ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೋದಲ್ಲಿ ಮತ್ತೆ ಭೂಕಂಪ: ರಿಕ್ಟರ್ ನಲ್ಲಿ 6.2 ತೀವ್ರತೆ

|
Google Oneindia Kannada News

ಮೆಕ್ಸಿಕೋ ಸಿಟಿ, ಸೆಪ್ಟೆಂಬರ್ 23: ಇತ್ತೀಚೆಗಷ್ಟೇ ಎರಡು ಪ್ರಬಲ ಭೂಕಂಪಗಳಿಂದ ತತ್ತರಿಸಿದ್ದ ಮೆಕ್ಸಿಕೋ ದೇಶದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸೆ. 23ರಂದು ನಾಲ್ಕು ಬಾರಿ ಭೂಕಂಪ ಅಲ್ಲಿ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದ ಕೇಂದ್ರ ಬಿಂದು ಒಕ್ಸಾನಾ ರಾಜ್ಯದ ಯೂನಿಯನ್ ಹಿಂಡಾಲ್ಗೊ ನಗರದ ಕೆಳಗೆ 75 ಕಿ.ಮೀ. ದೂರದಲ್ಲಿತ್ತು ಎಂದು ಭೂಕಂಪ ತಜ್ಞರು ತಿಳಿಸಿದ್ದಾರೆ. ಈ ಬಾರಿಯ ಭೂಕಂಪದಿಂದ ಇಕ್ಸ್ ಟೊಪೆಕ್, ಹಿಂಡಾಲ್ಗೊ ನಗರಗಳು ಹೆಚ್ಚು ಹಾನಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.

85ರ ಭೂಕಂಪ ಸ್ಮರಣೆ ಮುಗಿದ 2 ಗಂಟೆಯೊಳಗೆ ಭೀಕರ ಕಂಪನ!85ರ ಭೂಕಂಪ ಸ್ಮರಣೆ ಮುಗಿದ 2 ಗಂಟೆಯೊಳಗೆ ಭೀಕರ ಕಂಪನ!

ಸೆ. 8ರಂದು ಮೆಕ್ಸಿಕೋದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸುಮಾರು 49 ಜನರು ಸಾವಿಗೀಡಾಗಿದ್ದರು. ಇದಾಗಿ ಕೇವಲ 11 ದಿನಗಳಲ್ಲೇ (ಸೆ. 19) ಈ ಶತಮಾನದ ಅತಿ ಪ್ರಬಲ ಭೂಕಂಪ ಎನಿಸಿದಂಥ ಭೂಕಂಪ ಸಂಭವಿಸಿ ಸುಮಾರು 295 ಜನರು ಸಾವಿಗೀಡಾಗಿದ್ದರು.

(ಚಿತ್ರಗಳು: ಸಂಗ್ರಹ ಚಿತ್ರ - ಪಿಟಿಐ)

ಮನೆಗಳಿಂದ ಓಡಿ ಬಂದ ಜನರು

ಮನೆಗಳಿಂದ ಓಡಿ ಬಂದ ಜನರು

ಹಿಂದಿನ ಭೂಕಂಪಗಳ ಘಾಸಿಗಳಿಂದಲೇ ಜನರು ಹೊರಬರುವ ಮುಂಚೆಯೇ ಆ ದೇಶದ ಹಿಂಡಾಲ್ಗೊ ನಗರದಲ್ಲಿ ಶನಿವಾರ, ಸ್ಥಳೀಯ ಕಾಲಮಾನ ಬೆಳಗಿನ ಜಾವ 4.1 ರಿಂದ 5.8ರಷ್ಟು ತೀವ್ರತೆ ಹೊಂದಿದ್ದ ಕಂಪನಗಳು ಮೂರು ಬಾರಿ ಉಂಟಾದವು. ಆಗ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಓಡಿ ಬಂದು ಬೀದಿಗಳಲ್ಲಿ ನಿಂತರು.

