ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲಿ ಓಮಿಕ್ರಾನ್ ಪತ್ತೆಯಾದ ರಾಷ್ಟ್ರಗಳ ಪಟ್ಟಿ: ಭಾರತಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಓಮಿಕ್ರಾನ್ ಹೊಸ ರೂಪಾಂತರವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮತ್ತೊಂದು ಅಲೆಯ ಭೀತಿಯನ್ನು ಹುಟ್ಟು ಹಾಕಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಹೊಸ ರೂಪಾಂತರಿ ಓಮಿಕ್ರಾನ್ ಜಗತ್ತಿನ 52 ರಾಷ್ಟ್ರಗಳಿಗೆ ಹರಡಿದೆ.

ಇಂಗ್ಲೆಂಡಿನಲ್ಲಿ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಗತ್ತಿನಾದ್ಯಂತ ಇದುವರೆಗೂ 982 ಮಂದಿಗೆ ಓಮಿಕ್ರಾನ್ ರೂಪಾಂತರ ತಳಿಯು ಅಂಟಿಕೊಂಡಿರುವುದು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಭಾರತದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಓಮಿಕ್ರಾನ್ ರೂಪಾಂತರ?ಭಾರತದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಓಮಿಕ್ರಾನ್ ರೂಪಾಂತರ?

ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಐದರಿಂದ 21ಕ್ಕೆ ಏರಿಕೆಯಾಗಿದೆ. 17 ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಜಸ್ಥಾನದಲ್ಲಿ 9, ಮಹಾರಾಷ್ಟ್ರ 8, ಕರ್ನಾಟಕ 2, ಗುಜರಾತ್ ಮತ್ತು ದೆಹಲಿಯಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ವಿಶ್ವದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾದ ಟಾಪ್-15 ರಾಷ್ಟ್ರಗಳ ಪಟ್ಟಿಯನ್ನು ಇಲ್ಲಿ ನೋಡಿ.

52 Countries around the World Reported 982 Confirmed Cases of Omicron Variant

ಅತಿಹೆಚ್ಚು ಓಮಿಕ್ರಾನ್ ಪ್ರಕರಣ: ಟಾಪ್-15 ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ
1 ಯುಕೆ 246
2 ದಕ್ಷಿಣ ಆಫ್ರಿಕಾ 228
3 ಜಿಂಬಾಬ್ವೆ 50
4 ಯುಎಸ್ 40
5 ಘಾನ 33
6 ಡೆನ್ಮಾರ್ಕ್ 32
7 ಪೋರ್ಚುಗಲ್ 28
8 ಆಸ್ಟ್ರೇಲಿಯಾ 28
9 ಫ್ರಾನ್ಸ್ 25
10 ದಕ್ಷಿಣ ಕೊರಿಯಾ 24
11 ಬೋಟ್ಸ್ವಾನ್ 23
12 ಕೆನಡಾ 22
13 ಭಾರತ 21
14 ನಾರ್ವೇ 19
15 ನೆದರ್ ಲ್ಯಾಂಡ್ 18

ಯಾವ ರಾಷ್ಟ್ರಗಳಲ್ಲಿ ಎಷ್ಟು ಪ್ರಕರಣಗಳು ವರದಿ?:
ವಿಶ್ವದಲ್ಲಿ ಟಾಪ್ 15 ರಾಷ್ಟ್ರಗಳ ಹೊರತಾಗಿ ಇತರೆ ರಾಷ್ಟ್ರಗಳಲ್ಲೂ ಕೊರೊನಾವೈರಸ್ ಹೊಸ ರೂಪಾಂತರಿಯು ಕಾಣಿಸಿಕೊಂಡಿದೆ. ಆಸ್ಟ್ರೀಯಾ - 15, ಜರ್ಮನಿ - 15, ಹಾಂಗ್ ಕಾಂಗ್ - 12, ಇಸ್ರೇಲ್ - 11, ಇಟಲಿ - 9, ಬೆಲ್ಜಿಯಂ - 7, ಸ್ಪೇನ್ - 7, ಫಿನ್ಲಂಡ್ - 7, ಸ್ವೀಡನ್ - 7, ಸ್ವಿಡ್ಜರ್ ಲ್ಯಾಂಡ್ - 6, ಸಿಂಗಾಪುರ್ - 6, ಬ್ರೆಜಿಲ್ - 5, ಐಸ್ ಲ್ಯಾಂಡ್ - 3, ಜಪಾನ್ - 3, ನೈಜಿರಿಯಾ - 3, ಕ್ರೋಟಿಯಾ -2, ಲಾಟ್ವಿಯಾ - 2, ನೇಪಾಳ -2, ರೋಮಾನಿಯಾ - 2, ರಷ್ಯಾ - 2, ಜಾಂಬಿಯಾ - 2, ಯುನೈಟೆಡ್ ಅರಬ್ ಎಮರೇಟ್ಸ್ - 1, ಅರ್ಜೆಂಟೇನಾ - 1, ಚಿಲಿ - 1, ಕೆಚಿಯಾ - 1, ಗ್ರೀಸ್ - 1, ಐರ್ಲೆಂಡ್ - 1, ಶ್ರೀಲಂಕಾ - 1, ಮಾಲ್ಡೀವ್ಸ್ - 1, ಮೆಕ್ಸಿಕೋ - 1, ಮಲೇಷಿಯಾ - 1 ಸೌದಿ ಅರೇಬಿಯಾ - 1, ಸೆನಾಗಲ್ - 1 ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಓಮಿಕ್ರಾನ್ ರೂಪಾಂತರದ ಹರಡುವಿಕೆ ವೇಗ ಅಧಿಕ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಈ ಹಿಂದೆ ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಅಪಾಯಕಾರಿ ಎನಿಸಿಕೊಂಡಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರಸ್ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಓಮಿಕ್ರಾನ್ ರೂಪಾಂತರ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

English summary
52 Countries around the World Reported 982 Confirmed Cases of Omicron Variant. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X