ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಗಂಟೆಯಲ್ಲೇ 30 ಕೆಜಿ ಕಿತ್ತಳೆ ಹಣ್ಣು ತಿಂದ ಯುವಕರು!

|
Google Oneindia Kannada News

ಬೀಜಿಂಗ್, ಜನವರಿ.27: ಚೀನಾದಲ್ಲಿ ವಿಮಾನಯಾನ ಸಂಚಾರದ ವೇಳೆಯಲ್ಲಿ ಹೆಚ್ಚುವರಿ ಸರಕು ಶುಲ್ಕದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾಲ್ವರು ಪ್ರಯಾಣಿಕರು ಸೇರಿ ಅರ್ಧ ಗಂಟೆಯಲ್ಲೇ 30 ಕೆಜಿಗೂ ಹೆಚ್ಚು ಕಿತ್ತಳೆ ಹಣ್ಣನ್ನು ತಿಂದಿರುವ ಘಟನೆ ನೈಋತ್ಯ ಚೀನಾದ ಯುನ್ನಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಂತಾರಾಷ್ಟ್ರೀಯ ವಿಮಾನಯಾನ ವ್ಯವಸ್ಥೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸರಕನ್ನು ಸಾಗಿಸುವಂತಿಲ್ಲ ಎಂಬ ನಿಯಮವಿದೆ. ಇದರ ಬಗ್ಗೆ ತಿಳಿಯದೇ ವಾಂಗ್ ಮತ್ತು ಸಹಚರರು 30 ಕೆಜಿ ಕಿತ್ತಳೆಯನ್ನು ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಿದ್ದರು.

 ಬರ್ನಿ ಸ್ಯಾಂಡರ್ಸ್ ಮಿಮ್ಸ್‌: ಗೊಂಬೆಗಾಗಿ ಆನ್‌ಲೈನ್‌ನಲ್ಲಿ 40,000 ಡಾಲರ್‌ ಬಿಡ್ಡಿಂಗ್ ಬರ್ನಿ ಸ್ಯಾಂಡರ್ಸ್ ಮಿಮ್ಸ್‌: ಗೊಂಬೆಗಾಗಿ ಆನ್‌ಲೈನ್‌ನಲ್ಲಿ 40,000 ಡಾಲರ್‌ ಬಿಡ್ಡಿಂಗ್

30 ಕೆಜಿ ಕಿತ್ತಳೆ ಹಣ್ಣಿಗೆ ಹೆಚ್ಚುವರಿಯಾಗಿ 300 ಯುನಾನ್(3384 ರೂ.) ಶುಲ್ಕವನ್ನು ಪಾವತಿಸುವಂತೆ ವಿಮಾನ ನಿಲ್ದಾಣದ ಸಿಬ್ಬಂದಿ ಸೂಚಿಸಿದ್ದರು. ಆದರೆ ಹೆಚ್ಚುವರಿ ಶುಲ್ಕ ಪಾವತಿಸುವುದಕ್ಕಿಂತ ಹಣ್ಣನ್ನು ತಿನ್ನುವುದೇ ಮೇಲೆ ಎಂದು ತೀರ್ಮಾನಿಸಿದರು. ಅಲ್ಲಿಂದ ಮುಂದಿನ 20 ರಿಂದ 30 ನಿಮಿಷಗಳಲ್ಲಿ ವಾಂಗ್ ಮತ್ತು ಅವರೊಂದಿಗಿನ ಮೂವರು ಸ್ನೇಹಿತರು ಸೇರಿಕೊಂಡು ಏರ್ ಪೋರ್ಟ್ ನಲ್ಲಿಯೇ ಬರೋಬ್ಬರಿ 30 ಕೆಜಿ ಕಿತ್ತಳೆ ಹಣ್ಣನ್ನು ತಿಂದಿದ್ದಾರೆ.

4 Chinese Men Eat 30 Kg Oranges In Just Half An Hour At Airport

ಮುಂದೆಂದೂ ಕಿತ್ತಳೆ ಹಣ್ಣು ತಿನ್ನಲ್ಲ ಎಂದ ವಾಂಗ್:

ಕೇವಲ 30 ಕೆಜಿ ಕಿತ್ತಳೆ ಹಣ್ಣುಗಳನ್ನು ತಿಂದಿರುವ ವಾಂಗ್ ಅವರ ಬಾಯಿಯಲ್ಲಿ ಹುಣ್ಣುಗಳಾಗಿವೆ. ಇನ್ನು ಮುಂದೆಂದೂ ನಾನು ಈ ಕಿತ್ತಳೆ ಹಣ್ಣನ್ನು ತಿನ್ನುವುದಕ್ಕೆ ಬಯಸುವುದಿಲ್ಲ ಎಂದು ಸ್ವತಃ ವಾಂಗ್ ಹೇಳಿಕೊಂಡಿದ್ದಾರೆ. ಇನ್ನು, 30 ಕೆಜಿ ಕಿತ್ತಳೆ ಹಣ್ಣು ತಿಂದ ವಾಂಗ್ ಕುರಿತು ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಸಾಕಷ್ಟು ಜನರು ಅಚ್ಚರಿಯಿಂದ ಹುಬ್ಬೇರಿಸುವಂತೆ ಮಾಡಿದ್ದಾರೆ.

English summary
4 Chinese Men Eat 30 Kg Oranges In Just Half An Hour At Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X