ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ 48 ಗಂಟೆಗಳ ಗಡುವು

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 8: ಮೌಲಾನಾ ಫಜ್ಲೂರ್ ರೆಹಮಾನ್ ನೇತೃತ್ವದ ವಿರೋಧ ಪಕ್ಷ ನಾಯಕರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದ್ದಾರೆ.

ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಇನ್ನು ಎರಡು ದಿನಗಳಲ್ಲಿ ಹೊಸ ದಿಕ್ಕನ್ನು ಪಡೆಯಲಿದೆ ಎಂದು ಹೇಳಿದ್ದಾರೆ. ಬಲಪಂಥೀಯ ಜಮೈತ್-ಉಲೆಮಾ-ಇ-ಇಸ್ಲಾಮ್ ಫಜ್ಲ್(ಜೆಯುಐ-ಎಫ್) ನಾಯಕ ಬೃಹತ್ ಪ್ರತಿಭಟನೆಯ ಮುಂಚೂಣಿ ವಹಿಸಿದ್ದು ಇದನ್ನು ಆಜಾದಿ ಮೆರವಣಿಗೆ ಎಂದು ಕರೆದಿದ್ದು ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ನೀಡಿದ್ದ ಗಡುವು ಅಂತ್ಯ, ಖಾನ್ ಏನಂತಾರೆ?ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ನೀಡಿದ್ದ ಗಡುವು ಅಂತ್ಯ, ಖಾನ್ ಏನಂತಾರೆ?

2018ರ ಸಾರ್ವತ್ರಿಕ ಚುನಾವಣೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ಇಮ್ರಾನ್ ಖಾನ್ ಅವರು ರಾಜೀನಾಮೆ ಸಲ್ಲಿಸದೆ ಸರ್ಕಾರದ ಮಧ್ಯವರ್ತಿಗಳು ಮಾತುಕತೆಗೆ ಬರುವುದು ಬೇಡ ಎಂದರು.

ಇಸ್ಲಾಮಾಬಾದ್‌ನಲ್ಲಿ ಆಜಾದಿ ಮಾರ್ಚ್ ಮುನ್ನಡೆಸುತ್ತಿರುವ ಜೆಯುಐ-ಎಫ್ ನಾಯಕ, ಮೌಲಾನಾ ಫಜ್ಲೂರ್ ರಹಮಾನ್ , ಇಮ್ರಾನ್ ಖಾನ್ ಸರ್ಕಾರವನ್ನು ಉಚ್ಛಾಟಿಸುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ರಾಜೀನಾಮೆಗೆ 48 ಗಂಟೆಗಳ ಗಡುವು

ಇಮ್ರಾನ್ ಖಾನ್ ರಾಜೀನಾಮೆಗೆ 48 ಗಂಟೆಗಳ ಗಡುವು

ಮೌಲಾನಾ ಫಜ್ಲೂರ್ ರೆಹಮಾನ್ ನೇತೃತ್ವದ ವಿರೋಧ ಪಕ್ಷದ ನಾಯಕರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದು 48 ಗಂಟೆಗಳ ಸಮಯಾವಕಾಶವನ್ನು ನೀಡಿದ್ದಾರೆ.

ನೀವು ಡೆಡ್‌ ಎಂಡ್‌ನಲ್ಲಿ ನಿಂತಿದ್ದೀರ

ನೀವು ಡೆಡ್‌ ಎಂಡ್‌ನಲ್ಲಿ ನಿಂತಿದ್ದೀರ

ಇಮ್ರಾನ್ ಖಾನ್ ನೀವು ಡೆಡ್ ಎಂಡ್‌ನಲ್ಲಿ ನಿಂತಿದ್ದೀರ, ಹುದ್ದೆಯಲ್ಲಿ ಮುಂದುವರೆಯುತ್ತೀರೋ ಅಥವಾ ಹುದ್ದೆ ಬಿಟ್ಟು ಜನರಿಗೆ ನೀಡಬೇಕಾದ ಸ್ವಾತಂತ್ರ್ಯವನ್ನು ನೀಡುತ್ತೀರೋ ನೀವೇ ತೀರ್ಮಾನ ಮಾಡಿ ಎಂದು ಎಚ್ಚರಿಕೆ ನಿಡಲಾಗಿದೆ. ಆಜಾದಿ ಮಾರ್ಚ್ ಕಳೆದ ಎರಡು ದಿನಗಳಿಂದ ಬೇರೆಯದ್ದೇ ದಾರಿಯತ್ತ ಸಾಗಿದೆ.

