ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ISIS ಉಗ್ರರಿಗೆ ಪಾಕ್ ಬೆಂಬಲ: ಬಾಂಬ್ ದಾಳಿಯಿಂದ ಬಯಲಾದ ಸತ್ಯ

ಅಷ್ಟಕ್ಕೂ ಉಗ್ರರ ಅಡಗುದಾಣಗಳ ಬಳಿ ಪಾಕಿಸ್ತಾನಿ ಪ್ರಜೆಗಳು ಏಕಿದ್ದರು ಎಂಬ ಪ್ರಶ್ನೆಗೆ ಅಮೆರಿಕ ಸೇನೆಯೇ ಉತ್ತರ ನೀಡಿದೆ.

|
Google Oneindia Kannada News

ಕಾಬೂಲ್, ಏಪ್ರಿಲ್ 14: ಐಎಸ್ಐಎಸ್ ಉಗ್ರರ ಅಡಗುದಾಣಗಳ ಮೇಲೆ ಗುರುವಾರ ರಾತ್ರಿ ಅಮೆರಿಕ ಸರ್ಕಾರ ನಡೆಸಿದ ಬಾಂಬ್ ದಾಳಿಯು, ಪಾಕಿಸ್ತಾನ ಸರ್ಕಾರದ ಉಗ್ರ ಬೆಂಬಲ ನೀತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ಆಫ್ಘಾನಿಸ್ತಾನ- ಪಾಕಿಸ್ತಾನ ಗಡಿ ಭಾಗದಲ್ಲಿನ ನಗರ್ಹಾರ್ ಪ್ರಾಂತ್ಯದಲ್ಲಿ ನಡೆದ ಈ ಬಾಂಬ್ ದಾಳಿಯಲ್ಲಿ ಐಎಸ್ ಉಗ್ರರ ಜತೆಗೆ ಓರ್ವ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟಲಿಜೆನ್ಸ್ ನ (ಐಎಸ್ಐ) ಅಧಿಕಾರಿ ಸೇರಿದಂತೆ 500 ಪಾಕಿಸ್ತಾನಿ ನಾಗರಿಕರು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಈ ಎಲ್ಲರೂ ಐಎಸ್ ಉಗ್ರರ ಬೆಂಬಲಿಗರು ಎಂದು ಹೇಳಲಾಗಿದೆ.[ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?]

ಅಷ್ಟಕ್ಕೂ ಉಗ್ರರ ಅಡಗುದಾಣಗಳ ಬಳಿ ಪಾಕಿಸ್ತಾನಿ ಪ್ರಜೆಗಳು ಏಕಿದ್ದರು ಎಂಬ ಪ್ರಶ್ನೆಗೆ ಅಮೆರಿಕ ಸೇನೆಯೇ ಉತ್ತರ ನೀಡಿದೆ. ಇತ್ತೀಚೆಗೆ, ಉಗ್ರರ ವಿರುದ್ಧ ಸಿಡಿದೆದ್ದಿದ್ದ ಪಾಕಿಸ್ತಾನ ಸರ್ಕಾರವು ನಗರ್ಹಾರ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಹಲವಾರು ದಾಳಿಗಳನ್ನು ನಡೆಸಿತ್ತು.[ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು]

ಮೊದಲಿನಿಂದಲೂ ತಾವು ಉಗ್ರರ ವಿರೋಧಿಯೆಂದು ಹೇಳಿಕೊಳ್ಳುತ್ತಾ ಪರೋಕ್ಷವಾಗಿ ಉಗ್ರರಿಗೆ ಆಶ್ರಯ, ಪೋಷಣೆ ನೀಡುತ್ತಿರುವ ಪಾಕಿಸ್ತಾನದ ಮುಖ ಈಗಾಗಲೇ ಜಗತ್ತಿಗೇ ಗೊತ್ತಿರುವ ವಿಚಾರ. ಒಸಾಮ್ ಬಿನ್ ಲ್ಯಾಡೆನ್ ನನ್ನು ತನ್ನಲ್ಲೇ ಗುಪ್ತವಾಗಿ ಇರಿಸಿಕೊಂಡಿದ್ದ ಪಾಕಿಸ್ತಾನದ ಕಳ್ಳಾಟವನ್ನು ಈಗ ಅಮೆರಿಕದ ಮತ್ತೊಮ್ಮೆ ವಿಶ್ವಕ್ಕೇ ತೋರಿಸಿದೆ.[ಅಫ್ಘಾನಿಸ್ತಾನ: ಉಗ್ರರ ಮೇಲೆ ಭಯಂಕರ ಬಾಂಬ್ ಹಾಕಿದ ಅಮೆರಿಕ]

ಹಾಗಾದರೆ, ಆಫ್ಘಾನಿಸ್ತಾನದ ನೆಲದಲ್ಲಿ ಪಾಕಿಸ್ತಾನ ಆಡಿದ್ದ ಕಳ್ಳಾಟವೇನು...? ಮುಂದೆ ಓದಿ.

