ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44 ಬಿಲಿಯನ್ ಒಪ್ಪಂದ: ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ ಟ್ವಿಟ್ಟರ್

|
Google Oneindia Kannada News

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಟ್ಟರ್ ಅನ್ನು ಖರೀದಿಸು $44 ಬಿಲಿಯನ್ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಟ್ವಿಟರ್ ಮಂಗಳವಾರ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ. ನ್ಯಾಯಾಲಯದ ಫೈಲಿಂಗ್ ಪ್ರಕಾರ, ಟ್ವಿಟರ್ ಒಪ್ಪಂದವನ್ನು ಪೂರ್ಣಗೊಳಿಸಲು ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್‌ಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೇಳಿದೆ ಎಂದು ತಿಳಿದು ಬಂದಿದೆ.

ಲಿಯನೇರ್ ಎಲಾನ್ ಮಸ್ಕ್ ಶುಕ್ರವಾರ (ಜುಲೈ 8) ಟ್ವಿಟರ್ ಕಂಪನಿಯ 44 ಬಿಲಿಯನ್ ಖರೀದಿ ಒಪ್ಪಂದ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದು, ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಟೆಸ್ಲಾ ಸಿಇಒ ಎಲೋನ್‌ ಮಸ್ಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸಿದೆ.

ಪ್ಲಾಟ್‌ಫಾರ್ಮ್‌ನಲ್ಲಿನ ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಲು ಟ್ವಿಟರ್ ವಿಫಲವಾದ ಕಾರಣ ನೀಡಿ ಟ್ವಿಟ್ಟರ ಖರೀದಿ ಒಪ್ಪಂದವನ್ನು ಕೊನೆಗೊಳಿಸುತ್ತಿರುವುದಾಗಿ ಮಸ್ಕ್ ಹೇಳಿದ್ದಾರೆ. ಒಂದು ಪಕ್ಷ ಒಪ್ಪಂದ ಮುರಿದು ಬಿದ್ದರೆ ಅವರು $1 ಬಿಲಿಯನ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಟ್ವಿಟರ್ ಮತ್ತು ಮಸ್ಕ್ ಇಬ್ಬರೂ ಏಪ್ರಿಲ್‌ನಲ್ಲಿ ನಡೆದ ಒಡಂಬಡಿಕೆ ವೇಳೆ ಒಪ್ಪಿಕೊಂಡಿದ್ದರು. SpaceX CEO ಹಿಂದೆ ಸರಿಯುವುದರೊಂದಿಗೆ, ಟ್ವಿಟರ್ ಬ್ರೇಕ್-ಅಪ್ ಶುಲ್ಕ ಪಡೆಯಬಹುದಿತ್ತು. ಆದರೆ ಬದಲಿಗೆ ಖರೀದಿ ಪೂರ್ಣಗೊಳಿಸಲು ಕಾನೂನು ಯುದ್ಧಕ್ಕೆ ಸಿದ್ಧವಾಗಿದೆ.

ಟ್ವಿಟ್ಟರ ವಿರುದ್ಧ ಮಸ್ಕ್‌ ಆರೋಪ

ಟ್ವಿಟ್ಟರ ವಿರುದ್ಧ ಮಸ್ಕ್‌ ಆರೋಪ

ಸ್ಪ್ಯಾಮ್ ಖಾತೆಗಳ ಸಾಕಷ್ಟು ಕುರಿತ ಮಾಹಿತಿ(ಡೇಟಾ)ಯನ್ನು ಟ್ವಿಟರ್‌ ನೀಡಲು ವಿಫಲವಾಗಿದ್ದು, ಹೀಗಾಗಿ 44 ಶತಕೋಟಿ ಡಾಲರ್‌ಗೆ (₹3.49 ಲಕ್ಷ ಕೋಟಿ) ಖರೀದಿಸುವ ಒಪ್ಪಂದ ಮುರಿದುಬಿದ್ದಿದೆ ಎಂದು ಮಸ್ಕ್ ಹೇಳಿದ್ದಾರೆ. ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಟ್ವಿಟ್ಟರ್‌ ನಿರಾಕರಿಸಿದೆ ಅಥವಾ ಮಾಹಿತಿಯನ್ನು ಒದಗಿಸಲಿಲ್ಲ. ಕೆಲವೊಮ್ಮೆ ಟ್ವಿಟ್ಟರ್, ತನ್ನ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥನೀಯವೆಂದು ತೋರುವ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಿದೆ ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದ ಮುರಿದುಬಿದ್ದಿದೆ" ಎಂದು ಮಸ್ಕ್ ಹೇಳಿದ್ದಾರೆ.