ಆಜಾದಿ ಮಾರ್ಚ್‌ಗೆ ಹೆದರಿ ರಾಜೀನಾಮೆ ನೀಡುವಂಥ ಹೇಡಿಯಲ್ಲ: ಇಮ್ರಾನ್ ಖಾನ್ಆಜಾದಿ ಮಾರ್ಚ್‌ಗೆ ಹೆದರಿ ರಾಜೀನಾಮೆ ನೀಡುವಂಥ ಹೇಡಿಯಲ್ಲ: ಇಮ್ರಾನ್ ಖಾನ್

ರೆಹಮಾನ್ ಅವರಿಂದ ಸರ್ವಪಕ್ಷಗಳ ಸಭೆ

ರೆಹಮಾನ್ ಅವರಿಂದ ಸರ್ವಪಕ್ಷಗಳ ಸಭೆ

ವಿರೋಧ ಪಕ್ಷಗಳ ಮುಖಂಡರೊಂದಿಗೆ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲು ಜಿಯುಐ-ಎಫ್ ಸರ್ವಪಕ್ಷ ಸಭೆ ಕರೆದಿದೆ. ರಹಮಾನ್ ಅವರ ಈ ಪ್ರತಿಭಟನೆಗೆ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ , ಪಾಕಿಸ್ತಾನ ಪೀಪಲ್ಸ್ ಪಾರ್ಟಿ , ಕೌಮಿ ವತನ್ ಪಾರ್ಟಿ , ನ್ಯಾಷನಲ್ ಪಾರ್ಟಿ ಬೆಂಬಲ ನೀಡಿವೆ. ಆದರೆ ಪಿಪಿಪಿ ಮುಖ್ಯಸ್ಥ ಬಿಲಾವಾಲ್ ಬುಟ್ಟೋ ಜರ್ದಾರಿ, ಮತ್ತು ಪಿಎಂಎಲ್ -ಎನ್ ಮುಖ್ಯಸ್ಥ ಶಹಬಾಸ್ ಷರೀಫ್ ಅವರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಜಾದಿ ಮಾರ್ಚ್ ಹೆಚ್ಚಿನ ಭದ್ರತೆ

ಆಜಾದಿ ಮಾರ್ಚ್ ಹೆಚ್ಚಿನ ಭದ್ರತೆ

ಪ್ರಧಾನಮಂತ್ರಿ ರಾಜೀನಾಮೆ ಹೊರತುಪಡಿಸಿ , ಇಮ್ರಾನ್ ಖಾನ್ ಸರ್ಕಾರವು ವಿರೋಧ ಪಕ್ಷಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಹಾಗೆ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಮುಳ್ಳುತಂತಿಗಳನ್ನು ಹಾಕುವ ಮೂಲಕ ಮುಖ್ಯರಸ್ತೆಗಳ ಮೂಲಕ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಪ್ರವೇಶ ಕೇಂದ್ರಗಳನ್ನು ನಿರ್ಬಂಧಿಸುವ ಮೂಲಕ ಡೇಂಜರ್ ಜೋನ್‌ನಲ್ಲಿ ಪ್ರಮುಖ ಕಟ್ಟಡಗಳು ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಭದ್ರಪಡಿಸಲಾಗಿದೆ.

English summary
Pakistan's opposition leaders, led by firebrand cleric-cum-politician Maulana Fazlur Rehman, direction after two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X