ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬಿಯಾ ರಾಜಧಾನಿ ಬಗೋಟಾದಲ್ಲಿ ಕಾರ್ ಬಾಂಬ್ ಸ್ಫೋಟ, ಕನಿಷ್ಠ ಐವರ ಸಾವು

|
Google Oneindia Kannada News

ಕೊಲಂಬಿಯಾ ರಾಜಧಾನಿ ಬಗೋಟಾದಲ್ಲಿನ ಪೊಲೀಸ್ ಅಕಾಡೆಮಿಯಲ್ಲಿ ಗುರುವಾರದಂದು ಕಾರ್ ಬಾಂಬ್ ಸ್ಫೋಟವಾಗಿ, ಕನಿಷ್ಠ ಐವರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಬಗೋಟಾದ ಮೇಯರ್ ಮಾಹಿತಿ ನೀಡಿದ್ದಾರೆ.

ಬಾಂಬ್ ಸ್ಫೋಟ: ಬಸ್ಸಿನಲ್ಲಿದ್ದ ನಾಲ್ವರು ಪ್ರವಾಸಿಗರು ಸಾವುಬಾಂಬ್ ಸ್ಫೋಟ: ಬಸ್ಸಿನಲ್ಲಿದ್ದ ನಾಲ್ವರು ಪ್ರವಾಸಿಗರು ಸಾವು

ಜನರಲ್ ಸಂಟಾಂಡರ್ ಪೊಲೀಸ್ ಅಕಾಡೆಮಿಯ ಹೊರ ಭಾಗದ ಪರಿಸ್ಥಿತಿ ಉದ್ವಿಗ್ನವಾಗಿದೆ. ಮಾಮೂಲಿಯಾಗಿಯೇ ಹೆಚ್ಚಿನ ಭದ್ರತೆ ಇರುವ ಈ ಪ್ರದೇಶಕ್ಕೆ ಆಂಬುಲೆನ್ಸ್ ಗಳು ಹಾಗೂ ಹೆಲಿಕಾಪ್ಟರ್ ಗಳು ಧಾವಿಸುತ್ತಿವೆ. ದೊಡ್ಡ ಶಬ್ದ ಕೇಳಿಸಿತು. ಆ ನಂತರ ಎದುರಿನಲ್ಲಿನ ಕಟ್ಟಡದ ಕಿಟಕಿಯನ್ನು ಪುಡಿ ಮಾಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ಚಿತ್ರಗಳು ಹರಿದಾಡುತ್ತಿದ್ದು, ಅಕಾಡೆಮಿಯ ಕ್ಯಾಂಪಸ್ ನೊಳಗೆ ಸ್ಫೋಟಗೊಂಡಿರುವ ವಾಹನದ ಸುತ್ತ ಅವಶೇಷಗಳು ಬಿದ್ದಿರುವುದು ಕಂಡುಬರುತ್ತಿದೆ. ಮೇಯರ್ ಎನ್ರಿಕ್ ಪೆನಲೊಸ ಹೇಳುವ ಪ್ರಕಾರ, ಈ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಹತ್ತು ಮಂದಿ ಗಾಯಗೊಂಡಿದ್ದಾರೆ.

5 killed, 10 injured in car bombing at police academy in Colombia

‌ ನ್ಯಾಷನಲ್ ಲಿಬರೇಷನ್ ಆರ್ಮಿ ಎಡಪಂಥೀಯ ಕ್ರಾಂತಿಕಾರಿಗಳು ಪೊಲೀಸರನ್ನು ಗುರಿ ಮಾಡಿಕೊಂಡು ದಾಳಿಗೆ ಇಳಿದಿದ್ದಾರೆ. ಅಧ್ಯಕ್ಷ ಇವಾನ್ ದುಖೆ ವಿರುದ್ಧ ಅವರಿಗೆ ಆಕ್ರೋಶ ಇದ್ದು, ಶಾಂತಿ ಮಾತುಕತೆ ಹೇಗೆ ಆರಂಭಿಸಬೇಕು ಎಂಬ ಚಿಂತನೆ ನಡೆಯುತ್ತಿದೆ.

English summary
Bogota’s mayor says at least five people have been killed and another 10 injured in a car bombing at a police academy in Colombia’s capital. The scene outside the General Santander police academy is chaotic, with ambulances and helicopters rushing to the normally tightly controlled facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X