ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ಜಪಾನ್‌; 50 ಜನರನ್ನು ಗಾಯಗೊಳಿಸಿದ ಕೋತಿಗಳ ಹಿಂಡಿಗಾಗಿ ಶೋಧ

|
Google Oneindia Kannada News

ಟೋಕಿಯೊ, ಜುಲೈ 27: ಪಶ್ಚಿಮ ಜಪಾನ್‌ನಲ್ಲಿ ಜನರ ಮೇಲೆ ದಾಳಿ ಮಾಡಿ ಸುಮಾರು 50 ಜನರನ್ನು ಗಾಯಗೊಳಿಸಿದ್ದ ಕೋತಿಗಳ ಹಿಂಡಿಗಾಗಿ ಸ್ಥಳೀಯ ಅಧಿಕಾರಿಗಳು ಶೋಧ ಆರಂಭಿಸಿದ್ದು, ಅದರಲ್ಲಿ ಒಂದು ಕೋತಿ ಸೆರೆ ಸಿಕ್ಕಿದ್ದು ಅದನ್ನು ಕೊಂದು ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಯಮಗುಚಿ ನಗರದ ಪ್ರೌಢಶಾಲೆಯ ಮೈದಾನದಲ್ಲಿ ತಿರುಗುತ್ತಿರುವಾಗ ಗಂಡು ಸಿಮಿಯನ್ (simian) ಅನ್ನು ಸೆರೆಹಿಡಿಯಲಾಗಿತ್ತು. ಆದರೆ, ಇದು ಅಂತ್ಯವಲ್ಲ, ಇತರ ಕೋತಿಗಳು ಮತ್ತಷ್ಟು ದೊಡ್ಡದಾಗಿವೆ ಎನ್ನಲಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ.

ಕೋತಿಗಳು ಇವೆಯಂತೆ ನಮ್ಮ ಮೆಟ್ರೋ ಬೇಗ ಬೇಗ ಹತ್ರೋ....!ಕೋತಿಗಳು ಇವೆಯಂತೆ ನಮ್ಮ ಮೆಟ್ರೋ ಬೇಗ ಬೇಗ ಹತ್ರೋ....!

ಬಹುತೇಕ ಜನರಿಗೆ ಗೀರುಗಳಿಂದಾದ ಗಾಯಗಳು ಮತ್ತು ಕಡಿದ ಗುರುತುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೋತಿಗಳ ಹಿಂಡನ್ನು ಪತ್ತೆ ಹಚ್ಚಲು ಟೋಕಿಯೊ ಅನ್ನು ಪತ್ತೆಹಚ್ಚಲು ನಗರ ಅಧಿಕಾರಿಗಳು ವಾರಗಳಿಂದ ಪ್ರಯತ್ನಿಸುತ್ತಿದ್ದಾರೆ.

50 Injured In Monkey Gangs Attacks In Japan City

ಈ ಕೋತಿಗಳ ಹಿಂಡಿನ ಪತ್ತೆಗೆ ಮಂಗಳವಾರ ಸಂಜೆ, ವಿಶೇಷವಾಗಿ ನಿಯೋಜಿಸಲಾದ ಬೇಟೆಗಾರರು ಶಾಲೆಯ ಆವರಣದಲ್ಲಿ ಒಂದು ಕೋತಿಯನ್ನು ಪತ್ತೆ ಹಚ್ಚಿದ್ದಾರೆ. ಜನರ ಮೇಲೆ ದಾಳಿ ನಡೆಸಿದ ತಂಡದಲ್ಲಿದ್ದ ಕೋತಿ ಇದು ಎಂದು ಗುರುತಿಸಿದ ನಂತರ, ಕೋತಿಯನ್ನು ಕೊಲ್ಲಲಾಗಿದೆ. ಅದಕ್ಕೆ ಅಂದಾಜು ನಾಲ್ಕು ವರ್ಷ ವಯಸ್ಸಾಗಿತ್ತು ಮತ್ತು ಸುಮಾರು ಅರ್ಧ ಮೀಟರ್ ಎತ್ತರವಿತ್ತು ಎಂದು ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು ಮೂರು ವಾರಗಳ ಹಿಂದೆ ಯಮಗುಚಿಯಲ್ಲಿ ದೊಡ್ಡವರು ಮತ್ತು ಮಕ್ಕಳ ಮೇಲೆ ದಾಳಿಗಳು ಪ್ರಾರಂಭವಾಗಿದ್ದು, ಗಸ್ತು ನಡೆಸಲಾಗುತ್ತಿದೆ. ಆದರೂ, ಮಂಗಳವಾರ ಮಧ್ಯಾಹ್ನದ ವೇಳೆಗೆ 49 ಜನರು ಗಾಯಗೊಂಡಿದ್ದಾರೆ. ಹೊಸ ದಾಳಿಯ ವರದಿಗಳು ಬರುತ್ತಿವೆ, ಹೀಗಾಗಿ ಶೋಧ ಇನ್ನೂ ಮುಂದುವರಿದಿದೆ.

ಜಪಾನಿನ ಮಕಾಕ್‌ಗಳು (macaques) ದೇಶದ ಹಲವು ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

English summary
50 Injured In Monkey Gang Attack In Japan City, Local authorities hunting gang of monkeys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X