ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪ: 6 ಮಕ್ಕಳು ಸೇರಿ 20 ಮಂದಿ ಸಾವು

|
Google Oneindia Kannada News

ಇಸ್ಲಾಮಾಬಾದ್‌, ಅಕ್ಟೋಬರ್‌ 07: ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಗುರುವಾರ ಮುಂಜಾನೆ ಸುಮಾರು 6.0 ತೀವ್ರತೆಯಲ್ಲಿ ಭೂಕಂಪವಾಗಿದ್ದು, ಆರು ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಅಂದರೆ ಹರ್ನಾಯಿಯಿಂದ ಸುಮಾರು 14 ಕಿಲೋ ಮೀಟರ್‌ ದೂರದಲ್ಲಿ ಮುಂಜಾನೆ ಸುಮಾರು 3:30 ಗಂಟೆಗೆ ಸುಮಾರು 6.0 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್‌) ತಿಳಿಸಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭೂಕಂಪ ನಡೆದಿದೆ ಎಂದು ವರದಿಗಳು ಹೇಳಿದೆ.

ವನೌಟು ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ; ಸುನಾಮಿ ಬೆದರಿಕೆ ಇಲ್ಲವನೌಟು ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ; ಸುನಾಮಿ ಬೆದರಿಕೆ ಇಲ್ಲ

ಈ ಬಗ್ಗೆ ಮಾಹಿತಿ ನೀಡಿರುವ ವಿಪತ್ತು ನಿರ್ವಹಣಾ ಅಧಿಕಾರಿಗಳು, "ದಕ್ಷಿಣ ಪಾಕಿಸ್ತಾನದಲ್ಲಿ ನಡೆದ ಭೂಕಂಪದಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ," ಎಂದು ತಿಳಿಸಿದ್ದಾರೆ. ಇನ್ನು "ಈ ಪೈಕಿ ಹಲವಾರು ಮಂದಿ ಮನೆಯ ಗೋಡೆ ಹಾಗೂ ಛಾವಣಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ," ಎಂದು ಹಿರಿಯ ಪ್ರಾಂತೀಯ ಸರ್ಕಾರಿ ಅಧಿಕಾರಿ ಸುಹೈಲ್‌ ಅನ್ವರ್‌ ಹಶ್ಮಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ.

6.0 Magnitude Earthquake Hits Pakistan, 6 Children Among 20 Dead

"ಭೂಕಂಪದ ಪರಿಣಾಮ ಮೃತರಾದ 20 ಮಂದಿಯ ಪೈಕಿ ಆರು ಮಂದಿ ಮಕ್ಕಳಾಗಿದ್ದು, ಓರ್ವರು ಮಹಿಳೆ ಆಗಿದ್ದಾರೆ," ಎಂದು ಕೂಡಾ ಹಿರಿಯ ಪ್ರಾಂತೀಯ ಸರ್ಕಾರಿ ಅಧಿಕಾರಿ ಸುಹೈಲ್‌ ಅನ್ವರ್‌ ಹಶ್ಮಿ ಹೇಳಿದ್ದಾರೆ.

ಇನ್ನು ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪ್ರಾಂತೀಯ ಆಂತರಿಕ ಸಚಿವ ಮೀರ್ ಜಿಯಾ ಉಲ್ಲಾ ಲಾಂಗೌ, "ಭೂಕಂಪದ ಕಾರಣದಿಂದಾಗಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯು ನಮಗೆ ಈವರೆಗೆ ಲಭಿಸಿದೆ. ಜನರ ರಕ್ಷಣಾ ಕಾರ್ಯವು ಪ್ರಗತಿಯಲ್ಲಿದೆ," ಎಂದಿದ್ದಾರೆ.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ, 3 ಮಂದಿ ಸಾವುಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ, 3 ಮಂದಿ ಸಾವು

