ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ; ಮೋದಿ ಭೇಟಿ ವಿರುದ್ಧ ಪ್ರತಿಭಟನೆಯಲ್ಲಿ 4 ಮಂದಿ ಸಾವು

|
Google Oneindia Kannada News

ಕಾಕ್ಸ್‌ ಬಜಾರ್, ಮಾರ್ಚ್ 26: ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶ ಭೇಟಿ ವಿರೋಧಿಸಿ ಚಿತ್ತಗಾಂಗ್ ‌ನಲ್ಲಿ ಪ್ರತಿಭಟನೆ ನಡೆದಿದ್ದು, ಈ ಸಂದರ್ಭ ಪೊಲೀಸರ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಪ್ರತಿಭಟನೆ ನಡೆಸುತ್ತಿದ್ದವರು ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಎಬ್ಬಿಸುತ್ತಿದ್ದರು. ಅವರನ್ನು ಚದುರಿಸಲು ನಾವು ಟಿಯರ್ ಗ್ಯಾಸ್ ಹಾಗೂ ರಬ್ಬರ್ ಬುಲೆಟ್ ಹಾರಿಸಿದೆವು ಎಂದು ಪೊಲೀಸ್ ಅಧಿಕಾರಿ ರಫಿಕ್ ಇಸ್ಲಾಮ್ ಹೇಳಿದ್ದಾರೆ.

ನನ್ನ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನೆ ಪರ ಹೋರಾಟವೂ ಒಂದು: ನರೇಂದ್ರ ಮೋದಿನನ್ನ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನೆ ಪರ ಹೋರಾಟವೂ ಒಂದು: ನರೇಂದ್ರ ಮೋದಿ

ರಾಜಧಾನಿ ಢಾಕಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಪತ್ರಕರ್ತರನ್ನೊಳಗೊಂಡಂತೆ ಸುಮಾರು ಹನ್ನೆರಡು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

4 Killed In Bangladesh During Protest Against Modi Visit

ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಭಾರತದೊಂದಿಗಿನ 50 ವರ್ಷದ ರಾಜತಾಂತ್ರಿಕ ಸಂಬಂಧದ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದರು.

English summary
Four people were killed in Bangladesh's Chittagong on Friday after police fired rubber bullets at protesters during visit of PM Narendra Modi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X