ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ನಲ್ಲಿ ಆಗಂತುಕನಿಂದ ಚಾಕು ಇರಿತ: ನಾಲ್ವರಿಗೆ ಗಂಭೀರ ಗಾಯ

|
Google Oneindia Kannada News

ಪ್ಯಾರಿಸ್, ಸೆಪ್ಟೆಂಬರ್ 25: ಆಗಂತುಕನೊಬ್ಬ ಚಾಕುವಿನಿಂದ ಜನರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ದಾಳಿಕೋರನನ್ನು ಎಲ್ಲಿಯವನೆಂದು ಗುರುತಿಸಲು ಸಾಧ್ಯವಾಗಿಲ್ಲ, ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳ ಮೇಲೆ ಈ ದಾಳಿ ನಡೆದಿದ್ದು, ಇದು ಭಯೋತ್ಪಾದನಾ ಕೃತ್ಯ ಎಂದು ಈ ಹೊತ್ತಿನಲ್ಲಿ ಹೇಳಲಾಗದು ಎಂದು ಪೊಲೀಸರು ಹೇಳಿದ್ದಾರೆ.

ದಾಳಿಗೊಳಗಾದ ನಾಲ್ವರಲ್ಲಿ ಇಬ್ಬರಸ್ಥಿತಿ ಗಂಭೀರವಾಗಿದೆ. ಇಬ್ಬರ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

4 Hurt In Paris Knife Attack Near Charlie Hebdos Former Offices

ಫ್ರೆಂಚ್‌ನ ಪ್ರಮುಖ ಮ್ಯಾಗಜಿನ್‌ಗಳಲ್ಲಿ ಒಂದಾದ ಚಾರ್ಲಿ ಹೆಬ್ಡೋ ಅವರ ಹಳೆಯ ಕಚೇರಿ ಬಳಿ ಈ ಘಟನೆ ಸಂಭವಿಸಿದೆ. 2015ರಲ್ಲಿ ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದರು.

ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದರು. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿತ್ತು.

Recommended Video

North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

ಚಾರ್ಲಿ ಹೆಬ್ಡೋ ಪತ್ರಿಕೆ ಇಂದು ನಿನ್ನೆಯದಲ್ಲ, 1969ರಲ್ಲೇ ಶುರುವಾದ ಪತ್ರಿಕೆಗೆ ಮೊದಲಿದ್ದ ಹೆಸರು ಹರಾ - ಕಿರಿ. ಮೊದಲಿನಿಂದಲೂ ವಿಡಂಬನಾತ್ಮಕವಾಗಿದ್ದ ಪತ್ರಿಕೆ ಧಾರ್ಮಿಕ ಮೂಲಭೂತವಾದಿಗಳಿಗೆ ಹೋಲಿಸಿದರೆ ವಿಡಂಬನೆಯಲ್ಲಿ ಮೂಲಭೂತವಾದಿತನದಿಂದ ಕೆಲಸ ಮಾಡುತ್ತಿತ್ತೆಂದು ಅದರ ವಿರುದ್ಧ ಇದ್ದ ಆರೋಪ.

English summary
Four people were injured, two seriously, in a knife attack in Paris Friday near the former offices of French satirical magazine Charlie Hebdo, a source close to the investigation told AFP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X