ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಷ್ಠ 36 ಐಎಸ್ ಉಗ್ರರ ಹೆಣ ಕೆಡವಿದ ಅಮೆರಿಕ ಬಾಂಬ್

ಅಫ್ಘಾನಿಸ್ತಾನದಲ್ಲಿ ಬುಧವಾರ ಅಮೆರಿಕ ಹಾಕಿದ ಬಾಂಬ್ ಗೆ ಕನಿಷ್ಠ 36 ಇಸ್ಲಾಮಿಕ್ ಸ್ಟೇಟ್ ನ ಉಗ್ರರು ಬಲಿಯಾಗಿದ್ದಾರೆ. ಯಾವುದೇ ನಾಗರಿಕರಿಗೆ ಗಾಯಗಳಾಗಿಲ್ಲ ಎಂದು ಮೂಲಗಳು ಖಾತ್ರಿ ಪಡಿಸಿವೆ

|
Google Oneindia Kannada News

ಜಲಾಲಬಾದ್, ಏಪ್ರಿಲ್ 14: ಸುರಂಗದಲ್ಲಿ ಅಡಗಿದ್ದ ಐಎಸ್ ಐಎಸ್ ಗುಂಪಿನ ಕನಿಷ್ಠ 36 ಉಗ್ರರನ್ನು ಅಮೆರಿಕದ ಬಾಂಬ್ ಬಲಿ ತೆಗೆದುಕೊಂಡಿದೆ ಎಂದು ಅಫ್ಘನ್ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದು, ಯಾವುದೇ ನಾಗರಿಕರಿಗೆ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಜಿಬಿಯು-43 ಬಾಂಬ್ ಅನ್ನು ಅಮೆರಿಕ ಸೇನೆ ನಂಗರ್ ಹಾರ್ ಪ್ರಾಂತ್ಯದಲ್ಲಿ ಗುರುವಾರ ಹಾಕಿತ್ತು.

ಬಾಂಬ್ ನಿಂದ ಆಳದ ಸುರಂಗಗಳಲ್ಲಿ ಅಡಗಿಕೊಂಡಿದ್ದ ಮೂವತ್ತಾರು ಐಎಸ್ ಉಗ್ರರನ್ನು ಕೊಲ್ಲಲಾಗಿದೆ. ಎಂದು ರಕ್ಷಣಾ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.[ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು]

36 ISIS Terrorists Killed After US Dropped Largest Non-Nuclear Bomb

ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಅಫ್ಘನ್ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ದೊಡ್ಡ ಬಾಂಬ್ ಅನ್ನು ಎಂಸಿ-130 ವಿಮಾನದ ಮೂಲಕ ಹಾಕಲಾಯಿತು. "ಅಣು ಬಾಂಬ್ ಅಲ್ಲದ ಅತ್ಯಂತ ಪ್ರಭಾವಶಾಲಿ ಬಾಂಬ್ ಇದು" ಎಂದು ವಾಯು ಸೇನೆ ವಕ್ತಾರ ಕರ್ನಲ್ ಪ್ಯಾಟ್ ರೈಡರ್ ತಿಳಿಸಿದ್ದಾರೆ.[ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?]

"ಇದು ತುಂಬ ದೊಡ್ಡ ಸ್ಫೋಟ. ಆ ಪ್ರದೇಶದ ಸುತ್ತ ಭಾರೀ ಬೆಂಕಿ ಹಾಗೂ ಹೊಗೆ ತುಂಬಿಕೊಂಡಿತ್ತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಗಾಯಾಳುಗಳ ಬಗ್ಗೆ ಮಾಹಿತಿಯಿಲ್ಲ. ಆದರೆ ಐಎಸ್ ಐಎಸ್ ಪ್ರಾಬಲ್ಯ ಹೊಂದಿತ್ತು. ಹಲವು ಉಗ್ರರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ" ಎಂದು ತಿಳಿಸಲಾಗಿದೆ

English summary
The US military's largest non-nuclear bomb killed at least 36 militants as it decimated a deep tunnel complex of the ISIS group, Afghan officials said Friday, ruling out any civilian casualties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X