ಮುರಿದುಬಿದ್ದ ಮೆಗಾ ಡೀಲ್

ಮುರಿದುಬಿದ್ದ ಮೆಗಾ ಡೀಲ್

ಮಸ್ಕ್‌ ಟ್ವಿಟರ್‌ ಖರೀದಿಯನ್ನು ರದ್ದು ಮಾಡಿದ ಬೆನ್ನಲ್ಲಿಯೇ, ಎಲಾನ್‌ ಮಸ್ಕ್‌ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್‌ ಆಡಳಿತ ಮಂಡಳಿ ತಿಳಿಸಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್‌ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ನಡುವೆ ಮುಂದೆ ನಡೆಯಬಹುದಾದ ಬಹುದೊಡ್ಡ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ. ಮೆಗಾ ಡೀಲ್ ಅನ್ನು ಮುರಿಯವುದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳ ನಡುವೆ ಮುಂದೆ ಬೃಹತ್ ಕಾನೂನು ಸಮರವನ್ನು ಸೂಚಿಸುತ್ತದೆ.

ಏಪ್ರಿಲ್‌ನಲ್ಲಿ ಮಸ್ಕ್ ಒಪ್ಪಂದಕ್ಕೆ ಸಹಿ

ಏಪ್ರಿಲ್‌ನಲ್ಲಿ ಮಸ್ಕ್ ಒಪ್ಪಂದಕ್ಕೆ ಸಹಿ

ಪ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಖಾತೆಗಳು ಬಾಟ್‌ಗಳು ಅಥವಾ ಸ್ಪ್ಯಾಮ್‌ಗಳಾಗಿವೆ ಎಂಬ ಟ್ವಿಟರ್‌ನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಮ್ಮ ತಂಡಕ್ಕೆ ಅವಕಾಶ ಮಾಡಿಕೊಡಲು ಮಸ್ಕ್ ಒಪ್ಪಂದವನ್ನು ಮೇ ತಿಂಗಳಲ್ಲಿ ನಿಲ್ಲಿಸಿದ್ದರು. ಅದಾಗ್ಯೂ ಏಪ್ರಿಲ್‌ನಲ್ಲಿ ಮಸ್ಕ್ ಪ್ರತಿ ಷೇರಿಗೆ US$54.20 ರಂತೆ ಸರಿಸುಮಾರು US$44 ಶತಕೋಟಿಗೆ ಟ್ವಿಟರ್‌ನೊಂದಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು.

ವಿನಂತಿಸಿದ ಡೇಟಾವನ್ನು ಒದಗಿಸದ ಟ್ವಿಟ್ಟರ್

ವಿನಂತಿಸಿದ ಡೇಟಾವನ್ನು ಒದಗಿಸದ ಟ್ವಿಟ್ಟರ್

ಜೂನ್‌ನಲ್ಲಿ, ಮಸ್ಕ್ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವಿಲೀನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಬಹಿರಂಗವಾಗಿ ಆರೋಪಿಸಿದರು ಮತ್ತು ಸ್ಪ್ಯಾಮ್ ಮತ್ತು ನಕಲಿ ಖಾತೆಗಳಲ್ಲಿ ಅವರು ವಿನಂತಿಸಿದ ಡೇಟಾವನ್ನು ಒದಗಿಸದಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ವಾಧೀನವನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಒಪ್ಪಂದದ ಮೂಲಕ ವಿವರಿಸಿದಂತೆ ಟ್ವಿಟರ್ "ಅವರ ಮಾಹಿತಿ ಹಕ್ಕುಗಳನ್ನು ತಡೆಯುತ್ತಿದೆ" ಎಂದು ಮಸ್ಕ್ ಆರೋಪಿಸಿದ್ದಾರೆ. ಆದರೆ ಈ ಕಾನೂನು ಸಮರದಲ್ಲಿ ಮಸ್ಕ್ ಒಪ್ಪಂದದ ಮಾತುಕತೆಯ ವಿಧಾನದಿಂದಾಗಿ ಸಾರ್ವಜನಿಕ ಟ್ವಿಟರ್ ಮೇಲುಗೈ ಸಾಧಿಸುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

Recommended Video

Petromax ಚಿತ್ರ ನೋಡೋ ಡೆಲಿವರಿ ಬಾಯ್ ಗಳಿಗೆ ನೀನಾಸಂ ಸತೀಶ್ ಕಡೆಯಿಂದ ಫ್ರೀ ಟಿಕೆಟ್ | *Entertainment | OneIndia

English summary
Twitter sued Elon Musk on Tuesday for violating the $44 billion deal to buy the social media platform. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X