• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೊಯೇಷಿಯಾದಲ್ಲಿ ಪ್ರಬಲ ಭೂಕಂಪ; ಹಲವು ಜನರಿಗೆ ಗಾಯ

|

ಕ್ರೊಯೇಷಿಯಾ, ಡಿಸೆಂಬರ್ 29: ಮಧ್ಯ ಕ್ರೊಯೇಷಿಯಾದಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ.

ಭೂಕಂಪದಿಂದ ಕೆಲ ಕಟ್ಟಡಗಳು ಕುಸಿದು ಬಿದ್ದಿದ್ದು, ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ನಗರದ ಆಗ್ನೇಯ ಭಾಗದಲ್ಲಿನ ಪೆಟ್ರಿಂಝಾ ಎಂಬಲ್ಲಿ ಭೂಕಂಪದಿಂದ ಹಾನಿ ಸಂಭವಿಸಿದೆ. ಭೂಕಂಪ ಸಂಭವಿಸುತ್ತಿದ್ದಂತೆ ಜನರು ರಸ್ತೆಗೆ ಓಡಿ ಬಂದಿದ್ದಾರೆ. ಮಂಗಳವಾರ ಇಡೀ ದೇಶದಲ್ಲಿ ಭೂಕಂಪದ ಅನುಭವವಾಗಿದ್ದು, ನೆರೆ ರಾಷ್ಟ್ರಗಳಾದ ಸರ್ಬಿಯಾ, ಬೋಸ್ನಿಯಾ ಹಾಗೂ ದಕ್ಷಿಣ ಆಸ್ಟ್ರಿಯಾದಲ್ಲೂ ಭೂಕಂಪಿಸಿರುವುದಾಗಿ ತಿಳಿದುಬಂದಿದೆ.

ಫಿಲಿಫೈನ್ಸ್‌ನಲ್ಲಿ ಪ್ರಬಲ ಭೂಕಂಪ, 6.3 ತೀವ್ರತೆ ದಾಖಲು

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದಲ್ಲಿ 6.3 ತೀವ್ರತೆ ದಾಖಲಾಗಿದ್ದು, ಝಾಗ್ರೆಬ್ ನಿಂದ 46 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿಸಿದೆ. ಸೋಮವಾರವೂ ಇಲ್ಲಿ 5.2 ತೀವ್ರತೆಯ ಭೂಕಂಪನವಾಗಿತ್ತು.

ಭೂಕಂಪದಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಕೊರೇಷಿಯನ್ ರೆಡ್ ಕ್ರಾಸ್ ಸಂಸ್ಥೆ ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡುತ್ತಿದೆ.

ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹಳೆಯ ಕಟ್ಟಡಗಳಿಂದ ಜನರು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸ್ಲೋವಿನಿಯಾದ ಪರಮಾಣು ಕೇಂದ್ರವನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

English summary
A strong magnitude 6.3 earthquake hits croatia and buildings in central croatia collapsed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X