ಬಲೂಚಿಸ್ತಾನದ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ನಾಸಿರ್‌ ನಾಸರ್‌, "ಭೂಕಂಪ ಆಗಿ ಸುಮಾರು 15 ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಮೃತರ ಸಂಖ್ಯೆಯು ಇನ್ನೂ ಕೂಡಾ ಅಧಿಕವಾಗುವ ಸಾಧ್ಯತೆ ಇದೆ. ಬಲೂಚಿಸ್ತಾನದ ಹರ್ನಾಯಿಯು ಅಧಿಕ ಪರಿಣಾಮ ಉಂಟಾಗಿರುವ ನಗರವಾಗಿದೆ. ಅಲ್ಲಿ ಸುಸಜ್ಜಿತ ರಸ್ತೆಗಳ ಕೊರತೆ ಇದೆ. ಹಾಗೆಯೇ ವಿದ್ಯುತ್‌ ಹಾಗೂ ಮೊಬೈಲ್‌ ನೆಟ್‌ವರ್ಕ್‌ಗಳ ಸಮಸ್ಯೆ ಇದೆ. ಈ ಕಾರಣದಿಂದಾಗಿ ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ನಡೆಸಲು ರಕ್ಷಣಾ ಸಿಬ್ಬಂದಿಗಳಿಗೆ ಭಾರೀ ತೊಂದರೆ ಉಂಟಾಗುತ್ತಿದೆ," ಎಂದು ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯು ಈಗ ಪ್ರಗತಿಯಲ್ಲಿದೆ. ಸುಮಾರು 200 ಮಂದಿ ಭೂಕಂಪದ ಹಿನ್ನೆಲೆ ತೊಂದರೆಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ಸಾವಿನ ಸಂಖ್ಯೆಯು ಅಧಿಕವಾಗುವ ಸಾಧ್ಯತೆಗಳು ಇದೆ.

"ಇಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣದಿಂದಾಗಿ ನಾವು ಈಗ ಬಹಳ ತೊಂದರೆಯೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕಾಗಿ ಬಂದಿದೆ. ನಮ್ಮ ಮೊಬೈಲ್‌ ಫೋನ್‌ನ ಫ್ಲಾಶ್‌ ಲೈಟ್‌ ಹಾಗೂ ಟಾರ್ಚ್‌ಗಳನ್ನು ಹಿಡಿದು ನಾವು ಚಿಕಿತ್ಸೆ ನೀಡುವ ಕಾರ್ಯವನ್ನು ನಡೆಸುತ್ತಿದ್ದೇವೆ," ಎಂದು ಸರ್ಕಾರಿ ಸ್ವಾಮ್ಯದ ಹರ್ನಾಯಿ ಸ್ಪತ್ರೆಯಲ್ಲಿ ಹಿರಿಯ ಅಧಿಕಾರಿ ಆಗಿರುವ ಜರೂರ್‌ ತಾರಿನ್‌ ಹೇಳಿದ್ದಾರೆ.

"ಹಲವಾರು ಮಂದಿಯ ಕೈ ಕಾಲುಗಳು, ಮೂಲೆಗಳು ಮುರಿದಿದೆ. ಹಲವಾರು ಮಂದಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ನಾವು ವಾಪಸ್‌ ಕಳುಹಿಸಿದ್ದೇವೆ. ಸುಮಾರು 40 ಜನರಿಗೆ ಗಂಭೀರ ಗಾಯವಾಗಿದೆ. ನಾವು ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿಕೆ ಮಾಡಿದ್ದೇವೆ. ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ," ಎಂದು ಕೂಡಾ ಹಿರಿಯ ಅಧಿಕಾರಿ ಜರೂರ್‌ ತಾರಿನ್‌ ಮಾಹಿತಿ ನೀಡಿದರು.

ಪಾಕಿಸ್ತಾನದಲ್ಲಿ ಅಕ್ಟೋಬರ್‌ 8, 2005 ರಲ್ಲಿ 7.6 ತೀವ್ರತೆಯಲ್ಲಿ ಭೂಪಂಕ ಆಗಿದೆ. ಆ ಸಂದರ್ಭದಲ್ಲಿ ಸುಮಾರು 73,000 ಮಂದಿ ಸಾವನ್ನಪ್ಪಿದ್ದರು. ಹಾಗೆಯೇ ಸುಮಾರು 3.5 ಮಿಲಿಯನ್‌ ಜನರು ನಿರಾಶ್ರಿತರು ಆಗಿದ್ದರು. ಆ ಬಳಿಕ 2015 ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ 400 ಮಂದಿ ಸಾವನ್ನಪ್ಪಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
6.0 Magnitude Earthquake Hits Southern Pakistan, 6 Children Among 20 Dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X