ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಸ್ವದೇಶಕ್ಕೆ ಮರಳಿದ 444 ಮಂದಿ ಆಸ್ಟ್ರೇಲಿಯಾ ಪ್ರಜೆಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 13: ಭಾರತದಲ್ಲಿದ್ದ 444 ಮಂದಿ ಆಸ್ಟ್ರೇಲಿಯಾ ಪ್ರಜೆಗಳನ್ನು ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಮೆಲ್‌ಬಾರ್ನ್‌ಗೆ ಕಳುಹಿಸಲಾಗಿದೆ.

ಆದರೆ ಅಮೆರಿಕದಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಅಮೆರಿಕದ ಪ್ರಜೆಗಳು ಅಮೆರಿಕಕ್ಕೆ ತೆರಳಲು ಹಿಂದೇಟು ಹಾಕಿದ್ದು, ಇಲ್ಲಿಯೇ ಉಳಿದುಕೊಳ್ಳುತ್ತೇವೆ ಎಂದಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ಅಮೆರಿಕದ ಅಧಿಕಾರಿಗಳು ಭಾರತದಲ್ಲಿರುವ ತಮ್ಮ ಪ್ರಜೆಗಳಿಗೆ ನೀವು ಅಲ್ಲಿಯೇ ಇರಿ, ಇಲ್ಲಿಯ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ತಿಳಿಸಿದ್ದರು.

444 Australian Citizens Fly To Their Home Land

ಅಮೆರಿಕ ವಿಶೇಷ ವಿಮಾನದ ಮೂಲಕ ವಿವಿಧೆಡೆ ಇರುವ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಆದರೆ ಸಾಕಷ್ಟು ಮಂದಿ ಅಮೆರಿಕಕ್ಕೆ ತೆರಳಲು ಒಪ್ಪುತ್ತಿಲ್ಲ. ಸುಮಾರು 24 ಸಾವಿರ ಅಮೆರಿಕ ಪ್ರಜೆಗಳು ಭಾರತದಲ್ಲಿದ್ದಾರೆ. ಸುಮಾರು 800 ಮಂದಿ ಪತ್ತೆ ಹಚ್ಚಿ ಅವರಿಗೆ ಕರೆ ಮಾಡಿದರೆ ಕೇವಲ 10 ಮಂದಿಯಿಂದ ಮಾತ್ರ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಈ ವಾರ ಯುಕೆಯು ಅಮೃತಸರ, ನವದೆಹಲಿ, ಮುಂಬೈ, ಗೋವಾ, ಚೆನ್ನೈ, ಹೈದರಾಬಾದ್, ಕೊಚ್ಚಿ, ಬೆಂಗಳೂರು, ಅಹಮದಾಬಾದ್, ಕೊಲ್ಕತ್ತದಿಂದ 12 ವಿಶೇಷ ವಿಮಾನಗಳ ಮೂಲಕ ತನ್ನ ಪ್ರಜೆಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ.

35 ಸಾವಿರಕ್ಕೂ ಹೆಚ್ಚು ಬ್ರಿಟನ್ನಿನ ಪ್ರಜೆಗಳು ಭಾರತದಲ್ಲಿದ್ದಾರೆ. ಅದರಲ್ಲಿ 20 ಸಾವಿರ ಮಂದಿಯನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ.

English summary
As Australia repatriated 444 of its nationals on a special flight from New Delhi to Melbourne, many others, particularly from the US, are opting to remain here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X