 ಉಗ್ರ ಪೋಷಣೆಗಾಗಿ ಪುಟ್ಟ ಹಳ್ಳಿ ಸೃಷ್ಟಿ

ಉಗ್ರ ಪೋಷಣೆಗಾಗಿ ಪುಟ್ಟ ಹಳ್ಳಿ ಸೃಷ್ಟಿ

ಈ ಕಾರ್ಯಾಚರಣೆಗಾಗಿ, ಸುಮಾರು ಐಎಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದ ಪಾಕಿಸ್ತಾನ, ಈ ಪ್ರಾಂತ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾಗಿ ಹೇಳಿತ್ತು. ಕ್ರಮೇಣ, ಅಲ್ಲಿ ಪಾಕಿಸ್ತಾನದ ನಾಗರಿಕರ ಪುಟ್ಟ ಹಳ್ಳಿಯೊಂದೂ ಸೃಷ್ಟಿಯಾಗಿತ್ತು.

 ಗುಪ್ತಚರ ಇಲಾಖೆ ಎಚ್ಚರಿಕೆ

ಗುಪ್ತಚರ ಇಲಾಖೆ ಎಚ್ಚರಿಕೆ

ಇದನ್ನು ಗಮನಿಸಿದ್ದ ಭಾರತದ ಗುಪ್ತಚರ ಇಲಾಖೆ, ನಗರ್ಹಾರ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿರುವವರು ಐಎಸ್ ಉಗ್ರರ ಬೆಂಬಲಕ್ಕೆಂದೇ ನಿಯೋಜಿತವಾಗಿರುವಂಥವರು ಎಂದು ಹೇಳಿತ್ತು. ಅಲ್ಲದೆ, ಯುವ ಉಗ್ರರಿಗೆ ಇಲ್ಲಿ ಊಟ ವಸತಿಯ ಸೌಲಭ್ಯಗಳನ್ನು ಕಲ್ಪಿಸಿ ಭಯೋತ್ಪಾದನಾ ತರಬೇತಿಯನ್ನೂ ನೀಡಲಾಗುತ್ತಿದೆ. ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ಜಂಟಿಯಾಗಿ ಇದರ ಉಸ್ತುವಾರಿ ವಹಿಸಿದೆ ಎಂದು ಹೇಳಲಾಗಿತ್ತು.

 ಮಾಹಿತಿ ಪರಿಶೋಧಿಸಿದ್ದ ಅಮೆರಿಕ

ಮಾಹಿತಿ ಪರಿಶೋಧಿಸಿದ್ದ ಅಮೆರಿಕ

ಭಾರತದ ಗುಪ್ತಚರ ಇಲಾಖೆಯ ಈ ವರದಿಯನ್ನು ಆಧಾರಿಸಿದ ಅಮೆರಿಕ ಸರ್ಕಾರವೂ ಹಲವಾರು ದೃಷ್ಟಿಕೋನದಿಂದ ಇದನ್ನು ಪರೀಕ್ಷಿಸಿ, ಭಾರತದ ಮಾಹಿತಿ ಸರಿ ಎಂದು ಒಪ್ಪಿಕೊಂಡಿತ್ತು.

 ಕಾರ್ಯಾಚರಣೆಯಿಂದ ಪಾಕಿಸ್ತಾನ ಹೊರಕ್ಕೆ

ಕಾರ್ಯಾಚರಣೆಯಿಂದ ಪಾಕಿಸ್ತಾನ ಹೊರಕ್ಕೆ

ಹಾಗಾಗಿಯೇ, ಆಫ್ಘಾನಿಸ್ತಾನ ಸರ್ಕಾರದೊಂದಿಗೆ ಅಮೆರಿಕವು ದಾಳಿ ನಡೆಸುವ ಮುನ್ನ ಪಾಕಿಸ್ತಾನ ಸರ್ಕಾರಕ್ಕೆ ದಾಳಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.

 ಅಮೆರಿಕದ ಮತ್ತೊಂದು ದಿಟ್ಟ ಹೆಜ್ಜೆ

ಅಮೆರಿಕದ ಮತ್ತೊಂದು ದಿಟ್ಟ ಹೆಜ್ಜೆ

ಅದೇನೇ ಇರಲಿ, ಬಾಂಬ್ ದಾಳಿಯ ಅಮೆರಿಕವೂ, ಈ ಪ್ರಾಂತ್ಯದಲ್ಲಿದ್ದ ಸುಮಾರು 500 ಪಾಕಿಸ್ತಾನಿಗಳೂ ಮೃತಪಟ್ಟಿರುವುದನ್ನು ಹೇಳುತ್ತಾ ಪಾಕಿಸ್ತಾನ ಸರ್ಕಾರವು ಐಎಸ್ ಉಗ್ರರಿಗೆ ಕಾರ್ಯಾಚರಣೆ ಹೆಸರಿನಲ್ಲಿ ಬೆಂಬಲ ನೀಡುತ್ತಿದ್ದ ವಿಚಾರವನ್ನು ಜಗಜ್ಜಾಹೀರು ಮಾಡಿದೆ.

English summary
Atleast 500 Pakistani nationals have been killed in the US bombing that took place at Nangarhar province in Afghanistan. The area that was targetted was controlled by the Islamic State and protected by the Pakistan army, sources say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X