ಮನಕಲಕುವ ಮೆಕ್ಸಿಕೋ ಭೂಕಂಪದ ಭಯಾನಕ ವಿಡಿಯೋಮನಕಲಕುವ ಮೆಕ್ಸಿಕೋ ಭೂಕಂಪದ ಭಯಾನಕ ವಿಡಿಯೋ

ಕುಸಿದ ಕಟ್ಟಡಗಳು

ಕುಸಿದ ಕಟ್ಟಡಗಳು

ಇದಾಗಿ, ಸ್ವಲ್ಪ ಹೊತ್ತಿನಲ್ಲೇ 6.1 ತೀವ್ರತೆಯಲ್ಲಿ ಭೂಮಿ ಪ್ರಬಲವಾಗಿ ಕಂಪಸಿತು. ಈ ಹಿಂದಿನ ಭೂಕಂಪದಲ್ಲಿ ಅಳಿದುಳಿದಿದ್ದ ಮನೆಗಳಲ್ಲಿ ಹಲವಾರು ಮನೆಗಳು, ಕಟ್ಟಡಗಳು ಕುಸಿದುಬಿದ್ದವು ಎಂದು ಆರ್ ಟಿ ಸುದ್ದಿ ಸಂಸ್ಥೆ ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಲಘುಭೂಕಂಪ: 4.5 ರಿಕ್ಟರ್ ಮಾಪನದಲ್ಲಿ ತೀವ್ರತೆ ದಾಖಲು

ಸ್ವಯಂ ಸೇವಕರಿಗೆ, ಸೈನಿಕರಿಗೆ ಮತ್ತೆ ಸವಾಲು

ಸ್ವಯಂ ಸೇವಕರಿಗೆ, ಸೈನಿಕರಿಗೆ ಮತ್ತೆ ಸವಾಲು

'ದ ಇಂಡಿಪೆಂಡೆಂಟ್' ಸುದ್ದಿಸಂಸ್ಥೆಯ ಪ್ರಕಾರ, ಈ ಹೊಸ ಭೂಕಂಪ ಈಗಾಗಲೇ ಅಲ್ಲಿ ನಡೆಯುತ್ತಿದ್ದ ಪರಿಹಾರ ಕಾರ್ಯಗಳಿಗೆ ತೀವ್ರ ಹಿನ್ನಡೆ ತಂದಿದೆ. ಕಟ್ಟಡಗಳ ಅವಶೇಷಗಳನ್ನು ಸರಿಪಡಿಸಿ ವಾತಾವರಣವನ್ನು ಜನಜೀವನ ಯೋಗ್ಯವಾಗಿಸುವ ನಿಟ್ಟಿನಲ್ಲಿ ಲಕ್ಷಾಂತರ ಸ್ವಯಂಸೇವಕರು, ಪೊಲೀಸರೊದಿಗೆ, ಸೈನಿಕರೊಂದಿಗೆ ಕೈ ಜೋಡಿಸಿ ಪರಿಹಾರ ಕಾರ್ಯಾಚಾರಣೆಯಲ್ಲಿ ನಿರತರಾಗಿದ್ದರು. ಅವರು ಇಷ್ಟು ದಿನ ಪಟ್ಟಿದ್ದ ಶ್ರಮ ಮತ್ತೆ ಮಣ್ಣುಪಾಲಾಗಿದೆ.

ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ

ನಿರಾಶ್ರಿತರಿಗೆ ರಸ್ತೆ ಬದಿಯಲ್ಲೇ ವಾಸ್ತವ್ಯ

ನಿರಾಶ್ರಿತರಿಗೆ ರಸ್ತೆ ಬದಿಯಲ್ಲೇ ವಾಸ್ತವ್ಯ

ಈ ಹೊಸ ಭೂಕಂಪದಿಂದಾಗಿ ಅಳಿದುಳಿದ ಕಟ್ಟಡಗಳು ಕುಸಿದಿದ್ದರಿಂದಾಗಿ, ಇಕ್ಸ್ ಟೊಪೆಕ್, ಹಿಂಡಾಲ್ಗೊ ನಗರಗಳಲ್ಲಿನ ಅನೇಕ ನಾಗರಿಕರು ಬೀದಿಪಾಲಾಗಿದ್ದಾರೆ. ಅವರಿಲ್ಲರಿಗೂ ಸದ್ಯಕ್ಕೆ ರಸ್ತೆ ಬದಿಯಲ್ಲಿಯೇ ಆಶ್ರಯ ಕಲ್ಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು 'ಸ್ಕೈ ನ್ಯೂಸ್' ವರದಿ ಮಾಡಿದೆ.

English summary
Earthquake warning sirens are currently sounding in Mexico City while the head of the city government has advised that emergency protocols have been activated following a 6.2 temblor in the city of Ixtepec in the southern state of Oaxaca.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X