ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜೀರಿಯಾದಲ್ಲಿ ನೂರಾರು ಜನರ 'ನಿಗೂಢ' ಸಾವಿಗೆ ಕಾರಣ ಇದೇನಾ.?

|
Google Oneindia Kannada News

ಅಬುಜ, ಜೂನ್ 9: ಅದು ಏಪ್ರಿಲ್ ತಿಂಗಳ ಆರಂಭ. ಯೂರೋಪ್ ನಲ್ಲಿ ಕೋವಿಡ್-19 ಆರ್ಭಟಿಸುತ್ತಿದ್ದ ಸಂದರ್ಭ. ಅತ್ತ ಇಟಲಿಯಲ್ಲಿ ಪ್ರತಿದಿನ 700 ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗುತ್ತಿದ್ದರೆ, ಇತ್ತ ನೈಜೀರಿಯಾದ ಕಾನೋದಲ್ಲೂ ನೂರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು.

ಅಂದು ಇಟಲಿಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿತ್ತು ನಿಜ. ಮಹಾಮಾರಿ ಕೊರೊನಾ ವೈರಸ್ ನಿಂದ ಇಟಲಿಯಲ್ಲಿ ಸಾವಿರಾರು ಮಂದಿ ಪ್ರಾಣ ಬಿಟ್ಟಿದ್ದರು. ಆದ್ರೆ, ಅದೇ ಸಮಯದಲ್ಲಿ ನೈಜೀರಿಯಾದಲ್ಲಿ ಮಾತ್ರ ನೂರಾರು ಮಂದಿಯ ಮಾರಣ ಹೋಮಕ್ಕೆ ಕಾರಣ ಏನು ಎಂಬುದು ಮಾತ್ರ ಸ್ಪಷ್ಟವಾಗಿರಲಿಲ್ಲ.

ಭಾರತದಲ್ಲಿ ಕೋವಿಡ್-19 ಆರ್ಭಟ: ಅನ್ ಲಾಕ್ ಗೆ ಇದು ಸಕಾಲವೇ?ಭಾರತದಲ್ಲಿ ಕೋವಿಡ್-19 ಆರ್ಭಟ: ಅನ್ ಲಾಕ್ ಗೆ ಇದು ಸಕಾಲವೇ?

ಏಪ್ರಿಲ್ ತಿಂಗಳಿನಲ್ಲಿ ನೂರಾರು ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಕಾರಣ ಎಂದು ಇದೀಗ ನೈಜೀರಿಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕೋವಿಡ್-19 ಕಾರಣ

ಕೋವಿಡ್-19 ಕಾರಣ

ಏಪ್ರಿಲ್ ತಿಂಗಳಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದವರ ಪೈಕಿ 60% ಪ್ರಕರಣಗಳು ಕೋವಿಡ್-19 ಗೆ ಸಂಬಂಧಪಟ್ಟಿದೆ ಎಂದು ನೈಜೀರಿಯಾದ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಕಾನೋ ಸಿಟಿಯಲ್ಲಿ ಸಂಭವಿಸುತ್ತಿದ್ದ ನಿಗೂಢ ಸಾವಿನ ಕುರಿತು ತನಿಖೆ ಮಾಡಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ಮೃತದೇಹಗಳ ವರ್ಬಲ್ ಅಟಾಪ್ಸಿ ನಡೆಸುವಂತೆ ಸೂಚಿಸಲಾಗಿತ್ತು.

979 ಮಂದಿ ಮೃತಪಟ್ಟಿದ್ದರು.!

979 ಮಂದಿ ಮೃತಪಟ್ಟಿದ್ದರು.!

ಕಾನೋ ಸಿಟಿಯ ಎಂಟು ಪುರಸಭೆ ಸ್ಥಳೀಯ ಸರ್ಕಾರಿ ಪ್ರದೇಶಗಳಲ್ಲಿ ದಿನಕ್ಕೆ 43 ರಂತೆ ಒಟ್ಟು 979 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಒಸಾಗೆ ಎಹಾನಿರೆ ತಿಳಿಸಿದ್ದಾರೆ.

50-60% ರಷ್ಟು ಸಾವಿನ ಪ್ರಕರಣಗಳು ಕೋವಿಡ್-19 ನಿಂದ ಸಂಭವಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ ಒಸಾಗೆ ಎಹಾನಿರೆ.

ಕೋವಿಡ್-19 ನಿಯಮಗಳ ಉಲ್ಲಂಘನೆ: ಕೆಲಸದಿಂದ ವಜಾಗೊಂಡ ಸೇನೆಯ ಮುಖ್ಯಸ್ಥಕೋವಿಡ್-19 ನಿಯಮಗಳ ಉಲ್ಲಂಘನೆ: ಕೆಲಸದಿಂದ ವಜಾಗೊಂಡ ಸೇನೆಯ ಮುಖ್ಯಸ್ಥ

ಅಂದು ಕಾನೋ ಸರ್ಕಾರ ಹೇಳಿದ್ದೇನು.?

ಅಂದು ಕಾನೋ ಸರ್ಕಾರ ಹೇಳಿದ್ದೇನು.?

ಏಪ್ರಿಲ್ ಕೊನೆಯ ವಾರಕ್ಕೆ ಹೋಲಿಸಿದರೆ, ಮೇ ಆರಂಭದಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ, ಮೆನಿಂಜೈಟಿಸ್ ಮತ್ತು ಮಲೇರಿಯಾದಿಂದ ಸಾವುಗಳು ಸಂಭವಿಸಿವೆ ಎಂದು ಅಂದು ಕಾನೋ ರಾಜ್ಯ ಸರ್ಕಾರ ಹೇಳಿತ್ತು.

ನೈಜೀರಿಯಾದಲ್ಲಿ ಕೊರೊನಾ ವೈರಸ್ ಸೋಂಕಿತರು

ನೈಜೀರಿಯಾದಲ್ಲಿ ಕೊರೊನಾ ವೈರಸ್ ಸೋಂಕಿತರು

ನೈಜೀರಿಯಾದಲ್ಲಿ ಸದ್ಯ 12,486 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ 999 ಪ್ರಕರಣಗಳು ಕಾನೋದಲ್ಲಿ ದಾಖಲಾಗಿವೆ. ಇಲ್ಲಿಯವರೆಗೂ ನೈಜೀರಿಯಾದಲ್ಲಿ 354 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಅಸಲಿಗೆ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಿದೆ ಅಂತ ಸ್ಥಳೀಯರು ತಿಳಿಸಿದ್ದಾರೆ.

English summary
50-60 Percent Of Mysterious deaths in Nigeria's Kano were likely due to Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X