ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಂಬೆಳಿಗ್ಗೆ ನಡುಗಿದ ಭೂಮಿ: ನೇಪಾಳದಲ್ಲಿ ಭೂಕಂಪ

|
Google Oneindia Kannada News

ಕಠ್ಮಂಡು, ಸೆಪ್ಟೆಂಬರ್ 16: ಬುಧವಾರ ಮುಂಜಾನೆ ಸವಿ ನಿದ್ರೆಯಲ್ಲಿದ್ದ ನೇಪಾಳದ ಜನತೆ ಬೆಚ್ಚಿಬೀಳುವಂತೆ ಭೂಮಿ ನಡುಗಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಬೆಳಿಗ್ಗೆ ರಿಕ್ಟರ್ ಮಾಪನದಲ್ಲಿ 5.4 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

'ನೇಪಾಳದ ಕಠ್ಮಂಡುವಿನ 50 ಕಿ.ಮೀ. ಪೂರ್ವ ಭಾಗದಲ್ಲಿ ಇಂದು ಬೆಳಿಗ್ಗೆ 5.04ರ ವೇಳೆಗೆ ರಿಕ್ಟರ್ ಮಾಪನದಲ್ಲಿ 5.4 ತೀವ್ರತೆಯ ಭೂಕಂಪ ಉಂಟಾಗಿದೆ' ಎಂದು ಕೇಂದ್ರ ಮಾಹಿತಿ ನೀಡಿದೆ. ಸುಮಾರು 4.5 ಮಿಲಿಯನ್ ಜನಸಂಖ್ಯೆ ಇರುವ ಪ್ರದೇಶದಲ್ಲಿ ಭೂಕಂಪನ ಉಂಟಾಗಿದೆ ಎಂದು ಮೂಲಗಳು ಹೇಳಿವೆ.

5.4 Magnitude Earthquake Hits Nepals Kathmandu And Nearby Places

Recommended Video

Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada

ನೇಪಾಳದ ಮಧ್ಯಮಾಂಚಲ, ಕೊಥಾರಿ, ಕ್ಸಿಜಾಂಗ್-ನೇಪಾಳ್ ಗಡಿ ಪ್ರದೇಶ, ಧೂಮ್ತಂಗ್ ಮುಂತಾದ ಪ್ರದೇಶಗಳಲ್ಲಿ ಭೂಮಿ ನಡುಗಿದೆ. ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಪಾಯಕಾರಿ ಪ್ರಮಾಣದಲ್ಲಿ ಭೂಮಿ ನಡುಗಿಲ್ಲ. ಆದರೆ ಮಲಗಿದ್ದವರು ಗಾಬರಿಯಿಂದ ಎದ್ದು ಮನೆಯಿಂದ ಹೊರಗೋಡಿ ಬರುವಷ್ಟು ತೀವ್ರವಾಗಿತ್ತು ಎನ್ನಲಾಗಿದೆ. ಚೀನಾದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ.

English summary
5.4 Magnitude earthquake jolts Nepal's Kathmandu in the early morning of Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X