ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು

|
Google Oneindia Kannada News

ದೆಹಲಿ, ಏಪ್ರಿಲ್ 13: ಭಾರತದಲ್ಲಿ 9 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ವರದಿಯಾಗಿದ್ದಾರೆ. ಈ ಪೈಕಿ 300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇದು ಭಾರತದಲ್ಲಿ ದಾಖಲಾಗಿರುವ ಕೊವಿಡ್‌ ರೋಗಿಗಳ ವಿವರ.

ಭಾರತ ಬಿಟ್ಟು ವಿದೇಶಿದಲ್ಲಿ ಸಿಲುಕಿಕೊಂಡಿರುವ ಭಾರತೀಯರ ಕಥೆ ಏನು ಎಂಬುದಕ್ಕೆ ಸರಿಯಾದ ಅಂಕಿಅಂಶ ಇಲ್ಲ. ಇದೀಗ, ಸಿಂದಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಂದೇ ದಿನದಲ್ಲಿ ಸಿಂಗಾಪುರದಲ್ಲಿ 233 ಜನರಿಗೆ ಕೊವಿಡ್ ಸೋಂಕು ದೃಢವಾಗಿದ್ದು, ಅದರಲ್ಲಿ 59 ಜನರು ಭಾರತೀಯರು ಎಂದು ವರದಿಯಾಗಿದೆ.

ಭಾರತದಿಂದ ಸ್ವದೇಶಕ್ಕೆ ಮರಳಿದ 444 ಮಂದಿ ಆಸ್ಟ್ರೇಲಿಯಾ ಪ್ರಜೆಗಳುಭಾರತದಿಂದ ಸ್ವದೇಶಕ್ಕೆ ಮರಳಿದ 444 ಮಂದಿ ಆಸ್ಟ್ರೇಲಿಯಾ ಪ್ರಜೆಗಳು

233 ಜನರ ಪೈಕಿ 51 ಜನರು ಒಂದೇ ಕಡೆ ಭಾಗವಹಿಸಿದ್ದವರು. ಉಳಿದ 167 ಜನರು ಯಾರ ಸಂಪರ್ಕದಲ್ಲಿದ್ದರು, ಅವರಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ,

59 Indians Tested Positive Of Corona At Singapore

ಇದುವರೆಗೂ ಸಿಂಗಾಪುರದಲ್ಲಿ ಒಟ್ಟು 2532 ಜನರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 8 ಜನರು ಮೃತಪಟ್ಟಿದ್ದಾರೆ. 560 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 59 ಭಾರತೀಯರಿಗೆ ಸೋಂಕು ತಗುಲಿದ್ದು, ಸಿಂಗಾಪುರದಲ್ಲಿ ಒಟ್ಟು ಸೋಂಕಿತ ಭಾರತೀಯರ ಸಂಖ್ಯೆ 81ಕ್ಕೆ ಏರಿದೆ.

976 ಜನರು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅದರಲ್ಲಿ 31 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 988 ಜನ ಸೋಂಕಿತರು ಸಾಮಾನ್ಯ ವಾರ್ಡ್ನಲ್ಲಿದ್ದು ಅವರ ಆರೋಗ್ಯ ಸಹಜವಾಗಿದೆ ಎಂದು ಸಿಂಗಾಪುರ ಆರೋಗ್ಯ ಇಲಾಖೆ ತಿಳಿಸಿದೆ.

ಜರ್ಮನಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರಿಗೆ ಕಲ್ಲೇಟುಜರ್ಮನಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರಿಗೆ ಕಲ್ಲೇಟು

ಓದಲು ಹೋಗಿದ್ದ ಬಹುತೇಕ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ನೆರವಿನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಇನ್ನು ಕೊರೊನಾ ರೋಗಕ್ಕೆ ಬಹಳ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಅಮೆರಿಕ, ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ, ಯುಕೆ ದೇಶಗಳಲ್ಲಿ ಭಾರತೀಯರಿದ್ದಾರೆ.

English summary
59 Indians among 233 new COVID 19 cases reported in Singapore last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X