• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಂಗ್ಲಾದ ಇಸ್ಕಾನ್ ಆಶ್ರಮದಲ್ಲಿ 31 ಮಂದಿಗೆ ಕೊರೊನಾ ಪಾಸಿಟಿವ್

|

ಢಾಕಾ, ಏಪ್ರಿಲ್ 27: ಬಾಂಗ್ಲಾದೇಶದಲ್ಲಿರುವ ಇಸ್ಕಾನ್ ಆಶ್ರಮದ 31 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಅವರನ್ನು ಆಶ್ರಮದಲ್ಲೇ ಲಾಕ್‌ಡೌನ್ ಮಾಡಲಾಗಿದೆ.

ಹೀಗಾಗಿ ಆಶ್ರಮವನ್ನೇ ಲಾಕ್‌ಡೌನ್ ಮಾಡ ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆವಹಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇದುವರೆಗೆ 5 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 140 ಮಂದಿ ಮೃತಪಟ್ಟಿದ್ದಾರೆ.

ಇಸ್ಕಾನ್ ಆಶ್ರಮದ 31 ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಶ್ರಮವು ಸ್ವಾಮಿಭಾಗ್ ಪ್ರದೇಶದಲ್ಲಿದೆ.ಸೋಂಕಿತರನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ. ಆಶ್ರಮ, ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ ಮೊದಲ ಸೋಂಕಿತ ಪ್ರಕರಣ ಮಾರ್ಚ್ 8ರಂದು ವರದಿಯಾಗಿತ್ತು. ಅಂದೇ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ ಆಶ್ರಮದೊಳಗೆ 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಆದರೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರೂ ಕೂಡ ಇಷ್ಟೊಂದು ಮಂದಿ ಹೇಗೆ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

English summary
The ISKCON temple here in the Bangladeshi capital has reported 31 coronavirus cases, following which the authorities locked down the building to prevent the spread of the deadly virus, according to media reports on Sunday. Bangladesh has reported nearly 5,000 COVID-19 cases and 140 deaths due to the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X