ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Important News: ಕೊರೊನಾವೈರಸ್ ಲಸಿಕೆ ಶಕ್ತಿ ಎಷ್ಟು ದಿನ ಇರುತ್ತೆ?

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 16: ಕೊರೊನಾವೈರಸ್ ಸೋಂಕಿಗೆ ಎರಡು ಬಾರಿ ಲಸಿಕೆ ತೆಗೆದುಕೊಂಡರೆ ಸಾಕಾಗುವುದಿಲ್ಲ. ಒಂದು ವರ್ಷದೊಳಗೆ ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವ ಅಗತ್ಯವಿದೆ ಎಂದು ಫೈಜರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ.

ಕೊರೊನಾವೈರಸ್ ಸೋಂಕು ಹರಡುತ್ತಿರುವ ಸನ್ನಿವೇಶದ ಬಗ್ಗೆ ಸಿಎನ್ ಬಿಸಿಯ ಬರ್ತಾ ಕೂಂಬ್ಸ್ ನ CVS ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಎರಡು ಡೋಸ್ ಕೊರೊನಾವೈರಸ್ ಲಸಿಕೆ ಪಡೆದ ನಂತರ 6 ತಿಂಗಳಿಂದ 12 ತಿಂಗಳ ಅವಧಿಯೊಳಗೆ 3ನೇ ಡೋಸ್ ಲಸಿಕೆ ಹಾಕಿಸಿಕೊಂಡಾಗ ಮಾತ್ರ ಲಸಿಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಚ್ಚಿ ಬೀಳಿಸುವ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ಕಥೆ ಹೀಗ್ಯಾಕಾಯ್ತು? ಬೆಚ್ಚಿ ಬೀಳಿಸುವ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ಕಥೆ ಹೀಗ್ಯಾಕಾಯ್ತು?

ಪ್ರಸ್ತುತ ಕೊರೊನಾವೈರಸ್ ಸೋಂಕಿನ ದತ್ತಾಂಶ ಹಾಗೂ ಲಸಿಕೆ ಲಭ್ಯತೆ ಬಗ್ಗೆ ಗಮನ ಹರಿಸಬೇಕಿದೆ. ಹೆಚ್ಚುವರಿ ಲಸಿಕೆಯನ್ನು ಹೇಗೆ ಪೂರೈಸಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಫೈಜರ್ ಸಂಸ್ಥೆಯ ಸಿಇಓ ಅಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

"ಪ್ರತಿವರ್ಷ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳಿ"

ಜಗತ್ತಿನಾದ್ಯಂತ ಕೊರೊನಾವೈರಸ್ ಹರಡುತ್ತಿರುವ ಇಂಥ ಸನ್ನಿವೇಶದಲ್ಲಿ ಎರಡು ಡೋಸ್ ಲಸಿಕೆ ಸಾಕಾಗುವುದಿಲ್ಲ. ಎರಡನೇ ಡೋಸ್ ನಂತರದಲ್ಲಿ 6 ರಿಂದ 12 ತಿಂಗಳೊಳಗೆ 3ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಪ್ರತಿವರ್ಷ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವ ಅಗತ್ಯವಿದೆ. ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಸಾರ್ವಜನಿಕರು ಪರಿಣಾಮಕಾರಿ ಆಗಿರುವ ಲಸಿಕೆ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ ಎಂದು ಆಲ್ಬರ್ಟ್ ಬೌರ್ಲಾ ಸಲಹೆ ನೀಡಿದ್ದಾರೆ.

