ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್ ಭೂಕಂಪಕ್ಕೆ ಇಬ್ಬರು ಬಲಿ: 200 ಕ್ಕೂ ಹೆಚ್ಚು ಜನರಿಗೆ ಗಾಯ

|
Google Oneindia Kannada News

ತೈಪೆ, ಫೆಬ್ರವರಿ 07: ತೈವಾನಿಲ್ಲಿ ಸಂಭವಿಸಿದ 6.4 ತೀವ್ರತೆಯ ಭಾರೀ ಭೂಕಂಪಕ್ಕೆ ಇಬ್ಬರು ಮೃತರಾಗಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 150 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.

ಇಲ್ಲಿನ ಒಂದು ಬೃಹತ್ ಹೊಟೆಲ್ ಮತ್ತು ಅಪಾರ್ಟ್ಮೆಂಟ್ ಧರೆಗುರುಳಿದ ಪರಿಣಾಮ ಹಲವರು ಕಟ್ಟಡದ ಅವಶೇಷದೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಕ್ಷಣಾ ಕಾರ್ಯ ಆರಂಭವಾಗಿದ್ದು, ಹಲವರನ್ನು ರಕ್ಷಿಸಲಾಗಿದೆ.

ತೈವಾನಿನಲ್ಲಿ ಭಾರಿ ಭೂಕಂಪ, ಧರೆಗುರುಳಿದ ದೊಡ್ಡ ಹೋಟೆಲ್ ತೈವಾನಿನಲ್ಲಿ ಭಾರಿ ಭೂಕಂಪ, ಧರೆಗುರುಳಿದ ದೊಡ್ಡ ಹೋಟೆಲ್

ಕಳೆದ ಹತ್ತು ವರ್ಷದ ನಂತರ ತೈವಾನಿನಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಇದು ಎಂಬುದು ಸ್ಥಳೀಯರ ಅಭಿಪ್ರಾಯ. ಕುಸಿದ ಕಟ್ಟಡದಿಂದ 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಮತ್ತಷ್ಟು ಜನ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ(ಫೆ.6) ರಾತ್ರಿ 11:50 ಕ್ಕೆ ಭೂಕಂಪ ಸಂಭವಿಸಿದೆ.

6.4 earthquake hits Taiwan: Rescue operation underway

1999ರಲ್ಲಿ ತೈವಾನಿನಲ್ಲಿ ಸಂಭವಿಸಿದ ಭೂಕಂಪ ಇದುವರೆಗಿನ ಕರಾಳ ಭೂಕಂಪ ಎನ್ನಿಸಿದ್ದು, ರಿಕ್ಟರ್ ಮಾಪನದಲ್ಲಿ 7.6 ತೀವ್ರತೆ ದಾಖಲಾಗಿತ್ತು. ಆ ಸಂದರ್ಭದಲ್ಲಿ 2,400 ಜನ ಸಾವಿಗೀಡಾಗಿದ್ದರು.

English summary
Atleast two persons killed, 150 people missing and more than 200 people injured in an earthquake of magnitude 6.4, hits Taiwan on Feb 6th, 11.50 pm. Rescue operation underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X