ಮೀನು ಮತ್ತು ಜಲಚರ ಜೀವಿಗಳು ನಾಶವಾಗಿವೆ. ಇದಲ್ಲದಕ್ಕೂ ಮಾನವನ ಚಟುವಟಿಕೆಗಳೇ ಕಾರಣ.

ಕೊಟ್ಟಿಗೆಹಾರದಲ್ಲಿ ಮೂಷಿಕನನ್ನು ಕೊಲ್ಲಲು ಹೊರಟವ ಮಾಡಿದ್ದೇ ಬೇರೆ?! ಕೊಟ್ಟಿಗೆಹಾರದಲ್ಲಿ ಮೂಷಿಕನನ್ನು ಕೊಲ್ಲಲು ಹೊರಟವ ಮಾಡಿದ್ದೇ ಬೇರೆ?!

ವಿಶ್ವ ವನ್ಯಜೀವಿ ನಿಧಿಯ 'ಲಿವಿಂಗ್ ಪ್ಲಾನೆಟ್ ಇಂಡೆಕ್ಸ್'ನಲ್ಲಿ ಈ ಆಘಾತಕಾರಿ ಸಂಗತಿ ಬಯಲಾಗಿದೆ. ಮನುಷ್ಯನ ನಿಯಂತ್ರಣವಿಲ್ಲ ಭೂಮಿ, ಆಹಾರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯು ನಮ್ಮ ಗ್ರಹದಲ್ಲಿನ ಬಹುಪಾಲು ವನ್ಯಜೀವಿಗಳನ್ನು ವಿನಾಶಗೊಳಿಸಿವೆ. ಇದು ಮಾನವ ನಾಗರಿಕತೆಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ವರದಿ ಹೇಳಿದೆ.

60 per cent of earths wildlife wiped out since 1970 wwf

'ನಾವು ಜಗತ್ತಿನ ಪ್ರಪಾತದ ತುದಿಯತ್ತ ನಿದ್ದೆಗಣ್ಣಲ್ಲಿ ನಡೆಯುತ್ತಿದ್ದೇವೆ' ಎಂದು ವಿಶ್ವ ವನ್ಯಜೀವಿ ನಿಧಿಯ ವಿಜ್ಞಾನ ಮತ್ತು ಸಂರಕ್ಷಣೆ ಕಾರ್ಯನಿರ್ವಾಹಕ ನಿರ್ದೇಶಕ ಮೈಕ್ ಬಾರ್ರೆಟ್ ಹೇಳಿದ್ದಾರೆ.

ಒಂದು ವೇಳೆ ಶೇ 60ರಷ್ಟು ಮನುಷ್ಯರು ನಾಶವಾದರೆ, ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಫ್ರಿಕಾ, ಯುರೋಪ್, ಚೀನಾ ಮತ್ತು ಓಷಿಯಾನಾವನ್ನು ಸಂಪೂರ್ಣವಾಗಿ ಬರಿದುಮಾಡುವುದಕ್ಕೆ ಸಮ. ಅಂದರೆ ಇಷ್ಟು ಪ್ರಮಾಣದಲ್ಲಿ ಪ್ರಾಣಿಗಳನ್ನು ಈಗಾಗಲೇ ನಾಶ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಟ್ಟಡದ ಮೇಲಿಂದ ಬಿದ್ದ ಗರ್ಭಿಣಿ ಕೋತಿ, ವೇದನೆ ಮನಕಲಕುವಂತಿತ್ತು ಕಟ್ಟಡದ ಮೇಲಿಂದ ಬಿದ್ದ ಗರ್ಭಿಣಿ ಕೋತಿ, ವೇದನೆ ಮನಕಲಕುವಂತಿತ್ತು

ದಕ್ಷಿಣ ಮತ್ತು ಕೇಂದ್ರ ಅಮೆರಿಕಗಳಲ್ಲಿ ಜೀವ ವೈವಿಧ್ಯಗಳು ಭಾರಿ ಪ್ರಮಾಣದಲ್ಲಿ ನಾಶವಾಗಿವೆ. 1970ರಿಂದೀಚೆಗೆ ಶೇ 89ರಷ್ಟು ಜೀವಿಗಳು ಈ ಎರಡು ಪ್ರದೇಶಗಳಲ್ಲಿಯೇ ಕಣ್ಮರೆಯಾಗಿವೆ. ಕಳೆದ ಐದು ದಶಕಗಳಲ್ಲಿ ಮನುಷ್ಯನ ಚಟುವಟಿಕೆಗಳಿಂದ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ನೀರು ಸೇರುತ್ತಿದ್ದು, ಜಲಚರ ಜೀವಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.

ಭೂಗ್ರಹದ ನಾಲ್ಕನೇ ಮೂರು ಭಾಗ ಮನುಷ್ಯರ ಕೃಷಿ, ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹೀಗಾಗಿ ವನ್ಯಜೀವಿ ನೆಲೆಗಳು ಮಾನವನ ಆಕ್ರಮಣಕ್ಕೆ ಒಳಗಾಗುತ್ತಿವೆ.

ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಅವುಗಳ ವಿನಾಶಕ್ಕೆ ಎರಡನೆಯ ಅತಿ ದೊಡ್ಡ ಕಾರಣ. ವರದಿ ಪ್ರಕಾರ 300 ಬಗೆಯ ಪ್ರಾಣಿಗಳು ಮಾನವನ ಹೊಟ್ಟೆಬಾಕತನಕ್ಕೇ ನಾಶವಾಗಿವೆ.

ಕಾಡಾನೆಗಳ ಬಳಿಕ ಸುಳ್ಯದಲ್ಲಿ ಈಗ ಕಾಡು ಕೋಣಗಳ ಹಾವಳಿ ಕಾಡಾನೆಗಳ ಬಳಿಕ ಸುಳ್ಯದಲ್ಲಿ ಈಗ ಕಾಡು ಕೋಣಗಳ ಹಾವಳಿ

ಆನೆಗಳು, ಚಿರತೆ, ಹುಲಿ, ಸಿಂಹ, ಹಿಮ ಕರಡಿಗಳು ಹೀಗೆ ವೈವಿಧ್ಯಮಯ ಜೀವ ಸಂಕುಲವನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕೆಂದರೆ ವನ್ಯಜೀವಿಗಳು ಮತ್ತು ಅವುಗಳ ಆವಾಸ ಸ್ಥಾನದ ರಕ್ಷಣೆ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ವರದಿ ಹೇಳಿದೆ.

English summary
The World Wildlife Fund's Living Planet Index shows that about 60% of mammals, birds, fish and reptiles have been wiped out by human activity since 1970.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X