ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ವ್ಯಕ್ತಿಯ ಆಕ್ಷೇಪಾರ್ಹ ಪೋಸ್ಟ್; ಪ್ರತಿಭಟನೆ ವೇಳೆ ನಾಲ್ವರು ಸಾವು

|
Google Oneindia Kannada News

ಢಾಕಾ (ಬಾಂಗ್ಲಾದೇಶ್), ಅಕ್ಟೋಬರ್ 22: ಬಾಂಗ್ಲಾದೇಶ್ ಇತಿಹಾಸದಲ್ಲೇ ಭೀಕರ ಕೋಮುಗಲಭೆಗಳಲ್ಲಿ ಒಂದು ಎನಿಸಿಕೊಂಡಿರುವ ಘಟನೆಯಲ್ಲಿ ಭಾನುವಾರದಂದು ಪೊಲೀಸರ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟಿದ್ದರು. ಈ ಘಟನೆ ವಿರುದ್ಧ ಬಾಂಗ್ಲಾದೇಶ್ ನಲ್ಲಿ ಸೋಮವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ.

ಭೋಲಾ ದ್ವೀಪದಲ್ಲಿ ಹಿಂದೂ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪ್ರವಾದಿ ಮಹ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಆತನಿಗೆ ಮರಣದಂಡನೆ ವಿಧಿಸಬೇಕು ಎಂದು ಇಪ್ಪತ್ತು ಸಾವಿರದಷ್ಟು ಇದ್ದ ಮುಸ್ಲಿಮರು ಆಗ್ರಹಿಸಿದ್ದರು. ಇನ್ನು ಪೊಲೀಸ್ ಅಧಿಕಾರಿಗಳಿಗೆ ಕಲ್ಲು ತೂರಿದ್ದರು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ನಾಲ್ವರು ಮೃತಪಟ್ಟು, ಐವತ್ತು ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಇರುವ ಕನಿಷ್ಠ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ.

ಕಾಶ್ಮೀರ ವಿಚಾರ: ಬಾಂಗ್ಲಾ ಸೇರಿ ಭಾರತದ ಬೆಂಬಲಕ್ಕೆ ನಿಂತ ದೇಶಗಳಿವು....ಕಾಶ್ಮೀರ ವಿಚಾರ: ಬಾಂಗ್ಲಾ ಸೇರಿ ಭಾರತದ ಬೆಂಬಲಕ್ಕೆ ನಿಂತ ದೇಶಗಳಿವು....

ಹದಿನೇಳು ಕೋಟಿಯಷ್ಟು ಜನಸಂಖ್ಯೆ ಇರುವ ಬಾಂಗ್ಲಾದೇಶ್ ನಲ್ಲಿ ಶೇಕಡಾ ತೊಂಬತ್ತು ಪರ್ಸೆಂಟ್ ಮುಸ್ಲಿಮರಿದ್ದಾರೆ. ಆನ್ ಲೈನ್ ನಲ್ಲಿ ಪೋಸ್ಟ್ ಆಗುವ ಧರ್ಮನಿಂದನೆಯ ಒಕ್ಕಣೆಗಳಿಂದ ಗುಂಪುಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಬಾಂಗ್ಲಾದೇಶ್ ಪಡೆಗೆ ಇದು ದೊಡ್ಡ ತಲೆನೋವಾಗಿದೆ.

4 Dead In Firing At Protest In Bangladesh; Here Is The Reason why?

ಪ್ರತಿಭಟನಾಕಾರರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹ ಮಾಡಲಾಗಿದೆ. "ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರು ಕಾನೂನುಬಾಹಿರವಾಗಿ, ಅಸಾಂವಿಧಾನಿಕವಾಗಿ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಇಪ್ಪತ್ತೆರಡು ವರ್ಷದ ವಿದ್ಯಾರ್ಥಿ ಮಹಮುದುಲ್ ಹಸನ್ ಮಾಧ್ಯಮವೊಂದರ ಜತೆ ಅಭಿಪ್ರಾಯ ಹೇಳಿಕೊಂಡಿದ್ದಾನೆ.

ಹಿಂದೂ ಯುವಕನ ಫೇಸ್ ಬುಕ್ ಖಾತೆಯಲ್ಲಿ ಮೂಲ ಸಂದೇಶ ಇದೆ ಮತ್ತು ಆತ ಭೋಲಾಗೆ ಸೇರಿದವನು. ಆತನ ವಿರುದ್ಧ ಕೋಮು ಆತಂಕಕ್ಕೆ ಕಾರಣನಾದ ಆರೋಪ ಮಾಡಲಾಗಿದೆ. ಆದರೆ ಬಾಂಗ್ಲಾದೇಶ್ ನ ಪ್ರಧಾನಿ ಶೇಖ್ ಹಸೀನಾ ಅವರು ಬೇರೆಯದೇ ಮಾತನಾಡಿದ್ದಾರೆ.

Recommended Video

ICC World Cup 2019 : ಲಿಟನ್ ದಾಸ್ ವಿಕೆಟ್ ಪಡೆದು ಹಾರ್ದಿಕ್ ಪಾಂಡ್ಯ ಮಾಡಿದ್ದೇನು ಗೊತ್ತಾ..? | IND vs BAN

"ಹಿಂದೂ ಯುವಕನ ಫೇಸ್ ಬುಕ್ ಖಾತೆಯನ್ನು ಮುಸ್ಲಿಂ ವ್ಯಕ್ತಿ ಹ್ಯಾಕ್ ಮಾಡಿ, 'ಸುಳ್ಳು ಹಬ್ಬಿಸುತ್ತಿದ್ದಾನೆ'" ಎಂದು ಹೇಳಿದ್ದಾರೆ. ಭೋಲಾ ಪ್ರತಿಭಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಪ್ರತಿಭಟನಾನಿರತರ ಕಡೆಯಿಂದ ಗುಂಡು ಹಾರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ.

ಫೇಸ್ ಬುಕ್ ಪೋಸ್ಟ್ ವೊಂದು ಬಾಂಗ್ಲಾದೇಶ್ ನಲ್ಲಿ ಇಷ್ಟು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣ ಆಗಿದ್ದು ಇದೇ ಮೊದಲಲ್ಲ. ಮೂರು ವರ್ಷಗಳ ಹಿಂದೆ, ಫೇಸ್ ಬುಕ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರಗಳ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ, ಮುಸ್ಲಿಮರು ದೇಶದ ಪೂರ್ವ ಭಾಗ ನಗರದ ದೇವಾಲಯಗಳ ಮೇಲೆ ದಾಳಿ ನಡೆಸಿದ್ದರು.

ಅದಕ್ಕೂ ಮುನ್ನ, ಅಂದರೆ ಈಗ್ಗೆ ಏಳು ವರ್ಷದ ಹಿಂದೆ ಆನ್ ಲೈನ್ ಪೋಸ್ಟ್ ವೊಂದರ ಕಾರಣಕ್ಕೆ ಬೌದ್ಧರ ಶ್ರದ್ಧಾ ಕೇಂದ್ರ, ಮನೆಗಳು, ಮಳಿಗೆಗಳ ಮೇಲೆ ದಾಳಿ ನಡೆದಿತ್ತು.

English summary
Thousands of Muslims protested against police across Bangladesh on Monday, a day after at least four people died when officers fired on a crowd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X