ಫೈಜರ್ ಸಂಸ್ಥೆಯ ಲಸಿಕೆ ಶೇ.91ರಷ್ಟು ಪರಿಣಾಮಕಾರಿ

ಫೈಜರ್ ಸಂಸ್ಥೆಯ ಲಸಿಕೆ ಶೇ.91ರಷ್ಟು ಪರಿಣಾಮಕಾರಿ

ಏಪ್ರಿಲ್ ತಿಂಗಳಿನಲ್ಲಿ ಫೈಜರ್ ಮತ್ತು ಜರ್ಮನಿ ಪಾಲುದಾರ ಬಯೋಎನ್ ಟೆಕ್ ಸಂಸ್ಥೆಯು ತಮ್ಮ ಲಸಿಕೆಯು ಜಗತ್ತಿನಲ್ಲೇ ಅತಿಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿತ್ತು. ಇತ್ತೀಚಿಗೆ ನಡೆಸಿದ ವೈದ್ಯಕೀಯ ಪ್ರಯೋಗದಲ್ಲಿ ಫೈಜರ್ ಸಂಸ್ಥೆಯ ಲಸಿಕೆಯ ಎರಡನೇ ಡೋಸ್ ಪಡೆದ 6 ತಿಂಗಳವರೆಗೂ ಶೇ.91ರಷ್ಟು ಪ್ರಭಾವವನ್ನು ಹೊಂದಿರುತ್ತದೆ. ಕಳೆದ ಆರು ತಿಂಗಳ ದತ್ತಾಂಶಗಳಿಂದ ಲಸಿಕೆಯು ಅತ್ತುತ್ತಮ ಶಕ್ತಿಯನ್ನು ಹೊಂದಿದೆ. ಕಾಲ ಕಳೆದಂತೆ ಲಸಿಕೆಯ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ತಿಳಿದು ಬಂದಿದೆ.

ಕೊರೊನಾ ಲಸಿಕೆ ವಾರೆಂಟಿ 9 ತಿಂಗಳು

ಕೊರೊನಾ ಲಸಿಕೆ ವಾರೆಂಟಿ 9 ತಿಂಗಳು

ಕೊರೊನಾವೈರಸ್ ಲಸಿಕೆ ಪಡೆದ ನಂತರದಲ್ಲಿ 9 ತಿಂಗಳವರೆಗೂ ಲಸಿಕೆಯು ಕೆಲಸ ಮಾಡುತ್ತದೆ ಎಂದು ಆಹಾರ ಮತ್ತು ಔಷಧೀಯ ಆಡಳಿತ ಕೇಂದ್ರದ ನಿರ್ದೇಶಕ ಪೀಟರ್ ಮಾರ್ಕ್ಸ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ನಾವು ಸ್ಪಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ. ಕೆಲವು ಬಾರಿ ಲಸಿಕೆಯು 9 ತಿಂಗಳು, ಒಂದು ವರ್ಷದವರೆಗೂ ಕೆಲಸ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಬಗ್ಗೆ ಮಾಹಿತಿ

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಬಗ್ಗೆ ಮಾಹಿತಿ

ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 90 ದಿನಗಳಲ್ಲಿ 11.70 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಗುರುವಾರ ಒಂದೇ ದಿನ 26,02,375 ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 20,59,873 ಫಲಾನುಭವಿಗಳಿಗೆ ಮೊದಲ ಡೋಸ್, 5,42,502 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ 11,70,96,037 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ.

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ಕಳೆದ 24 ಗಂಟೆಗಳಲ್ಲಿ 2,17,353 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಒಂದು ದಿನದಲ್ಲಿ 1185 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,74,308ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1,18,302 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,25,47,866 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು 1,42,91,917 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ 15,69,743 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣ

ವಿಶ್ವದಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣ

ವಿಶ್ವದಲ್ಲಿ ಒಂದೇ ದಿನ ಒಟ್ಟು 8,36,294 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಜಗತ್ತಿನಾದ್ಯಂತ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 13,96,65,916ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 13839 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 29,98,843ಕ್ಕೆ ಏರಿಕೆಯಾಗಿದೆ. ಈವರೆಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿಗೆ ನೀಡಿದ ಚಿಕಿತ್ಸೆಯಿಂದಾಗಿ ಒಟ್ಟು 11,87,52,504 ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ 1,79,14,569 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ.

Recommended Video

ಇಂದಿನ ಪಂದ್ಯದಲ್ಲಿ ಧೋನಿ ಏನ್ಮಾಡ್ಬೇಕು ಅನ್ನೋದನ್ನ ತಿಳಿಸಿದ ಗಂಭೀರ್ | Oneindia Kannada

English summary
Third Dose Of COVID-19 Vaccine 'Likely' Needed Within 1 Year, Says Pfizer CEO. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X