ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ಬಾಂಗ್ಲಾದಲ್ಲಿ52% ಇಂಧನ ದರ ಹೆಚ್ಚಳ; ಭುಗಿಲೆದ್ದ ಪ್ರತಿಭಟನೆ

|
Google Oneindia Kannada News

ಢಾಕಾ, ಆಗಸ್ಟ್ 08: ಬಾಂಗ್ಲಾದೇಶದಲ್ಲಿ ಇಂಧನ ಬೆಲೆಗಳ ತೀವ್ರ ಏರಿಕೆ ನಡುವೆಯೇ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ ಇದುವರೆಗಿನ ಅತ್ಯಧಿಕ ಇಂಧನ ದರ ಏರಿಕೆ ಇದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಶೇಕಡಾ 50 ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾದಂತೆಯೇ ಬಾಂಗ್ಲಾದೇಶದಲ್ಲಿಯೂ ಭಾರಿ ಪ್ರತಿಭಟನೆ ನಡೆಯುತ್ತಿದೆ. ಉದ್ರಿಕ್ತ ಪ್ರತಿಭಟನಾಕಾರರು ಬಾಂಗ್ಲಾದೇಶದಾದ್ಯಂತ ಇಂಧನ ಕೇಂದ್ರಗಳನ್ನು (ಪೆಟ್ರೋಲ್ ಬಂಕ್‌ಗಳನ್ನು) ಸುತ್ತುವರಿದು ಅನಿರೀಕ್ಷಿತ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಶುಕ್ರವಾರ ಶೇಖ್ ಹಸೀನಾ ಸರ್ಕಾರವು ಇಂದನ ಬೆಲೆ ಹೆಚ್ಚಳವನ್ನು ಘೋಷಿಸಿದೆ. ಅದರ ನಂತರ ಡೀಸೆಲ್ ದರ ಲೀಟರ್‌ಗೆ 34 ಟಾಕಾ (Taka ), ಆಕ್ಟೇನ್ ಪ್ರತಿ ಲೀಟರ್‌ಗೆ 46 ಟಾಕಾ ಮತ್ತು ಪೆಟ್ರೋಲ್ ದರ ಲೀಟರ್‌ಗೆ 44 ಟಾಕಾ ಹೆಚ್ಚಾಗಿದೆ. ಹಲವಾರು ಬಾಂಗ್ಲಾದೇಶ ಮಾಧ್ಯಮಗಳು ಇಂಧನ ಬೆಲೆಯಲ್ಲಿ ಈ ಶೇಕಡಾ 51.7 ರಷ್ಟು ಹೆಚ್ಚಳವು ದೇಶವು ಸ್ವಾತಂತ್ರ್ಯ ಪಡೆದ ನಂತರದ ಅತ್ಯಧಿಕವಾಗಿದೆ ಎಂದು ಹೇಳಿದೆ.

52% increase in fuel prices in Bangladesh;Protests Erupt

ಜನರು ತಡರಾತ್ರಿಯಲ್ಲಿ ಇಂಧನ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಸರ್ಕಾರದ ನಿರ್ಧಾರದ ವಿರುದ್ಧ ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಅವುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ರಾಜಧಾನಿ ಢಾಕಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಮುಂದೆ ಪ್ರತಿಭಟನೆ ನಡೆಸಿವೆ.

ಸರ್ಕಾರದ ಇಂಧನ ಬೆಲೆ ಏರಿಕೆ ಘೋಷಣೆಯ ನಂತರ ಬಸ್ ನಿರ್ವಾಹಕರು ಬೆಲೆಯನ್ನು ಹೆಚ್ಚಿಸಿದ್ದಾರೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬಾಂಗ್ಲಾದೇಶದ ಇಂಧನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಆರು ತಿಂಗಳಲ್ಲಿ (ಜುಲೈ ತನಕ) ತೈಲ ಮಾರಾಟದಲ್ಲಿ 8 ಬಿಲಿಯನ್ ಟಾಕಾ ($ 85 ಮಿಲಿಯನ್) ನಷ್ಟವನ್ನು ಅನುಭವಿಸಿದೆ.

"ಹೊಸ ಬೆಲೆಗಳು ಎಲ್ಲರಿಗೂ ತೊಂದರೆ ನೀಡುತ್ತದೆ ಎಂದು ನಮಗೆ ತಿಳಿದಿದೆ. ಆದರೆ ನಮಗೆ ಬೇರೆ ಆಯ್ಕೆ ಇರಲಿಲ್ಲ. ಜನರು ತಾಳ್ಮೆಯಿಂದಿರಬೇಕು" ಎಂದು ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲಗಳ ರಾಜ್ಯ ಸಚಿವ ನಸ್ರುಲ್ ಹಮೀದ್ ತಿಳಿಸಿದ್ದಾರೆ.

Recommended Video

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎಷ್ಟು ತರಥಮ್ಯ ನಡಿಯತ್ತೆ ಗೊತ್ತಾ!! | OneIndia Kannada

English summary
Bangladesh increase fuel prices up to 52%, protests erupting across the country. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X