ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ನಲ್ಲಿರುವ ಅಮೆರಿಕಾ ಸೇನಾ ನೆಲೆ ಮೇಲೆ ರಾಕೆಟ್ ದಾಳಿ

|
Google Oneindia Kannada News

ಇರಾಕ್, ಜನವರಿ.12: ಇರಾಕ್ ನ ಉತ್ತರ ಭಾಗದಲ್ಲಿರುವ ಅಮೆರಿಕಾದ ಸೇನಾ ವಾಯುನೆಲೆ ಮೇಲೆ ನಾಲ್ಕು ರಾಕೆಟ್ ಗಳ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ಇರಾಕ್ ನ ನಾಲ್ವರು ವಾಯುಪಡೆ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಾಗ್ದಾದ್ ನ ಅಲ್-ಬಲಾದ್ ಎಂಬಲ್ಲಿ ನಿಯೋಜನೆಗೊಂಡಿದ್ದ ಅಮೆರಿಕಾ ವಾಯುಪಡೆಯು ಈಗಾಗಲೇ ಅಲ್ಲಿಂದ ಕಾಲ್ಕಿತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಬಾಗ್ದಾದ್ ನಿಂದ 50 ಕಿಲೋ ಮೀಟರ್ ದೂರದಲ್ಲಿ ಮೋಟಾರ್ ಬಾಂಬ್ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಅಮೆರಿಕಾ-ಇರಾನ್ ನಡುವೆ ಉರಿಯುವ ಬೆಂಕಿಗೆ ಕಮಾಂಡರ್ ತುಪ್ಪ?
ಮೂರು ದಿನಗಳ ಹಿಂದೆಯಷ್ಟೇ ಇರಾಕ್ ನಿಂದ ಅಮೆರಿಕಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲು ನಿಯೋಗವನ್ನು ಕಳುಹಿಸುವ ಬಗ್ಗೆ ಹೇಳಿಕೊಂಡಿತ್ತು. ಈ ಸಂಬಂಧ ಜನವರಿ,.09ರ ಗುರುವಾರ ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ ಇರಾಕ್ ನ ಪ್ರಧಾನ ಉಸ್ತುವಾರಿ ಅದೆಲ್ ಅಬ್ದುಲ್ ಮೆಹಾಂತ್ ಜೊತೆ ಮಾತನಾಡಿದ್ದರು.

4 Rocket Attack On US Troops In Iraq Airbase

ಅಮೆರಿಕಾ-ಇರಾನ್ ನಡುವಿನ ಗುದ್ದಾಟ:
ಇರಾನ್ ಸೇನಾಧಿಕಾರಿ ಖಾಸಿಂ ಸೊಲೇಮಾನ್ ಮೇಲೆ ಅಮೆರಿಕಾ ದಾಳಿ ನಡೆಸಿ ಹತ್ಯೆ ನಡೆಸಿದ್ದೇ ನಡೆಸಿದ್ದು. ಅಂದಿನಿಂದ ಇರಾನ್ ಹಾಗೂ ಅಮೆರಿಕಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕಳೆದ ಜನವರಿ.08ರ ಬುಧವಾರವಷ್ಟೇ ಇದೇ ಇರಾಕ್ ನಲ್ಲಿರುವ ಅಮೆರಿಕಾದ ಸೇನಾ ವಾಯುನೆಲೆ ಮೇಲೆ ಇರಾನ್ ದಾಳಿ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ವತಃ ಇರಾನ್ ಜನರಲ್ ಕಮಾಂಡರ್ ಹಜಿಜದೆಹಾ ಹೇಳಿಕೆ ನೀಡಿದ್ದರು.
ಜನವರಿ.08ರಂದು ನಡೆಸಿದ ದಾಳಿ ಕೇವಲ ಎಚ್ಚರಿಕೆ ಸಂದೇಶವೇ ಹೊರತು ಯಾರನ್ನೂ ಹತ್ಯೆ ಮಾಡುವ ಉದ್ದೇಶ ಇರಲಿಲ್ಲ. ಅಮೆರಿಕಾ ಪ್ರತಿದಾಳಿ ನಡೆಸಿದರೆ ಇರಾನ್ ಕೂಡಾ ಎಲ್ಲದಕ್ಕೂ ಸಜ್ಜಾಗಿದೆ ಎನ್ನುವ ಧಾಟಿಯಲ್ಲಿ ಹೇಳಿಕೆ ನೀಡಿದ್ದರು ಎಂದು ಪಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು.

English summary
4 Rocket Attack On US Troops In Iraq Airbase: Sources Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X