ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಷನ್ ಗಗನಯಾನ: ರಷ್ಯಾದಲ್ಲಿ ತರಬೇತಿ ಪೂರ್ಣಗೊಳಿಸಿದ ಭಾರತದ ಗಗನಯಾತ್ರಿಗಳು

|
Google Oneindia Kannada News

ಮಾಸ್ಕೋ, ಮಾರ್ಚ್ 24: ಮಿಷನ್ ಗಗನಯಾನಕ್ಕಾಗಿ ರಷ್ಯಾದಲ್ಲಿ ತರಬೇತಿ ಪಡೆಯುತ್ತಿದ್ದ ನಾಲ್ವರು ಗಗನಯಾತ್ರಿಗಳು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಗಗನ್ ಯಾನ್ ಯೋಜನೆಗಾಗಿ ಆಯ್ಕೆಗೊಂಡಿದ್ದ ಭಾರತದ ನಾಲ್ವರು ಅಧಿಕಾರಿಗಳಿಗೆ ಮಾಸ್ಕೋ ಬಳಿ ಇರುವ ಜ್ವಿಯೊಜ್ಡ್ನಿ ಗೊರೊಡೋಕ್ ನಗರದ ಬಳಿ ಒಂದು ವರ್ಷಗಳ ಕಾಲ ತರಬೇತಿ ನೀಡಲಾಗಿದೆ.

ಇದೇ ಡಿಸೆಂಬರ್‌ಗೆ ಭಾರತದ ಪ್ರಥಮ ಮಾನವರಹಿತ ಗಗನಯಾನಇದೇ ಡಿಸೆಂಬರ್‌ಗೆ ಭಾರತದ ಪ್ರಥಮ ಮಾನವರಹಿತ ಗಗನಯಾನ

ಮಾನವ ಸಹಿತ ಬಾಹ್ಯಾಕಾಶ ಯಾನ ಮಿಷನ್ ಗಗನಯಾನಕ್ಕಾಗಿ ನಾಲ್ವರು ಗಗನ ಯಾತ್ರಿಗಳು ರಷ್ಯಾದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಐಎಎಫ್ ನ ನಾಲ್ವರು ಪೈಲಟ್ ಗಳನ್ನು ಇದಕ್ಕಾಗಿ ತರಬೇತಿಗೆ ಕಳಿಸಲಾಗಿತ್ತು. 2020 ರ ಫೆ.10 ರಂದೇ ಪ್ರಾರಂಭವಾಗಿತ್ತಾದರೂ ಕೋವಿಡ್-19 ಕಾರಣದಿಂದಾಗಿ ತಾತ್ಕಾಲಿಕವಾಗಿ ಅಡ್ಡಿ ಉಂಟಾಗಿತ್ತು.

4 Indian Astronaut Candidates For Gaganyaan Mission Complete Training In Russia

ಈ ಬಗ್ಗೆ ರಷ್ಯಾದ ಸರ್ಕಾರಿ ಬಾಹ್ಯಾಕಾಶ ಸಹಕಾರ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ತರಬೇತಿ ಮುಕ್ತಾಯಗೊಳಿಸಿರುವ ಭಾರತೀಯ ಗಗನೌಟ್ಸ್ ನ್ನು ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರ ಭೇಟಿ ಮಾಡಿದೆ, ಭವಿಷ್ಯದ ದ್ವಿಪಕ್ಷೀಯ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಭಾರತೀಯ ರಾಯಭಾರಿಯೊಂದಿಗೆ ಚರ್ಚಿಸಿದ್ದೇವೆ ಎಂದು ಟೆಲಿಗ್ರಾಮ್ ನಲ್ಲಿ ಹೇಳಿದ್ದಾರೆ.

ಮಾನವ ಸಹಿತ ಬಾಹ್ಯಾಕಾಶ ಯಾನ ಮಿಷನ್ ಗಗನ್ ಯಾನ್‌ ಗಾಗಿ 2019 ರ ಜೂನ್ ತಿಂಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

English summary
Four Indian officers, who were selected to become astronauts to crew Gaganyaan into orbit, have completed their one-year training course in Russia's Zvyozdny gorodok city near Moscow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X