ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ಶೂಟೌಟ್ : ಹತ್ಯೆಯಾದ 50 ಜನರಲ್ಲಿ ಐವರು ಭಾರತೀಯರು

|
Google Oneindia Kannada News

ನವದೆಹಲಿ, ಮಾರ್ಚ್ 17 : ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್ ನಗರದ ಮಸೀದಿಗಳ ಮೇಲೆ ನಡೆದ ದಾಳಿಯಲ್ಲಿ ಐವರು ಭಾರತೀಯರು ಮೃತಪಟ್ಟಿದ್ದಾರೆ. ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 50 ಜನರು ಮೃತಪಟ್ಟಿದ್ದರು.

ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಐವರು ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದೆ. ಮೊದಲು ಐವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಮೃತಪಟ್ಟವರ ಹೆಸರುಗಳನ್ನು ಟ್ವೀಟ್ ಮಾಡಲಾಗಿದೆ.

'ಆ ಅಪರಿಚಿತ ರಕ್ಷಣೆಗೆ ಮುಂದಾಗದಿದ್ದರೆ ಇನ್ನಷ್ಟು ಸಾವು-ನೋವಾಗ್ತಿತ್ತು''ಆ ಅಪರಿಚಿತ ರಕ್ಷಣೆಗೆ ಮುಂದಾಗದಿದ್ದರೆ ಇನ್ನಷ್ಟು ಸಾವು-ನೋವಾಗ್ತಿತ್ತು'

ಶುಕ್ರವಾರ ಮಸೀದಿಗೆ ನುಗ್ಗಿದ ಬಂದೂಕುಧಾರಿ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದ. ಗುಂಡಿನ ದಾಳಿ ನಡೆಸಿದ ಬ್ರೆಂಟನ್ ಟೆರ್ರಂಟ್‌ನನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಆತನ ವಿರುದ್ಧ ಹತ್ಯೆ ಪ್ರಕರಣ ದಾಖಲು ಮಾಡಲಾಗಿದೆ.

49 ಮುಸ್ಲಿಂರನ್ನು ಬಲಿಪಡೆದವ ಆಸ್ಟ್ರೇಲಿಯಾದ ಭಯೋತ್ಪಾದಕ49 ಮುಸ್ಲಿಂರನ್ನು ಬಲಿಪಡೆದವ ಆಸ್ಟ್ರೇಲಿಯಾದ ಭಯೋತ್ಪಾದಕ

ದಾಳಿಯಲ್ಲಿ ತೊಂದರೆಗೊಳಗಾದ ಭಾರತೀಯರ ಕುರಿತು ಮಾಹಿತಿ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ದಿನ 24 ಗಂಟೆಯೂ 021803899 ಮತ್ತು 021850033 ನಂಬರ್‌ನ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ.

ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ

ಈ ದಾಳಿಯ ಬಳಿಕ ನ್ಯೂಜಿಲೆಂಡ್ ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಬಂದೂರು ಪರವಾನಿಗೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ತೀರ್ಮಾನಿಸಿದೆ. ಮಸೀದಿ ಮೇಲೆ ದಾಳಿ ನಡೆಸಿದ ಬ್ರೆಂಟನ್ ಕಾನೂನಾತ್ಮಕವಾಗಿಯೇ 5 ಬಂದೂಕು ಹೊಂದಿದ್ದ.

ರಾಯಭಾರ ಕಚೇರಿ ಟ್ವೀಟ್

ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್ ನಗರದ ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯರ ಹೆಸರುಗಳು.

ಕುಟುಂಬ ಸದಸ್ಯರಿಗೆ ಸಹಕಾರ

ಮೃತಪಟ್ಟವರ ಕುಟುಂಬ ಸದಸ್ಯರ ಸಹಾಯಕ್ಕಾಗಿ ವೆಬ್ ಪೇಜ್ ಆರಂಭಿಸಲಾಗಿದೆ. ನ್ಯೂಜಿಲೆಂಡ್‌ನಲ್ಲಿ ಸುಮಾರು 2 ಲಕ್ಷ ಭಾರತೀಯರಿದ್ದಾರೆ. 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಸಹಾಯವಾಣಿ ಆರಂಭ

ದಾಳಿಯಿಂದ ತೊಂದರೆಗೊಳಗಾದ ಭಾರತೀಯರ ಸಹಾಯಕ್ಕಾಗಿ ರಾಯಭಾರ ಕಚೇರಿ ಸಹಾಯವಾಣಿಯನ್ನು ಆರಂಭಿಸಿದೆ. ಅಗತ್ಯವಿರುವವರು ಈ ನಂಬರ್‌ಗೆ ಕರೆ ಮಾಡಬಹುದು ಎಂದು ಕಚೇರಿ ಹೇಳಿದೆ.

ಭಾರತ ಖಂಡಿಸಿತ್ತು

ಮಸೀದಿಯ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಇಲಾಖೆ ಸಚಿವ ಸುಷ್ಮಾ ಸ್ವರಾಜ್ ಈ ಕುರಿತು ಟ್ವೀಟ್ ಮಾಡಿದ್ದರು.

English summary
5 Indians killed in shooting in two mosques in New Zealand. The Indian High Commission tweeted the names of people. The New Zealand police confirmed that the death count in the shootings has risen to 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X