ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಪ್ರದೇಶದಲ್ಲಿ ಭೂ ಕುಸಿತ, 50ಕ್ಕೂ ಅಧಿಕ ಮಂದಿ ಸಾವು

|
Google Oneindia Kannada News

ಯಾಂಗೊನ್, ಜುಲೈ 2: ಮ್ಯಾನ್ಮಾರ್ ನ ಖನಿಜ(Jade) ಗಣಿ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾಗಿದೆ. ಭೂ ಕುಸಿತದಿಂದಾಗಿ ಸುಮಾರು 50 ಮಂದಿ ಮೃತಪಟ್ಟಿರುವ ಸುದ್ದಿ ಬಂದಿದೆ.

ಕಾಚಿನ್ ರಾಜ್ಯದ hpakant ಪ್ರದೇಶದ ಗಣಿಯಲ್ಲಿ ಈ ದುರಂತ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಮಣ್ಣಾಗಿದ್ದಾರೆ. ಮಣ್ಣು, ಧೂಳಿನ ಬಿರುಗಾಳಿ, ಭಾರಿ ಮಳೆ ಸುರಿದ ಪರಿಣಾಮ, ಗಣಿ ಭಾಗದಲ್ಲಿ ಕುಸಿತ ಉಂಟಾಗಿದೆ ಎಂದು ಸ್ಥಳೀಯ ಅಗ್ನಿ ಶಾಮಕ ದಳ ತಿಳಿಸಿದೆ. ಸದ್ಯಕ್ಕೆ 50 ಶವಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಈ ಪ್ರದೇಶದಲ್ಲಿ ಭೂ ಕುಸಿತ ನಿರೀಕ್ಷಿತವಾಗಿದ್ದು, ಅಪಾಯಕಾರಿ ಪ್ರದೇಶವಾಗಿದೆ. ಈ ದುರಂತ ಸಂಭವಿಸಿದಾಗ ನೂರಾರು ಮಂದಿ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಾತೆ ಮು ಗ್ರಾಮಸ್ಥರು ಹೇಳಿದ್ದಾರೆ.

Myanmar Jade mine landslide many dead

2015ರಲ್ಲಿ ಇದೇ ಪ್ರದೇಶದಲ್ಲಿ ಗಣಿಭಾಗದ ಭೂ ಕುಸಿತದಿಂದಾಗಿ ಸುಮಾರು 116 ಮಂದಿ ಮೃತಪಟ್ಟಿದ್ದರು. ಮ್ಯಾನ್ಮಾರ್ ನಲ್ಲಿ ನವೆಂಬರ್ 8ರಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ. ಕೊರೊನಾವೈರಸ್ ಭೀತಿ ನಡುವೆ ಎಲ್ಲಾ ಉದ್ಯಮಕ್ಕೂ ಅನುಮತಿ ಸಿಕ್ಕಿದೆ. ಮ್ಯಾನ್ಮಾರ್ ನಲ್ಲಿ ಸುಮಾರು 303 ಪ್ರಕರಣಗಳಿದ್ದು, 222 ಮಂದಿ ಗುಣಮುಖರಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.

English summary
Over 50 dead in #Myanmar Jade mine landslide. Rescue operation underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X