• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಂಗಿಯರನ್ನು ಕಾಪಾಡಲು ಹೋಗಿ ಪ್ರಾಣ ತೆತ್ತ 5 ವರ್ಷದ ಬಾಲಕಿ

|

ಇಡ್ಲಿಬ್, ಜುಲೈ 31: ಯಾರದೋ ರಾಜಕೀಯ ದ್ವೇಷ, ಅಧಿಕಾರದ ದಾಹ, ಪ್ರತಿಷ್ಠೆಯ ಹುಚ್ಚಿಗೆ ಸಿರಿಯಾ ಎಂಬ ನತದೃಷ್ಟ ದೇಶದಲ್ಲಿ ದಿನಬೆಳಗಾದರೆ ನಡೆಯುತ್ತಿರುವ ಹಿಂಸೆ ಮಾನವೀಯತೆಗೇ ಬಹುದೊಡ್ಡ ಸವಾಲಾಗಿದೆ. ಇತ್ತೀಚೆಗೆ ನಡೆದ ಏರ್ ಸ್ಟ್ರೈಕ್ ವೊಂದರಲ್ಲಿ ಮನೆಯೊಂದು ಬಾಂಬ್ ದಾಳಿಗೊಳಗಾಗಿ ಕುಸಿದುಬಿದ್ದ ಘಟನೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಷ್ಕಾರಣವಾಗಿ ಯಾರದೋ ಕ್ರೌರ್ಯಕ್ಕೆ ನಲುಗುವ ಅಮಾಯಕರ ಅಸಹಾಯಕತೆಯ ಪ್ರತೀಕವಾಗಿದೆ.

ಪಶ್ಚಿಮ ಇಡ್ಲಿಬ್ ಪ್ರದೇಶದ ಅರಿಹಾ ಎಂಬಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿತ್ತು. ಇದನ್ನು ರಷ್ಯಾ ಬೆಂಬಲಿತ ಸಿರಿಯಾ ಸರ್ಕಾರದ ಸೇನೆಯೋ ಅಥವಾ ವಿರೋಧಿ ಬಣವೋ ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಆದರೆ ಈ ಘಟನೆಯಲ್ಲಿ ಅವಶೇಷಗಳಡಿ ಸಿಲುಕಿಕೊಂಡ ತಂಗಿಯರನ್ನು ಕಾಪಾಡಲು ಹೋಗಿ ಕೇವಲ 5 ವರ್ಷ ವಯಸ್ಸಿನ ಪುಟ್ಟ ಹುಡುಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ದೃಶ್ಯ ಹೃದಯವನ್ನು ಕಲಕುತ್ತದೆ.

ಸಿರಿಯಾದಲ್ಲಿ ಉಗ್ರರಿಂದ ಮಾರ್ಟರ್ ಶೆಲ್ಲಿಂಗ್ : 12 ಮಂದಿ ಸಾವು

ರಿಹಾಮ್ ಎಂಬ ಬಾಲಕಿ ಅವಶೇಷಗಳಡಿಯಲ್ಲಿ ಬಿದ್ದಿದ್ದ ತನ್ನ ಏಳು ತಿಂಗಳು ವಯಸ್ಸಿನ ತಂಗಿಯ ಅಂಗಿಯನ್ನು ಹಿಡಿದು ಆಕೆಯನ್ನು ಕಾಪಾಡಿದ್ದಾಳೆ. ನಂತರ ಇಬ್ಬರೂ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಈ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಿಹಾಮ್ ಸಾವನ್ನಪ್ಪಿದ್ದರೆ, ಆಕೆಯ ತ್ಯಾಗದಿಂದಾಗಿ ತಂಗಿ ತುಖಾ ಬದುಕಿದ್ದಾಳೆ! ಈ ಘಟನೆಯಲ್ಲಿ ರಿಹಾಮ್ ಳ ಇನ್ನೋರ್ವ ತಂಗಿಯೂ ಅಸುನೀಗಿದ್ದು, ತಾಯಿಯೂ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಕಣ್ಣೆದುರಲ್ಲೇ ತನ್ನ ಕುಟುಂಬದ ಸದ್ಯರು, ಮಕ್ಕಳು ಹಿಂಸೆ ಅನುಭವಿಸುತ್ತಿದ್ದರೆ ಮೇಲೆ ನಿಂತು ತಂದೆ ಅಬ್ದುಲ್ಲಾ ಚೀರಾಡುತ್ತ ತಮ್ಮ ಅಸಹಾಯಕತೆಯನ್ನು ಬೈದುಕೊಳ್ಳುತ್ತಿದ್ದಾರೆ.

5 year old girl dies while protecting their sister from bombing

ಕಟ್ಟಡದ ಐದನೇ ಮಹಡಿಯಲ್ಲಿ ವಾಸವಿದ್ದ ಇವರು, ಬಾಂಬ್ ದಾಳಿಯಿಂದಾಗಿ ಕಟ್ಟಡ ಕುಸಿದು, ಕೆಳಕ್ಕೆ ಅವಶೇಷಗಳಡಿ ಬಿದ್ದಿದ್ದರು.

ಟ್ರಂಪ್ ನಿಲುವಿಗೆ ಬೇಸರ: ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

ಸಿರಿಯಾದಲ್ಲಿ ಉಗ್ರರ ಪ್ರಬಲ ನೆಲೆಯಾಗಿರುವ ಇಡ್ಲಿಡ್ ನಲ್ಲಿ ಉಗ್ರರನ್ನು ಹತ್ತಿಕ್ಕಲು, ಮತ್ತು ವಿರೋಧಿ ಬಣದ ಪ್ರಾಬಲ್ಯದಿಂದ ಆ ಸ್ಥಳವನ್ನು ಮುಕ್ತಗೊಳಿಸಲು ಸಿರಿಯಾ ಸರ್ಕಾರವೇ ರಷ್ಯಾ ಸೇನೆಯ ಸಹಕಾರದಿಂದ ಈ ಪ್ರದೇಶದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ವಿರೋಧಿ ಬಣ ಮತ್ತು ಉಗ್ರರೂ ಈ ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದು, ಸರ್ಕಾರಮ ವಿರೋಧಿ ಬಣ, ಉಗ್ರರ ನಡುವಿನ ನಿರಂತರ ಯುದ್ಧದಿಂದಾಗಿ ಇಲ್ಲಿನ ಅಮಾಯಕ ಜನ ಪ್ರತಿದಿನ ಸಮಸ್ಯೆ ಎದುರಿಸಬೇಕಾಗಿದೆ.

ಸಿರಿಯಾ ಉಗ್ರರ ನೆಲೆಯ ಮೇಲೆ ರಷ್ಯಾ ವೈಮಾನಿಕ ದಾಳಿ

ಕಳೆದ ಮೂರು ತಿಂಗಳಲ್ಲೇ ಈ ಪ್ರದೇಶದಲ್ಲಿ 450 ಕ್ಕೂ ಹೆಚ್ಚು ನಾಗರಿಕರು ಅಸುನೀಗಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 5-year-old girl in Syria died after she was trying to save her sisters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more